ವಾಚನಾ ವಾರದ ಸಮಾರೋಪ
ವಾಚನಾ ಸಪ್ತಾಹದ ಸಮಾರೋಪ
ಪಿ.ಎನ್.ಪಣಿಕ್ಕರ್ ರವರ ಸ್ಮರಣಾರ್ಥ ನಡೆದ ಓದುವ ವಾರಾಚರಣೆಯ ಸಮಾರೋಪ ಸಮಾರಂಭ
26-6-2015ರಂದು ಶಾಲಾ ಸಭಾಂಗಣದಲ್ಲಿ ಜರಗಿತು.ಸಭೆಯ ಅಧ್ಯಕ್ಷತೆಯನ್ನು ಶಾಲಾ ವುಖ್ಯ ಶಿಕ್ಷಕ
ಶ್ಯಾಮ ಭಟ್ ವಹಿಸಿದರು.ವಾರ್ಡ್ ಸದಸ್ಯೆ ಸುಬೈದಾ ಕಾರ್ಯಕ್ರಮ ಉದ್ಘಾಟಿಸಿ,ನಮ್ಮಲ್ಲಿ ಶಾಶ್ವತವಾಗಿ
ಉಳಿಯುವ ಸಂಪತ್ತು ಎಂದರೆ ಜ್ಞಾನ.ಅದನ್ನು ಪುಸ್ತಕಗಳನ್ನು ಓದುವ ಮೂಲಕ ಪಡೆಯಬಹುದೆಂದು ಅಭಿಪ್ರಾಯ
ಪಟ್ಟರು.ಪಿ.ಟಿ.ಎ.ಅಧ್ಯಕ್ಷೆ ಇಂದಿರಾ ಮಿತ್ತಡ್ಕ,ಮುಖ್ಯಅತಿಥಿಗಳಾಗಿ ಭಾಗವಹಿಸಿ,ಶುಭ
ಹಾರೈಸಿದರು.ಸ್ಟಾಫ್ ಕಾರ್ಯದರ್ಶಿ ವಿನೋದ್ ಮಹತ್ವವನ್ನು ವಿವರಿಸಿದರು.
ವಾಚನಾ ವಾರದ ಅಂಗವಾಗಿ ನಡೆದ ಕವಿತಾ ರಚನೆ,ಕಥಾ ರಚನೆ,ರಸಪ್ರಶ್ನೆ,ಚಿತ್ರ ರಚನೆ,ಪುಸ್ತಕ
ವಿಮರ್ಶೆ,ಮುಂತಾದ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳನ್ನು ಅಭಿನಂದಿಸಲಾಯಿತು.ಮಕ್ಕಳ
ಸ್ವಂತ ರಚನೆಗಳ ಸಂಗ್ರಹ ಗೊಂಚಲು ಮತ್ತು ದೀವಿಗೆ ಎಂಬ ಹಸ್ತ ಪತ್ರಿಕೆಗಳನ್ನು ಬಿಡುಗಡೆ
ಮಾಡಲಾಯಿತು.ವಿದ್ಯಾರ್ಥಿನಿ ಜ್ಯೋತಿಕಾ ಸ್ವಾಗತಿಸಿದಳು.ಸೆವೀರ್ ವಂದಿಸಿದನು.ಶಾಲಾ ನಾಯಕ ನಿಶಾದ್
ಕಾರ್ಯಕ್ರಮ ನಿರೂಪಿಸಿದನು.
No comments:
Post a Comment