ಜುಲೈ-1,ರಾಷ್ಟ್ರೀಯ ವೈದ್ಯರ ದಿನ
ಖ್ಯಾತ ವೈದ್ಯ ಹಾಗೂ ಅಪ್ರತಿಮ ದೇಶ ಭಕ್ತ ರಾದ ಬಿ.ಸಿ.ರಾಯ್ ಅವರ ಜನ್ಮ ದಿನವಾದ ಜುಲೈ-1
ನ್ನು ರಾಷ್ಟ್ರೀಯ ವೈದ್ಯರ ದಿನವನ್ನಾಗಿ ಆಚರಿಸಲಾಗುತ್ತಿದೆ.ಅವರು 1882ರ ಜುಲೈ-1ರಂದು ಪಶ್ಚಿಮ
ಬಂಗಾಳದಲ್ಲಿ ಹುಟ್ಟಿದರು.ಇವರು ಭಾರತೀಯ ವೈದ್ಯ ಸಂಘದ ಸ್ಥಾಪಕರು. ಪಶ್ಚಿಮ ಬಂಗಾಳದ ಮುಖ್ಯಮಂತ್ರಿಯೂ
ಆಗಿದ್ದ ಇವರು,ಬಡವರ ಬಂಧುವಾಗಿದ್ದರು.
ವೈದ್ಯರು ನಮ್ಮ ಕುಟುಂಬದ ಆಪ್ತ ಸಲಹೆಗಾರರು.ತಮ್ಮ ಜೀವನವನ್ನು ಇನ್ನೊಬ್ಬರಿಗಾಗಿ
ಮುಡಿಪಾಗಿಟ್ಟವರು.ದಿನದ 24 ಗಂಟೆಯೂ ದುಡಿಯುವವರು.ಸಮಾಜದ ಆರೋಗ್ಯವನ್ನು ಕಾಪಾಡುವ ವೈದ್ಯರಿಗೆ
ನಮ್ಮ ಅಭಿನಂದನೆಗಳು