ಅಕ್ಟೋಬರ್-1 ರಾಷ್ಚೀಯ ಸ್ವಯಂ ಪ್ರೇರಿತ ರಕ್ತದಾನ ದಿನ
ರಕ್ತಕ್ಕೆ ಮತ್ಯಾವ
ಪರ್ಯಾಯವೂ ಇಲ್ಲ.ಮಾನವ ಮಾತ್ರ ಇನ್ನೊಬ್ಬ ಮಾನವನಿಗೆ ರಕ್ತವನ್ನು ದಾನ ಮಾಡಬಹುದು ಮತ್ತು
ಜೀವವನ್ನು ಉಳಿಸ ಬಹುದು. ಒಮ್ಮೆ ರಕ್ತದಾನ ಮಾಡುವ ಮೂಲಕ 3 ಕ್ಕಿಂತ ಹೆಚ್ಚು ಜನರಿಗೆ ಜೀವ
ನೀಡಬಹುದು.ಒಂದು ಬಾರಿಗೆ,ಕೇವಲ 350ಮಿಲ್ಲಿ ಲೀಟರ್ ರಕ್ತವನ್ನು ಮಾತ್ರ ತೆಗೆದು ಕೊಳ್ಳಲಾಗುವುದು.
ಈ ರಕ್ತವು 24 ಗಂಟೆಯೊಳಗೆ ಪುನಶ್ಚೇತನ ಗೊಳ್ಳುತ್ತದೆ. ಪುರುಷರು 3 ತಿಂಗಳಿಗೊಮ್ಮೆ ಹಾಗೂ
ಮಹಿಳೆಯರು 4 ತಿಂಗಳಿಗೊಮ್ಮೆ ರಕ್ತದಾನ ಮಾಡಬಹುದು.
ಅಕ್ಟೋಬರ್-1 ವಿಶ್ವ ಹಿರಿಯ ನಾಗರಿಕರ
ದಿನ
ಹಿರಿಯ ನಾಗರಿಕರು ಸಮಾಜದ
ಅಮೂಲ್ಯ ಆಸ್ತಿ.ಅವರು ಬದುಕಿನ ಸಂಜೆಯಲ್ಲಿ ನೆಮ್ಮದಿಯಿಂದ ಬಾಳುವಂತೆ ನೋಡಿಕೊಳ್ಳುವುದು
ಸಮಾಜ,ಸರ್ಕಾರ ಮತ್ತು ವಾರಿಸುದಾರರ ಜವಾಬ್ದಾರಿ.ಹಿರಿಯ ನಾಗರಿಕರ ಯೋಗಕ್ಷೇಮಕ್ಕೆ ಭರವಸೆ ನೀಡಿ
ಅವರಲ್ಲಿ ಆತ್ಮ ವಿಶ್ವಾಸ ಮೂಡಿಸುವುದೇ ವಿಶ್ವ ಹಿರಿಯ ನಾಗರಿಕರ ದಿನದ ಉದ್ದೇಶ.
No comments:
Post a Comment