ಗಣಿತೋತ್ಸವ-2014-15
ಒಂದು ದಿನದ ಪೊಸಡಿ ಗುಂಪೆ ಪ್ರವಾಸ
ಗಣಿತೋತ್ಸವ-2014-15ರ
ಅಂಗವಾಗಿ ತಾರೀಕು 04-02-2015ರಂದು ಬಯಲು ಪ್ರವಾಸದ ಅಂಗವಾಗಿ ಪೊಸಡಿ ಗುಂಪೆಗೆ ಪ್ರವಾಸವನ್ನು
ಹಮ್ಮಿಕೊಳ್ಳಲಾಯಿತು.ಬೆಳಿಗ್ಗೆ 9.45ಕ್ಕೆ ನಡೆದ ಶಾಲಾ ಎಸೆಂಬ್ಲಿಯಲ್ಲಿ ಶಾಲಾ
ಮುಖ್ಯೋಪಾಧ್ಯಾಯರಾದ ಶ್ಯಾಮ ಭಟ್ ಶುಭ ಹಾರೈಸಿದರು.ಹಿರಿಯ ಅಧ್ಯಾಪಕ ವಿನೋದ್ ಚೇವಾರು
ನೇತೃತ್ವದಲ್ಲಿ 4ನೇ ತರಗತಿಯಿಂದ 7ನೇ ತರಗತಿವರೆಗಿನ ಎಲ್ಲಾ ವಿದ್ಯಾರ್ಥಿ, ವಿದ್ಯಾರ್ಥಿನಿಯರನ್ನು
ವಿವಿಧ ಗುಂಪುಗಳಾಗಿಮಾಡಿ,ಪ್ರತಿ ಗುಂಪಿಗೆ ನಾಯಕರನ್ನು ನೇಮಿಸಲಾಯಿತು.ಶ್ರೀಮತಿ ಸರಸ್ವತಿ, ಶ್ರೀಮತಿ
ರಾಜೇಶ್ವರಿ,ರವಿಕು ಮಾರ್, , ಶ್ರೀಮತಿ ಪುಷ್ಪಲತಾ, ಪ್ರಸಾದ್ ರೈ ಅಧ್ಯಾಪಕ ಅಧ್ಯಾಪಿಕೆಯರು ವಿವಿಧ
ಗುಂಪುಗಳ ಜವಾಬ್ದಾರಿ ವಹಿಸಿಕೊಂಡರು.
ಪ್ರತಿ ಗಂಪಿನವರು,ತಮ್ಮ
ಗುಂಪಿನ ಸದಸ್ಯರಿಗೆ ಚಹಾ,ಅನ್ನ,ಪದಾರ್ಥಗಳನ್ನು ತಯಾರಿಸಲು ಬೇಕಾದ ವಸ್ತುಗಳನ್ನು ಅಳತೆ ಪ್ರಕಾರ
ಅಳೆದು ಹಂಚಿಕೊಂಡರು.ತದ ನಂತರ ಬೇಕಾದ ಪಾತ್ರೆ,ತಟ್ಟೆ,ಅಕ್ಕಿ, ತರಕಾರಿ,ಹಾಲು,ಚಾ ಹುಡಿ,ಮೊಸರು,ಸಕ್ಕರೆ,ಬಿಸ್ಕೇಟ್,ಎಣ್ಣೆ,ಸಾಂಬಾರು
ಹುಡಿ,ಸಾಸಿವೆ ಹಾಗೂಇತರ ಅಗತ್ಯ ವಸ್ತುಗಳನ್ನು ಅಳತೆ ಪ್ರಕಾರ ಹಂಚಿಕೊಂಡರು.ಸಾಲಾಗಿ ಗುಂಪೆಯ
ತಪ್ಪಲಿಗೆ ತಲುಪಿದರು.ದಾರಿಯಲ್ಲಿ ಕಂಡಂತಹ ವಿವಿಧ ಸಸ್ಯ ಪ್ರಭೇದಗಳನ್ನು
ಪರಿಚಯಿಸಿಕೊಳ್ಳುವುದರೊಂದಿಗೆ ಗಣಿತ ಆಕೃತಿಗಳನ್ನು ಗುರುತಿಸಲಾಯಿತು.ಗುಂಪೆಯ ಆಯಕಟ್ಟಿನ ಪ್ರದೇಶಕ್ಕೆ
ತಲುಪಿದಾಗ,ಅಡುಗೆ ತಯಾರಿಸಲು ಸೂಕ್ತವಾದ ಸ್ಥಳವನ್ನು ಆಯ್ಕೆ ಮಾಡಲಾಯಿತು.ವಿದ್ಯಾರ್ಥಿಗಳು ಸ್ವತಹ
ಸರಿಯಾದ ಅಳತೆಯಲ್ಲಿ ಪಾತ್ರೆಗಳ ಹಿಡಿವಿಗೆ ಅನುಸಾರ ಒಲೆಗಳನ್ನು ಹಾಕಿದರು.ಪ್ರತಿ ಗುಂಪಿನವರು
ಎರಡೆರಡು ಒಲೆಗಳನ್ನು ಹಾಕಿ ಚಹಾ ತಯಾರಿಸಿದರು.ವಸ್ತುಗಳನ್ನು ಸೂಕ್ತ ನಿಷ್ಪತ್ತಿಯಲ್ಲಿ
ಉಪಯೋಗಿಸಿದರು.ಯಾವ ಗುಂಪಿನವರ ಚಹಾ ಉತ್ತಮ ಎಂದು ಮಕ್ಕಳೇ ನಿರ್ಧರಿಸಿದರು.ಕಾರಣವನ್ನು
ಕಂಡುಹಿಡಿದು ಚರ್ಚಿಸಿದರು.ನಂತರ ಗುಂಪೆಯ ತುತ್ತ ತುದಿಗೆ ಏರಲಾಯಿತು.ಇಡೀ ಊರನ್ನೇ ವೀಕ್ಷಿಸಿ ಖುಶಿಪಟ್ಟರು.ನಂತರ
ಕೆಳಗಿಳಿದು ಗಂಜಿ ಊಟ,ಸಾಂಬಾರ್,ಪಲ್ಯ ತಯಾರಿಸಿದರು.ಗಣಿತದ ಆವಶ್ಯಕತೆಯನ್ನು ಪ್ರತಿ ಹಂತದಲ್ಲೂ
ಕಂಡು ಕೊಂಡರು. ಇಲ್ಲೂ ಯಾವ ಗುಂಪಿನವರಊಟ
ಚೆನ್ನಾಗಿ ಆಯಿತೆಂದು ಕಂಡುಕೊಂಡರು. ಊಟವಾದ ನಂತರ ಸಾಂಸ್ಕೃತಿಕ ಕಾರ್ಯಕ್ರಮ.ನಂತರ ಶಾಲೆಗೆ
4ಗಂಟೆಗೆ ತಲುಪಲಾಯಿತು.
No comments:
Post a Comment