ಜೂನ್ 27-ಹೆಲೆನ್ ಕೆಲ್ಲರ್ ಜನ್ಮ ದಿನ
ಹೆಲೆನ್ ಕೆಲ್ಲರ್ 1880ರ ಜೂನ್ 27ರಂದು ಅಬಾಮ ಎಂಬಲ್ಲಿ ಜನಿಸಿದರು.ಹುಟ್ಟಿ 19 ತಿಂಗಳಾದಾಗ
ಅವಳಿಗೆ ವಿಚಿತ್ರವಾದ ರೋಗ ತಗಲಿ ಶಾಶ್ವತವಾದ ಕಿವುಡುತನ ಉಂಟಾಯಿತು.ಮನೆಯ ಅಡುಗೆ ತಯಾರಕರ
ಮಗಳಂದಿಗೆ ಕೆಲವೊಂದು ಸನ್ನೆಯ ಮೂಲಕ ವ್ಯವಹರಿಸ ತೋಡಗಿದಳು.7 ವರ್ಷ ಪ್ರಾಯವಾದಾಗ ಸುಮಾರು 60ರಷ್ಟು
ಸಂಜ್ಞೆಗಳ ಮೂಲಕ ಸಂಬಂಧಿಕರೊಂದಿಗೆ ಸಂವಹನ ನಡೆಸಲು ಶಕ್ತಳಾದಳು.1886ರಲ್ಲಿ ಅವಳ ತಾಯಿ ಅಮೇರಿಕನ್
ನೋಟ್ಸ್ ಎಂಬ ಪುಸ್ತಕದ ಮೂಲಕ ಕಿವುಡರಿಗೆ ಕಲಿಸುವ ವಿಧಾನ ತಿಳಿದುಕೊಂಡು ಮಗಳಿಗೆ ಕಲಿಸಿದಳು.20ನೇ
ವಯಸ್ಸಿನಲ್ಲಿ ಬ್ರೈಲ್ ಲಿಪಿ ಕಲಿತಳು.ತನ್ನ ಛಲದಿಂದ ಕಲಿತು ಡಿಗ್ರಿಯನ್ನು ಪಡೆದಳು.ಅಸಹಾಯಕರ
ಪರವಾಗಿ,ಅವರ ನ್ಯಾಯಯುತ ಹಕ್ಕುಗಳಿಗಾಗಿ ಹೋರಾಡಿದಳು.ಅನೇಕ ಪುಸ್ತಕಗಳನ್ನು ಬರೆದಳು.39ಕ್ಕಿಂತಲೂ
ಹೆಚ್ಚಿನ ದೇಶಗಳಿಗೆ ಭೇಟಿ ಕೊಟ್ಟಳು.ಅನೇಕ ಅಂಗವಿಕಲರಿಗೆ ಸ್ಪೂರ್ತಿಯಾದರು.ಸಾಮಾಜಿಕ ವಿಷಯದ
ಕುರಿತು 12 ರಷ್ಟು ಪುಸ್ತಕಗಳನ್ನು,ಅನೇಕ ಲೇಖನಗಳನ್ನು ಬರೆದರು.
1968ರ ಜೂನ್ 1ರಂದು ವಿಧಿವಶ ರಾದರು.
No comments:
Post a Comment