ಗಾಂಧೀಜಿ ಭಾವಚಿತ್ರಕ್ಕೆ ಪುಷ್ಪಾರ್ಚನೆ
ಚೇವಾರು ಶ್ರೀ ಶಾರದಾ
ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಗಾಂಧೀ ಜಯಂತಿಯನ್ನು ವಿವಿಧ ಕಾರ್ಯಕ್ರಮಗಳೊಂದಿಗೆ ಆಚರಿಸಲಾಯಿತು.ಶಾಲಾ
ಎಸೆಂಬ್ಲಿಯಲ್ಲಿ,ಸ್ವಚ್ಛತಾ ಅಭಿಯಾನದ ಪ್ರತಿಜ್ಞೆಯನ್ನು ಕೈಗೊಳ್ಳಲಾಯಿತು. ಸಭಾ ಕಾರ್ಯಕ್ರಮದ
ಉದ್ಘಾಟನೆಯನ್ನು ಪೈವಳಿಕೆ ಪಂಚಾಯತು ಸದಸ್ಯೆ
ಸುಬೈದಾ ಟೀಚರ್ ನೆರವೇರಿಸಿ,
ಗಾಂಧೀಜಿಯವರು ಜೀವನದಲ್ಲಿ ಪಾಲಿಸಿದ ಸತ್ಯ,ಶಾಂತಿ,ಅಹಿಂಸೆ,ಪ್ರೇಮ,ಸರಳತೆಯನ್ನು ನಮ್ಮ ಜೀವನದಲ್ಲಿ
ಅಳವಡಿಸಿಕೊಳ್ಳಬೇಕೆಂದು ಕರೆಯಿತ್ತರು.ಪಿ.ಟಿ.ಎ. ಅಧ್ಯಕ್ಷ ಪರಮೇಶ್ವರ ಪಾವಲುಕೋಡಿ ಅಧ್ಯಕ್ಷತೆ
ವಹಿಸಿದರು.ಮುಖ್ಯ ಅತಿಥಿಗಳಾಗಿ ,ಶ್ರೀ ಧರ್ಮಸ್ಥಳ ಗ್ರಾಮೀಣ ಅಭಿವೃದ್ಧಿ ಸಂಘದ ಅಧಿಕಾರಿ ಭರತ್
ಕುಂದಾಪುರ ಮತ್ತು ಮಾತೃ ರಕ್ಷಕ ಸಂಘದ ಅಧ್ಯಕ್ಷೆ ಇಂದಿರಾ ಶುಭಾಶಂಸನೆಗೈದರು. ಶಾಲಾ ಮುಖ್ಯ
ಶಿಕ್ಷಕ ಶ್ಯಾಮ ಭಟ್ ಸ್ವಾಗತಿಸಿದರು. ಶಿಕ್ಷಕಿ ರಾಜೇಶ್ವರಿ ವಂದಿಸಿದರು. ಶಿಕ್ಷಕ ವಿನೋದ್
ಚೇವಾರು ಕಾರ್ಯಕ್ರಮ ನಿರೂಪಿಸಿದರು.
ಕಾರ್ಯಕ್ರಮದ ಅಂಗವಾಗಿ
ಗಾಂಧೀಜಿಯವರ ಭಾವ ಚಿತ್ರಕ್ಕೆ,ವಿದ್ಯಾರ್ಥಿಗಳು,ಶಿಕ್ಷಕರು,ರಕ್ಷಕರು ಪುಷ್ಪಾರ್ಚನೆಗೈದು ಗೌರವ
ಸಲ್ಲಿಸಿದರು.ಪರಿಸರ ಶುಚೀಕರಣ ಮತ್ತು ಗಾಂಧೀಜಿ ಕುರಿತಾದ ರಸಪ್ರಶ್ನೆ ಸ್ಪರ್ಧೆ ಆಯೋಜಿಸಲಾಯಿತು.
ಅಕ್ಟೋಬರ್-2 ಲಾಲ್ ಬಹದ್ದೂರ್
ಶಾಸ್ತ್ರಿ ಜನ್ಮದಿನ
ನಮ್ಮ ಭವ್ಯ ಭಾರತವು ಲಕ್ಷಾಂತರ ದೇಶಭಕ್ತರನ್ನು ನೀಡಿದ ಪುಣ್ಯ ಭೂಮಿ.ದೇಶದ ಹಿತಕ್ಕಾಗಿ
ಹಗಲಿರುಳು ಪ್ರಾಮಾಣಿಕವಾಗಿ ಶ್ರಮಿಸಿದವರಲ್ಲಿ ಒಬ್ಬರು ಭಾರತ ದೇಶದ ದ್ವಿತೀಯ ಪ್ರಧಾನಿ,ಸ್ವಾರ್ಥ
ರಾಷ್ಟ್ರ ಸೇವಕ,ಸರಳ,ಸಜ್ಜನಿಕೆಯ ಮೂರ್ತ ಸ್ವರೂಪ ಲಾಲ್ ಬಹದ್ದೂರ್ ಶಾಸ್ತ್ರೀಜಿಯವರು
ಒಬ್ಬರು.
ಲಾಲ್ ಬಹದ್ದೂರ್ ಶಾಸ್ತ್ರಿಯವರು 1904ರ ಅಕ್ಟೋಬರ್-2ರಂದು ಉತ್ತರ ಪ್ರದೇಶದ ವಾರಣಾಸಿಯ
ಸಮೀಪದ ಮೊಘಲ್ ಸರಾಯ್ ನಲ್ಲಿ ಜನಿಸಿದರು.ತಂದೆ ಶಾರದಾ
ಪ್ರಸಾದ್,ತಾಯಿ ರಾಮ್ ದುಲಾರಿ ದೇವಿ.1915ರಲ್ಲಿ ಗಾಂಧೀಜಿಯವರ ಅಸಹಕಾರ ಚಳವಳಿಯಲ್ಲಿ
ಭಾಗದವಹಿಸಿದರು.
ಸ್ವತಂತ್ರ ಭಾರತದಲ್ಲಿ ,ಮೊದಲು ಸಾರಿಗೆ ಸಚಿವರಾಗಿ,1961 ರಲ್ಲಿ ಗೃಹ ಮಂತ್ರಿಯಾದರು.,1964ರ
ಜೂನ್ 9ರಂದು ಪ್ರಧಾನಿಯಾದರು. ಜೈ ಜವಾನ್ ಜೈ ಕಿಸಾನ್ ಎಂಬುದು ಅವರ ಘೋಷಣಾ ವಾಕ್ಯ.
|
No comments:
Post a Comment