ರಾಷ್ಟ್ರೀಯ ಕ್ರೀಡಾದಿನ
ಭಾ
|
ರತ ಕಂಡ ಅಪರೂಪದ ಹಾಕಿ ಆಟಗಾರ ಧ್ಯಾನ್ ಚಂದ್ ಅವರ
ಹುಟ್ಟಿದ ದಿನವನ್ನು ರಾಷ್ಟ್ರೀಯ ಕ್ರೀಡಾದಿನವನ್ನಾಗಿ ಆಚರಿಸಲಾಗುತ್ತಿದೆ. ಧ್ಯಾನ್ ಚಂದ್ ರು
1905 ರ ಆಗಸ್ಟ್ 29ರಂದು ಜನಿಸಿದರು.ಇವರಿದ್ದ ಹಾಕಿ ತಂಡ,ಸತತವಾಗಿ ಮೂರು ಬಾರಿ ಒಲಿಂಪಿಕ್ಸ್
ನಲ್ಲಿ ಚಿನ್ನದ ಪದಕ ಗೆದ್ದು ಭಾರತದ ಹಿರಿಮೆಯನ್ನು ಹೆಚ್ಚಿಸಿತು. ಧ್ಯಾನ್ ಚಂದ್
ಅವರಿಗೆ,ಸ್ವಾತಂತ್ರ್ಯಾನಂತರ ಪದ್ಮ ಭೂಷಣ ಪ್ರಶಸ್ತಿ ನೀಡಲಾಯಿತು.ಇವರು 50ಮತ್ತು60ರ
ದಶಕದಲ್ಲಿ,ಭಾರತ ತಂಡಕ್ಕೆ ತ ರಬೇತಿ ನೀಡಿದ್ದರು.1979ರ ಡಿಸೆಂಬರ್ 5 ರಂದು ಅಸ್ತಂಗತರಾದರು.
ರಾಷ್ಟ್ರೀಯ ಕ್ರೀಡಾದಿನದಂದು ಶ್ರೇಷ್ಠ ಆಟಗಾರರಿಗಿರುವ
ರಾಜೀವ್ ಗಾಂಧಿ ಖೇಲ್ ರತ್ನ ಪ್ರಶಸ್ತಿ,ಅರ್ಜುನ ಪ್ರಶಸ್ತಿ,ಏಕಲವ್ಯ ಪ್ರಶಸ್ತಿಗಳನ್ನು
ನೀಡಲಾಗುತ್ತಿದೆ.
ನಾವು ಕೂಡ ಕ್ರೀಡೆಗೆ ಹೆಚ್ಚಿನ ಪ್ರೋತ್ಸಾಹ ನೀಡಿ
ದೇಶವನ್ನು ಕ್ರೀಡಾ ಕ್ಷೇತ್ರದಲ್ಲಿ ಮಿಂಚಿಸೋಣ
No comments:
Post a Comment