ಶಾಲಾ ನಾಯಕನ ಚುನಾವಣೆ 2014-15
ಈ
|
ಶಾಲಾ ವರ್ಷದ ಶಾಲಾ ನಾಯಕನ ಚುನಾವಣೆಯು
ಘೋಷಣೆಯಾಗಿ, ನಾಮಪತ್ರ ಸಲ್ಲಿಸಲು ದಿನ ನಿಗದಿಪಡಿಸಲಾಯಿತು. ನಾಮಪತ್ರ ಹಿಂಪಡೆಯಲೂ ದಿನ
ನಿಗದಿಪಡಿಸಲಾಗಿ,ಅಂತಿಮವಾಗಿ .ಏಳು ಜನ ಅಭ್ಯರ್ಥಿಗಳು ಚುನಾವಣಾಕಣದಲ್ಲಿದ್ದರು. ಎಲ್ಲಾ ಅಭ್ಯರ್ಥಿಗಳಿಗೆ
ಚಿಹ್ನೆಗಳನ್ನು ನೀಡಿ,ಪ್ರಚಾರಕ್ಕೆ ಅನುವು ಮಾಡಿಕೊಡಲಾಯಿತು. ಚುನಾವಣಾ ದಿನದಂದು, 3ನೇ
ತರಗತಿಯಂದ 7ನೇತರಗತಿ ವರೆಗಿನ ಎಲ್ಲಾ ಮತದಾರರು ಸರದಿ ಸಾಲಿನಲ್ಲಿ ನಿತ್ತು ಚುನಾವಣಾಧಿಕಾರಿಗಳಿಂದ,ಮತದಾರರ ಚೀಟಿ ಪಡೆದು,ಎಡಕೈ ನಡು ಬೆರಳ ತುದಿಗೆ ಅಳಿಸಲಾರದ ಶಾಯಿಯನ್ನು
ಹಾಕಿಸಿ,ಚುನಾವಣಾ ಸೀಲನ್ನು ಪಡೆದು,ಗೌಪ್ಯವಾಗಿ ತಮಗಿಷ್ಟವಾದ ಅಭ್ಯರ್ಥಿಗಳಿಗೆ, ಸೀಲನ್ನು ಒತ್ತಿ, ಚೀಟಿಯನ್ನು ಮಡಚಿ ಮತ
ಪೆಟ್ಟಿಗೆಗೆ ಹಾಕಿ ಹೊರ ಬಂದಾಗ,ಚುನಾವಣಾ ವ್ಯವಸ್ಥೆಯ ಕುರಿತಾದ ಜ್ನಾನವನ್ನು ಪಡೆದ ಸಂತೃಪ್ತಿ
ಮಕ್ಕಳ ಮುಖದಲ್ಲಿ,ನಲಿದಾಡುತ್ತಿತ್ತು.ತದನಂತರ ಅಭ್ಯರ್ಥಿಗಳ ಸಮ್ಮುಖದಲ್ಲಿ ನಡೆದ ಮತ ಎಣಿಕೆ ಮಾಡಿ ವಿಜೇತರ ಹೆಸರನ್ನು ಘೋಷಿಸಲಾಯಿತು.
ಶಾಲಾ ನಾಯಕಿಯಾಗಿ 7ನೇ ತರಗತಿಯ ಜೈನಬತ್ ಅಸ್ಮೀನಾ, ದ್ವಿತೀಯ ನಾಯಕ ನಾಗಿ 7ನೇ ತರಗತಿಯ ಆದರ್ಷ ಪಿ.ವಿ,ತೃತೀಯ
ನಾಯಕಿಯಾಗಿ 7ನೇ ತರಗತಿಯ ಬಿಂದು ಬಿ
ಜಯಗಳಿಸಿದರು.ಇವರನ್ನು ಅಭಿನಂದಿಸಲಾಯಿತು.
No comments:
Post a Comment