ಅಕ್ಟೋಬರ್ 1 ರಿಂದ 7.ವನ್ಯಜೀವಿ ಸಪ್ತಾಹ
ಭೂಮಿಯ ಮೇಲೆ ವಿವಿಧ ಪ್ರಭೇದಗಳ
ಜೀವರಾಶಿಗಳಿವೆ.ಇವುಗಳಲ್ಲಿ ವನ್ಯ ಜೀವಿಗಳೂ ಸೇರಿವೆ.ಭೂಮಿಯ ಮೇಲೆ ಬದುಕುವ ಹಕ್ಕು ಮನುಷ್ಯರಂತೆಯೇ,ಇತರಜೀವಿಗಳಿಗೂ
ಇದೆ.ಕಾಡು ಅನೇಕ ವನ್ಯ ಜೀವಿಗಳ ಆಶ್ರಯತಾಣವಾಗಿದೆ.ಹುಲಿ,ಸಿಂಹ,ಕರಡಿ,ಮಂಗ,ಚಿರತೆ,ಜೀಬ್ರಾ ಮುಂತಾದ
ಅನೇಕಜೀವಿಗಳಿಗೆ ಬದುಕಲು ಕಾಡು ಬೇಕು.ಕಾಡು ಪ್ರಾಣಿಗಳ ರಕ್ಷಣೆಯ ನಿಟ್ಟಿನಲ್ಲಿ ಅಕ್ಟೋಬರ್ 1ರಿಂದ
7ರ ತನಕ ವನ್ಯ ಜೀವಿ ಸಪ್ತಾಹವನ್ನು ಆಚರಿಸಲಾಗುತ್ತಿದೆ.1977ರಲ್ಲಿಅರಣ್ಯ ಸಂರಕ್ಷಣಾ ಕಾಯಿದೆ
ಜಾರಿಗೆ ಬಂದ ನಂತರ ವನ್ಯ ಜೀವಿಗಳು ಅರಣ್ಯ ಸಂಪತ್ತು ಉಳಿಯಲು ಕಾರಣವಾಯಿತು.ಆಹಾರ ಸರಪಳಿಯಲ್ಲಿ ಎಲ್ಲಾ ಜೀವಿಗಳು ಒಳಗೊಂಡಿವೆ.
ವನ್ಯ ಜೀವಿಗಳ
ಅಳಿವಿಗೆ,ಮನುಷ್ಯನು ಕಾರಣನಾಗುತ್ತಿರುವುದು ಬೇಸರದ ಸಂಗತಿಯಾಗಿದೆ.ಗಾಂಧೀಜಿಯವರ ನೆನಪಿನಲ್ಲಿ
ಆರಂಭವಾದ ಈ ವನ್ಯ ಜೀವಿ ಸಂರಕ್ಷಣಾ ಸಪ್ತಾಹವು ಫಲಪ್ರದವಾಗಲಿ,ವನ್ಯ ಜೀವಿಗಳು ಇನ್ನಷ್ಟು
ಹೆಚ್ಚಾಗಲಿ ಎಂಬುದೇ ನಮ್ಮೆಲ್ಲರ ಆಶಯ.
No comments:
Post a Comment