ಚೇವಾರಿನಲ್ಲಿ ವಿಶ್ವ ಪರಿಸರ ದಿನಾಚರಣೆ
ಚೇವಾರು ಶ್ರೀ ಶಾರದಾ ಎ.ಯು.ಪಿ.ಶಾಲೆಯಲ್ಲಿ ವಿಶ್ವ ಪರಿಸರದಿನದ ಅಂಗವಾಗಿ ವಿವಿಧ
ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಯಿತು. ಸಭಾಕಾರ್ಯಕ್ರಮವನ್ನು ಪೈವಳಿಕೆ ಪಂಚಾಯತು ಸದಸ್ಯೆ
ಸುಬೈದಾ ಯಂ.ಪಿ.ಉದ್ಘಾಟಿಸಿದರು.ಭೂಮಿಯ ಮೇಲಿನ ಜೀವ ಸಂಕುಲದ ಉಳಿವಿಗೆ ಉತ್ತಮ ಪರಿಸರದ
ಆವಶ್ಯಕತೆಯಿದೆ.ಮುಂದಿನ ತಲೆಮಾರಿಗಾಗಿ,ಪ್ರಕೃತಿ ಸಂಪತ್ತನ್ನು ಉಳಿಸಿ ಬೆಳೆಸುವ ಮನೋಭಾವವನ್ನು
ಎಳವೆಯಲ್ಲಿಯೇ ಬೆಳೆಸಬೇಕೆಂದು ಕರೆ ಕೊಟ್ಟರು. ಅಧ್ಯಕ್ಷ ಸ್ಥಾನ ವಹಿಸಿ ಮಾತನಾಡಿದ ಶಾಲಾ ಮುಖ್ಯ
ಶಿಕ್ಷಕ ಶ್ಯಾಮ ಭಟ್,ನಮ್ಮ ಪರಿಸರವನ್ನು ಉಳಿಸಿ ಬೆಳೆಸುವ ಜವಾಬ್ದಾರಿ ನಮ್ಮೆಲ್ಲರದ್ದು,ಒಂದು ಮರ
ಕಡಿದಲ್ಲಿ ಹತ್ತು ಗಿಡಗಳನ್ನು ನೆಟ್ಟು ಬೆಳೆಸಬೇಕು,ಆಗ ಮಾತ್ರ ಜೀವ ಸಂಕುಲದ ಅಭಿವೃದ್ಧಿ ಸಾಧ್ಯ
ಎಂದು ಅಭಿಪ್ರಾಯಪಟ್ಟರು.ಈ ಸಂದರ್ಭದಲ್ಲಿ ಎಲ್ಲಾ ವಿದ್ಯಾರ್ಥಿಗಳಿಗೂ ಗಿಡಗಳನ್ನು
ವಿತರಿಸಲಾಯಿತು.ರವಿ ಕುಮಾರ್ ಗಿಡಗಳನ್ನು ನೆಟ್ಟು ಬೆಳೆಸುವ ಕುರಿತಾದ ಮಾಹಿತಿ
ನೀಡಿದರು.ವಿಜಯನ್,ಪ್ರಮೀಳಾ,ಪ್ರಸಾದ್ ರೈ ಉಪಸ್ಥಿತರಿದ್ದರು.ಪರಿಸರ ಕುರಿತಾದ ರಸಪ್ರಶ್ನೆ
ಸ್ಪರ್ಧೆ ಏರ್ಪಡಿಸಲಾಯಿತು. ಪ್ರಬಂಧಗಳನ್ನು ಮಂಡಿಸಲಾಯಿತು.ಜ್ಯೋತಿಕಾ ಸ್ವಾಗತಿಸಿದಳು.ಮಹಮ್ಮದ್
ನಿಶಾದ್ ವಂದಿಸಿದನು.
No comments:
Post a Comment