ಸೆಪ್ಟೆಂಬರ್:28-ವಿಶ್ವ ಕಿವುಡರ ದಿನ
ಪ್ರತಿ ವರ್ಷ ವಿಶ್ವ ಕಿವುಡರ ದಿನವನ್ನು, ಸೆಪ್ಟೆಂಬರ್
ತಿಂಗಳ ಕೊನೆಯ ಆದಿತ್ಯವಾರ ಆಚರಿಸಲಾಗುತ್ತಿದೆ. ವಿಶ್ವ ಕಿವುಡರ ಫೆಡೆರೇಶನ್ 1958ರಲ್ಲಿ ಮೊದಲ
ಬಾರಿಗೆ ಈ ದಿನವನ್ನು ಆಚರಿಸಿತು.ಬಳಿಕ ಸೆಪ್ಟೆಂಬರ್ ತಿಂಗಳ ಕೊನೆಯ ವಾರವನ್ನು ವಿಶ್ವ ಕಿವುಡರ
ವಾರವನ್ನಾಗಿ ಆಚರಿಸಲಾಯಿತು. ಈವರ್ಷ ಸೆಪ್ಟೆಂಬರ್ 28ರಂದು ಈದಿನವನ್ನು ಆಚರಿಸಲಾಗುತ್ತಿದೆ.
1871ರಲ್ಲಿ ಅಮೇರಿಕಾದ ರಿಚರ್ಡ್ ಸೆಮೌರ್ ರೆಡ್ಮಂಡ್
ಜನಿಸಿದರು. ಬಾಲ್ಯದಲ್ಲಿ ಅವರನ್ನು ಆವರಿಸಿದ ಸ್ಕಾರ್ಲೆಟ್ ಜ್ವರ ಅವರನ್ನು ಕಿವುಡರನ್ನಾಗಿ
ಮಾಡಿತು.ಇದರಿಂದ ಧೃತಿಗೆಡದ ಅವರು,ಶಿಕ್ಷಣ ಪಡೆಯಬೇಕೆಂದು ಪಣತೊಟ್ಟರು.ಕುಟುಂಬದ ಹಾಗೂ ಸಮಾಜದ
ಅತ್ಯಪೂರ್ವ ಬೆಂಬಲದೊಂದಿಗೆ ಉನ್ನತ ಶಿಕ್ಷಣ ಪಡೆದರು. ಕ್ಯಾಲಿಫೋರ್ನಿಯದ ಸ್ಕೂಲ್ ಆಫ್ ಆರ್ಟ್
ನಲ್ಲಿ,ಪೈಂಟಿಂಗ್,ಡ್ರಾಯಿಂಗ್ ಕಲಿತರು.ಅವರ ಶ್ರಮ, ಕುಟುಂಬದ ಹಾಗೂ ಸಮಾಜದ ಅತ್ಯಪೂರ್ವ ಬೆಂಬಲದಿಂದ
ಅವರು ಎಲ್ಲರಂತೆ,ಉನ್ನತ ಸ್ಥಾನ ಪಡೆದರು. ಇವರ ನೆನಪಿಗಾಗಿ ಈ ದಿನ ವನ್ನು ಆಚರಿಸಲಾಯಿತು.
ಪ್ರತಿಯೊಬ್ಬನಿಗೂ ಕೇಳುವ ಸಾಮರ್ಥ್ಯ ಜೀವನದಲಿಲು
ಅನಿವಾರ್ಯ.ಕಿವುಡರಲ್ಲಿ,ದುಖ,ಖಿನ್ನತೆ,ಆತಂಕ, ಮತಿವಿಕಲ್ಪಗಳ ಅಪಾಯವಿದೆ. ಕಿವುಡುತನ ಕಾಣಿಸಿಕೊಂಡ
ಕೂಡಲೇ ವೈದ್ಯರಿಂದ ಸೂಕ್ತ ಚಿಕಿತ್ಸೆ ಪಡೆಯಬೇಕು.ಶಬ್ದ ಮಾಲಿನ್ಯವು ಕಿವುಡುತನ
ತರಬಲ್ಲುದು.ಮಕ್ಕಳಲ್ಲಿ,ನಿರಂತರವಾಗಿ ಶೀತ ಬರುವುದರಿಂದ ಮೂಗಿನ ಹಿಂಭಾಗದಲ್ಲಿ ದುಗ್ಧ ಗ್ರಂಥಿ ರಸ
ಸಂಗ್ರಹ ವಾಗುತ್ತದೆ.ಇದು ಮೂಗು ಮತ್ತು ಕಿವಿಯ ಕೊಳವೆಯನ್ನು ನಿರ್ಬಂಧಿಸುತ್ತದೆ.ಇದರಿಂದ
ವ್ಯಾಕ್ಸಿನ್ ಸಂಗ್ರಹವಾಗಿ,ಇದು ಶ್ರವಣ ದೋಷಕ್ಕೆ ಕಾರಣವಾಗುತ್ತದೆ.
No comments:
Post a Comment