Flash1

ಚೇವಾರು ಶಾಲಾ ಬ್ಲಾಗಿಗೆ ಸ್ವಾಗತ.....WELCOME TO CHEVAR SCHOOL BLOG.....ಚೇವಾರು ಶಾಲಾ ಬ್ಲಾಗಿಗೆ ಸ್ವಾಗತ......WELCOME TO CHEVAR SCHOOL BLOG..

2FLASH NEWS

2021-22ನೇ ಶೈಕ್ಷಣಿಕ ವರ್ಷಕ್ಕೆ ಹಾರ್ದಿಕ ಸ್ವಾಗತಗಳು-ಶಾಲಾ ಅಭಿವೃದ್ದಿಗೆ ಸಹಕರಿಸುತ್ತಿರುವ ಎಲ್ಲಾ ರಕ್ಷಕರಿಗೆ,ವಿದ್ಯಾಭಿಮಾನಿಗಳಿಗೆ ಅಭಿನಂದನೆಗಳು. Visit us.Thank you

Friday, October 31, 2014

Indira Gandhi



ಅಕ್ಟೋಬರ್ 31: ಇಂದಿರಾ ಗಾಂಧಿ ಪುಣ್ಯ ಸ್ಮರಣೆ


ಭಾರತದ ಪ್ರಥಮ ಮಹಿಳಾ ಪ್ರಧಾನಿಯಾದ ಇಂದಿರಾ ಪ್ರಿಯ ದರ್ಶಿನಿ ಯವರು 1917ರನವೆಂಬರ್ 19ರಂದು ಅಲಹಾಬಾದಿನಲ್ಲಿ ಜನಿಸಿದರು.ತಂದೆ ಜವಾಹರಲಾಲ್ ನೆಹರು,ತಾಯಿ ಕಮಲಾ ನೆಹರು.ಇಂದಿರಾ ಎಳವೆಯಲ್ಲಿಯೇ ಬ್ರಿಟಿಷ್ ಪ್ರಭುತ್ವದ ವಿರುದ್ಧ ಬಂಡೇಳುವ ಪ್ರವೃತ್ತಿಯನ್ನು ಬೆಳೆಸಿಕೊಂಡರು.ಇವರ ನಾಯಕತ್ವದಲ್ಲಿ ಮೋಂಕೀ ಬ್ರಿಗೇಡ್ಎಂಬ ಮಕ್ಕಳ ಸೈನ್ಯ ರೂಪುಗೊಂಡಿತು.
1938ರಲ್ಲಿ ಕಾಂಗ್ರೆಸ್ ಪಕ್ಷದ ಸದಸ್ಯೆಯಾದರು.ಲಾಲ್ ಬಹದ್ದೂರ್ ಶಾಸ್ತ್ರಿಪ್ರಧಾನಿಯಾಗಿದ್ದ ಮಂತ್ರಿ ಮಂಡಲದಲ್ಲಿ,ಇಂದಿರಾ ಕ್ಯಾಬಿನೆಟ್ ದರ್ಜೆಯ ಸಚಿವರಾಗಿದ್ದರು.ಇವರು ಗರೀಬೀ ಹಟಾವೋಎಂಬ ಘೋಷಣಾ ವಾಕ್ಯದೊಂದಿಗೆ ಹಲವಾರು ಜನಪ್ರಿಯ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದರು.ಉಗ್ರವಾದಿಗಳ ದಮನಕ್ಕಾಗಿ ಇಂದಿರಾ ಗಾಂಧಿ ಸೇನೆಯನ್ನು ಅಮೃತಸರ್ ಸ್ವರ್ಣ ಮಂದಿರದೊಳಗೆ ಹೊಗಿಸಿದ ಕಾರಣಕ್ಕಾಗಿ,ಸಿಖ್ ಧರ್ಮೀಯರು ಅಸಮಧಾನಗೊಂಡರು.1984ರ ಅಕ್ಟೋಬರ್ 31ರಂದು ಇಹಲೋಕ ತ್ಯಜಿಸಿದರು.

No comments:

Post a Comment