ಜೂನ್ 5-ವಿಶ್ವ ಪರಿಸರ ದಿನ
ನಮ್ಮ ಸುತ್ತು ಮುತ್ತಲಿರುವ ನೆಲ,ಜಲ,ವಾತಾವರಣ,ಸಸ್ಯಗಳನ್ನಂಲ್ಲಾ ಒಟ್ಟಾಗಿ ಪರಿಸರ
ಎನ್ನುತ್ತೇವೆ.ಭೂಮಿಯ ಮೇಲಿರುವ ಜೀವಿಗಳು ಜೀವಿಸಬೇಕಾದರೆ,ಉತ್ತಮ ಪರಿಸರದ ಅಗತ್ಯವಿದೆ.ಪರಿಸರ
ಸಂರಕ್ಷಣೆ ಬಗ್ಗೆ ಜಾಗೃತಿ ಮೂಡಿಸುವ ಸಲುವಾಗಿ,ಯುಕ್ತ ರಾಷ್ಟ್ರ ಸಂಘದ ನೇತೃತ್ವದಲ್ಲಿ
ಜಗತ್ತಿನಾದ್ಯಂತ ಜೂನ್ 5 ನ್ನು ವಿಶ್ವ ಪರಿಸರ ದಿನವನ್ನಾಗಿ ಆಚರಿಸಲಾಗುತ್ತಿದೆ.
ಸುಸ್ಥಿರ ಜೀವನ ಶೈಲಿಗಾಗಿ ಪರಿಸರ,ಎಂಬ ತತ್ವದೊಂದಿಗೆ ಈ ವರ್ಷದ ಪರಿಸರ ದಿನವನ್ನು ಆಚರಿಸಲು
ವಿಶ್ವ ಸಂಸ್ಥೆ ನಿರ್ಧರಿಸಿದೆ. ಸುಸ್ಥಿರ ಜೀವನ ಶೈಲಿ ಎಂದರೆ,ಮುಂದಿನ
ತಲೆಮಾರಿಗೆ,ಸಂಪನ್ಮೂಲಗಳನ್ನು ಉಳಿಸುವುದಕ್ಕಾಗಿ ಈಗ ಹಿತ ಮಿತವಾಗಿ ಬಳಸುವುದಾಗಿದೆ.ಹಂಚಿಕೊಂಡು
ಬದುಕುವುದು ನಮ್ಮ ಧ್ಯೇಯವಾಗಬೇಕಾಗಿದೆ.
ನಮಾಮ ಪರಿಸರವನ್ನು ಉಳಿಸಿ ಬೆಳೆಸಬೇಕಾದುದು ನಮ್ಮೆಲ್ಲರ ಕರ್ತವ್ಯವಾಗಿದೆ.ಸಸ್ಯಗಳನ್ನು
ಬೆಳೆಸಿ ಮಾಲಿನ್ಯವನ್ನು ಕಡಿಮೆಮಾಡಬೇಕು.ಹಸಿರೇ ನಮ್ಮ ಉಸಿರಾಗ ಬೇಕು.ಪರಿಸರವನ್ನು
ಉಳಿಸಿಬೆಳೆಸಿದರೆ ಮಾತ್ರ ಜೀವ ಸಂಕುಲದ ಅಭಿವೃದ್ಧಿ ಸಾಧ್ಯ.
No comments:
Post a Comment