ಸೆಪ್ಟೆಂಬರ್-8 ಶ್ರೀ ನಾರಾಯಣ ಗುರು ಜಯಂತಿ
20ನೇ ಶತಮಾನದ ಪೂರ್ವಾರ್ಧದಲ್ಲಿ ಕೇರಳದಲ್ಲಿ ಜನಿಸಿದ ಮಹಾನ್ ವ್ಯಕ್ತಿ ಶ್ರೀ ನಾರಾಯಣ
ಗುರುಗಳು.ಅಸ್ಪೃಶ್ಯತೆಯನ್ನು ವಿರೋಧಿಸಿದ ಮಹಾನ್ ಸಂತರಿವರು.ದಲಿತ ಸಮುದಾಯಕ್ಕೆ ದೇವಾಲಯ
ಪ್ರವೇಶಕ್ಕೆ ನಿಷೇಧವಿತ್ತು.ಸವರ್ಣೀಯರು ಬಳಸುವ ನೀರಿನ ಮೂಲದಂದ ಇವರು ನೀರನ್ನು ಬಳಸುವಂತಿರಲಿಲ್ಲ.ಅಂಬೇಡ್ಕರ್,ಗಾಂಧೀಜಿಯವರಂತೆ
ಇವರೂ ಕೂಡಾ ಹಿಂದುಳಿದವರ ಅವಕಾಶಗಳಿಗಾಗಿ ಹೋರಾಡಿದರು.ದಲಿತ ಸಮುದಾಯ ಅವರನ್ನು ದೇವರಂತೆ
ಭಾವಿಸಿತು.
ಭಕ್ತರಾಗಿ,ಸಂತರಾಗಿ,ಸರ್ವಜನೋಪಕಾರಿಯಾಗಿ ಬಾಳಿದ ಶ್ರೀ ನಾರಾಯಣ ಗುರುಗಳ ಪ್ರಭಾವ ಕೇರಳದಿಂದ
ಕರ್ನಾಟಕಕ್ಕೂ ಹಬ್ಬಿತು.
No comments:
Post a Comment