ಚೇವಾರು ಶ್ರೀ ಶಾರದಾ ಎ.ಯು.ಪಿ.ಶಾಲೆಯಲ್ಲಿ, ಗಣಿತೋತ್ಸವದ ಅಂಗವಾಗಿ, ಗಣಿತ ಶಿಬಿರ ಹಾಗೂ ಮೆಟ್ರಿಕ್ ಮೇಳ ಇತ್ತೀಚೆಗೆ
ಜರಗಿತು.ಶಿಬಿರವನ್ನು ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷರಾದ ಪರಮೇಶ್ವರ ಪಾವಲುಕೋಡಿ ಉದ್ಘಾಟಿಸಿ,ಗಣಿತದಲ್ಲಿ
ಆಸಕ್ತಿ ಬೆಳೆಸಲು ಇಂತಹ ಶಿಬಿರಗಳು ಸಹಕಾರಿ ಎಂದು ಅಭಿಪ್ರಾಯಪಟ್ಟರು.ಅಧ್ಯಕ್ಷ ಸ್ಥಾನವನ್ನು
ವಹಿಸಿ ಮಾತನಾಡಿದ ಮುಖ್ಯ ಶಿಕ್ಷಕ ಶ್ಯಾಮ ಭಟ್,ಶಿಬಿರದ ಮಹತ್ವವನ್ನು ವಿವರಿಸಿದರು.ಹಿರಿಯ
ಅಧ್ಯಾಪಿಕೆ ಸರಸ್ವತಿ,ಗಣಿತವು ಮಾನವನ ಮಾನಸಿಕ ಕ್ರಿಯೆಗಳಾದ ವಿಚಾರ,ತರ್ಕ,ಅನುಮಾನ,ಏಕಾಗ್ರತೆ
ಮುಂತಾದವುಗಳನ್ನುನಿರೂಪಿಸುವ ವ್ಯವಸ್ಥಿತ ಶಾಸ್ತ್ರವಾಗಿದ್ದು,ವಿದ್ಯಾರ್ಥಿಗಳು ಇದರಲ್ಲಿ ಆಸಕ್ತಿ
ಬೆಳೆಸಬೇಕೆಂದು ಕರೆ ಕೊಟ್ಟರು.ಸ್ಟಾಫ್ ಕಾರ್ಯದರ್ಶಿ ವಿನೋದ್,ವಿದ್ಯಾರ್ಥಿಗಳು ತಯಾರಿಸಿದ ‘ಗಣಿತ ಚಿಗುರು’ ಎಂಬ ಹಸ್ತ ಪತ್ರಿಕೆಯನ್ನು
ಬಿಡುಗಡೆಗೊಳಿಸಿದರು.ಶಿಬಿರದಲ್ಲಿ ಬ್ಯಾಜ್ ತಯಾರಿ,ಗಣಿತ ಮಾದರಿಗಳ ನಿರ್ಮಾಣ,ವಸ್ತುಗಳನ್ನು
ನಿಖರವಾಗಿ ಅಳೆಯುವ ವಿಧಾನ,ಸಂಖ್ಯಾ ಆಟ,ಗಣಿತ ಉತ್ಪನ್ನಗಳ ಪ್ರದರ್ಶನ,ಒರಿಗಾಮಿ,ಟ್ಯಾನ್ ಗ್ರಾಮ್
ನಿರ್ಮಾಣ,ಗಣಿತ ಶಾಸ್ತ್ರಜ್ಞರ ಪರಿಚಯ, ಮುಂತಾದ ಚಟುವಟಿಕೆಗಳನ್ನು ನೆರವೇರಿಸಲಾಯಿತು.ಅಧ್ಯಾಪಿಕೆ
ರಾಜೇಶ್ವರಿ ಸ್ವಾಗತಿಸಿದರು.ರವಿಕುಮಾರ್ ವಂದಿಸಿದರು.ಪ್ರಮೀಳಾ,ಪ್ರಸಾದ್ ರೈ,ಪುಷ್ಪಲತಾ, ವಿಜಯನ್
ಸಹಕರಿಸಿದರು.
No comments:
Post a Comment