ಸೆಪ್ಟಂಬರ್ 16ರಂದು
ವಿಶ್ವ ಓಝೋನ್ ದಿನವನ್ನು ವಿವಿಧ ಕಾರ್ಯಕ್ರಮಗಳೊಂದಿಗೆ ಶಾಲಾ ಸಭಾಂಗಣದಲ್ಲಿ ಆಚರಿಸಲಾಯಿತು.ಶಾಲಾ
ಎಸೆಂಬ್ಲಿಯಲ್ಲಿ ದಿನದ ಮಹತ್ವವನ್ನು ವಿವರಿಸಲಾಯಿತು.
ಓಝೋನ್ ಹಾಗೂ ಬಹ್ಯಾಕಾಶ
ಕುರಿತಾದ ರಸಪ್ರಶ್ನೆ ಸ್ಪರ್ಧೆ ಏರ್ಪಡಿಸಲಾಯಿತು.7ನೇ ತರಗತಿಯ ಕ್ಷಿತೀಶ ಪ್ರಥಮ, 6ನೇ ತರಗತಿಯ
ಅಕ್ಷತಾ ದ್ವಿತೀಯ ಸ್ಥಾನ ಡೆದರು.
ವಿಶ್ವ ಓಝೋನ್ ದಿನದ
ಅಂಗವಾಗಿ ನಡೆಸಲ್ಪಟ್ಟ,ಸಭಾ ಕಾರ್ಯಕ್ರಮದ ಅಧ್ಯಕ್ಷ ಸ್ಥಾನ ವಹಿಸಿರುವ ಹಿರಿಯ ಅಧ್ಯಾಪಕರಾದ ಶ್ರೀ
ಶಂಕರ ನಾರಾಯಣ ಭಟ್,ವಾತಾವರಣವನ್ನು ರಕ್ಷಿಸಲು ನಾವೆಲ್ಲರೂ ಶ್ರಮಿಸಬೇಕೆಂದು ಕರೆಯಿತ್ತರು.ಮುಖ್ಯ
ಅತಿಥಿಗಳಾಗಿ ಭಾಗವಹಿಸಿದ ಅಧ್ಯಾಪಕ ರವಿಕುಮಾರ್,ವಾತಾವರಣದ ವಿವಿಧ ಪದರಗಳ ಚಿತ್ರವನ್ನು
ಪ್ರದರ್ಶಿಸುತ್ತಾ,ವಿವರಿಸಿದರು. ಓಝೋನ್ ಅಂದರೆ ಏನು,ಅದರ ಪ್ರಾಧಾನ್ಯತೆ,ಅದರ ಕ್ಷಯಿಸುವಿಕೆ
ಕುರಿತು ಚಿತ್ರ ಸಹಿತ ವಿವರಿಸಿದರು.
ಇನ್ನೋರ್ವ ಮುಖ್ಯ
ಅತಿಥಿಗಳಾಗಿ ಭಾಗವಹಿಸಿದ ಅಧ್ಯಾಪಕ ಪ್ರಸಾದ್ ರೈ,ಮನುಷ್ಯನ ಅನುಕೂಲತೆಗಾಗಿ,ಪರಿಸರ, ವಾತಾವರಣವನ್ನು,ಹಾಳು
ಮಾಡುತ್ತಿರುವುದು ವಿಷಾದನೀಯ,ಇದನ್ನು ರಕ್ಷಿಸುವುದು ನಮ್ಮ ಕರ್ತವ್ಯ ಎಂದರು.
ವಿದ್ಯಾರ್ಥಿಗಳು ಪ್ರಬಂಧ
ಮಂಡಿಸಿದರು.ಅಸ್ಮೀನಾ ಕಾರ್ಯಕ್ರಮ ನಿರೂಪಿಸಿದರು.ಹಂಸಾನಾ ಸ್ವಾಗತಿಸಿದರು.ವಿದ್ಯಾಶ್ರೀ
ವಂದಿಸಿದರು.
No comments:
Post a Comment