ದಸರಾ ನಾಡಹಬ್ಬ- 2014ರ ಆಚರಣೆ
|
ಅಧ್ಯಕ್ಷರ ಭಾಷಣ |
|
ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ |
|
ಜಾನಪದ ಹಾಡು 2ನೇ ತರಗತಿಯ ಚಿನ್ಮಯಿ ಯಿಂದ |
|
ವಂದನಾರ್ಪಣೆ ಶ್ರೀಮತಿ ರಾಜೇಶ್ವರಿಯವರಿಂದ |
ಸ್ವಾಗತ ಭಾಷಣ-ಪ್ರಸಾದ್ ರೈಯವರಿಂದ
|
ವಿದ್ಯಾಧಿಕಾರಿಯವರಿಂದ ಉದ್ಘಾಟನೆ |
|
ವಿವಿಧ ಸ್ಪರ್ಧೆಗಳು |
ಚೇವಾರು: ದಸರಾ ನಾಡಹಬ್ಬ ಆಚರಣೆ
ವಾರು ಶ್ರೀ ಶಾರದಾ ಎ.ಯು.ಪಿ.ಶಾಲೆಯಲ್ಲಿ ದಸರಾ ನಾಡಹಬ್ಬವನ್ನು ವಿವಿಧ ಕಾರ್ಯಕ್ರಮಗಳೊಂದಿಗೆ
ಆಚರಿಸಲಾಯಿತು.
ಕಾರ್ಯಕ್ರಮವನ್ನು ಮಂಜೇಶ್ವರ ಉಪಜಿಲ್ಲಾ ವಿದ್ಯಾಧಿಕಾರಿ ಶ್ರೀ ನಂದಿಕೇಶನ್
ಉದ್ಘಾಟಿಸಿ,ಹಬ್ಬಗಳನ್ನು ಆಚರಿಸುವ ಮೂಲಕ ನಮ್ಮ ಸಂಸ್ಕೃತಿಯನ್ನು ಉಳಿಸಿ,ಬೆಳೆಸಬೇಕೆಂದು ಕರೆಯಿತ್ತರು.ಸಭೆಯ
ಅಧ್ಯಕ್ಷ ಸ್ಥಾನ ವಹಿಸಿ ಮಾತನಾಡಿದ ಶಾಲಾ ಮುಖ್ಯ ಶಿಕ್ಷಕ ಶ್ರೀ ಶ್ಯಾಮ ಭಟ್,ನಾಡ ಹಬ್ಬವನ್ನು
ಶಾಲೆಗಳಲ್ಲಿ ಆಚರಿಸುವುದರಿಂದ ಮಕ್ಕಳು ಸಂಸ್ಕೃತಿಯ ಸಾರ ತಿಳಿಯುವುದರೊಂದಿಗೆ ಉತ್ತಮ ಸಮಾಜ
ನಿರ್ಮಿಸಬಹುದೆಂದು ಅಭಿಪ್ರಾಯ ಪಟ್ಟರು.ನಂತರ ಮಕ್ಕಳಿಗೆ ವಿವಿಧ ಸ್ಪರ್ಧೆಗಳನ್ನು
ಏರ್ಪಡಿಸಲಾಯಿತು.ಜಾನಪದ ಗೀತೆಗಳನ್ನು ಹಾಡಿದರು.ಪ್ರಸಾದ್ ರೈ ಸ್ವಾಗತಿಸಿ,ರಾಜೇಶ್ವರಿ
ವಂದಿಸಿದರು.ರವಿಕುಮಾರ್ ಕಾರ್ಯಕ್ರಮ ನಿರೂಪಿಸಿದರು.
ಹೃತ್ಪೂರ್ವಕ ಅಭಿನಂದನೆಗಳು.
ReplyDelete