ಸೆಪ್ಟೆಂಬರ್:28-ಲೂಯೀಪ್ಯಾಶ್ಚರ್ ಪುಣ್ಯ ದಿನ
ವಿಜ್ಞಾನಿ ಲೂಯೀಪ್ಯಾಶ್ಚರ್ |
ವೈದ್ಯಕೀಯ ಮತ್ತು ರಸಾಯನ ಶಾಸ್ತ್ರಗಳಲ್ಲಿ ಜಗತ್ತಿಗೇ ಉಪಯೋಗವಾಗಬಲ್ಲ ಸಂಶೋಧನೆಗಳನ್ನು
ಮಾಡಿದ ಶ್ರೇಷ್ಠ ವಿಜ್ಞಾನಿ ಲೂಯೀಪ್ಯಾಶ್ಚರ್,1822ರಲ್ಲಿ ಜನಿಸಿದರು.
ಹುಚ್ಚು ನಾಯಿ ಕಡಿತದಿಂದ ಉಂಟಾಗುವ ರೇಬೀಸ್ ಕಾಯಿಲೆಗೆ ಲಸಿಕೆಯನ್ನು ಕಂಡು ಹಿಡಿದವರು
ಇವರು.ಸೀತಾಳೆ ಸಿಡುಬು,ನಂಗಡಿ ರೋಗಕ್ಕೂ ಚುಚ್ಚು ಮದ್ದು ಕಂಡು ಹಿಡಿದರು.ಹಾಲನ್ನು ತುಂಬಾ ಸಮಯ
ಕೆಡದಂತೆ ಇಡುವ ವಿಧಾನವಾದ ಪ್ಯಾಶ್ಚರೀಕರಣ ಇವರ ಆವಿಷ್ಕಾರ.ಸ್ವಲ್ಪ ಶಾಖದಲ್ಲಿ,ಹಾಲನ್ನು
ಕಾಯಿಸುವುದರಿಂದ ಅದರಲ್ಲಿರುವ ಬ್ಯಾಕ್ಟೀರಿಯಾ ನಾಶಹೊಂದುತ್ತವೆ.ಕ್ಷಯರೋಗ ತರಬಲ್ಲ ಬ್ಯಾಕ್ಟೀರಿಯಾ
ನಾಶಹೊಂದುತ್ತವೆ.
ಲೂಯೀಪ್ಯಾಶ್ಚರ್ 1895ರ ಸೆಪ್ಟೆಂಬರ್ 28ರಂದು ನಿಧನರಾದರು.
No comments:
Post a Comment