Flash1

ಚೇವಾರು ಶಾಲಾ ಬ್ಲಾಗಿಗೆ ಸ್ವಾಗತ.....WELCOME TO CHEVAR SCHOOL BLOG.....ಚೇವಾರು ಶಾಲಾ ಬ್ಲಾಗಿಗೆ ಸ್ವಾಗತ......WELCOME TO CHEVAR SCHOOL BLOG..

2FLASH NEWS

2021-22ನೇ ಶೈಕ್ಷಣಿಕ ವರ್ಷಕ್ಕೆ ಹಾರ್ದಿಕ ಸ್ವಾಗತಗಳು-ಶಾಲಾ ಅಭಿವೃದ್ದಿಗೆ ಸಹಕರಿಸುತ್ತಿರುವ ಎಲ್ಲಾ ರಕ್ಷಕರಿಗೆ,ವಿದ್ಯಾಭಿಮಾನಿಗಳಿಗೆ ಅಭಿನಂದನೆಗಳು. Visit us.Thank you

Monday, February 29, 2016

AWARDS

ಡಿ.ಬಿ.ಎ.ಯು.ಪಿ.ಶಾಲೆ ಕಯ್ಯಾರಿನಲ್ಲಿ ಜರಗಿದ ಮಂಜೇಶ್ವರ ಉಪಜಿಲ್ಲಾ ಮಟ್ಟದ ಸ್ಕೌಟ್ ಮತ್ತು ಗೈಡ್ ಶಿಬಿರದಲ್ಲಿ ಭಾಗವಹಿಸಿ ದ್ವಿತೀಯ ಸ್ಥಾನ ಪ್ರಶಸ್ತಿ ಪಡೆದ ನಮ್ಮ ವಿದ್ಯಾರ್ಥಿಗಳು
ನವೀನ್,ಪ್ರಜ್ವಲ್,ತುಷಾರ್,ಆಶಿಕ್,ಅರಾಫತ್,ಗೌತಮ್,ಗುರುಕಿರಣ್

ವಿಂದ್ಯಾ.ಕೆ,ಸಬಾನಾ,ಶರಣ್ಯ,ಪುಷ್ಪಲತಾ,ಅಶ್ವಿನಿ,ಜಯಶ್ರೀ,ಮುಬೀನ,ನವ್ಯಶ್ರೀ.ಕೆ

ಜ್ಯೋತಿಕಾ,ಪೂರ್ಣಿಮಾ

Tuesday, February 23, 2016

ಹಿರಿಮೆ-2015-16

ಅಟ್ಟೆಗೋಳಿ ಶಾಲೆಯಲ್ಲಿ ಜರಗಿದ ಪೈವಳಿಕೆ ಪಂಚಾಯತಿ ಮಟ್ಟದ ಹಿರಿಮೆಯಲ್ಲಿ ಪ್ರದರ್ಶನಗೊಂಡ ನಮ್ಮ ಶಾಲಾ ವಿದ್ಯಾರ್ಥಿಗಳ ಕಲಿಕೋತ್ಪನ್ನಗಳು


AWARD

ಮಂಜೇಶ್ವರ ಉಪಜಿಲ್ಲಾ ಮಟ್ಟದ ಸಂಸ್ಕೃತ ಶಿಬಿರದಲ್ಲಿ ಭಾಗವಹಿಸಿ ಪ್ರಶಸ್ತಿ ಪಡೆದ ನಮ್ಮ ವಿದ್ಯಾರ್ಥಿಗಳು
ಗೌತಮ್,ನವೀನ್ ಕುಮಾರ್,ಸುಮಂತ್,ಅಶ್ವತ್,ಕಿಶೋರ್ ಕುಮಾರ್

ಅನುಜಾಕ್ಷಿ,ಗೀತಾಂಜಲಿ,ಪೂರ್ಣಿಮಾ,ಜ್ಯೋತಿಕಾ,ನವ್ಯಶ್ರೀ

EDUCATIONAL PICNIC

ಶೈಕ್ಷಣಿಕ ಪ್ರವಾಸ
ಗೋಕರ್ಣನಾಥೇಶ್ವರ ದೇವಸ್ಥಾನ

ಬೋಟ್ ನಲ್ಲಿ ಪ್ರಯಾಣ

ಸಮುದ್ರತೀರದಲ್ಲೊಂದು ಪ್ರಯಾಣ

AWARDS

ಮಂಜೇಶ್ವರ ಉಪಜಿಲ್ಲಾ ಮಟ್ಟದ ಉರ್ದು ಶಿಬಿರದಲ್ಲಿ ಭಾಗವಹಿಸಿ ಪ್ರಶಸ್ತಿ ಪಡೆದ ವಿದ್ಯಾರ್ಥಿಗಳು
ಮೊಹಮ್ಮದ್ ಅರ್ ಫತ್,ಮೊಹಮ್ಮದ್ ಅನ್ಸಾಫ್,ನಿಶಾದ್

Sunday, February 14, 2016

World Radio day


ಫೆಬ್ರವರಿ 13 ವಿಶ್ವ ರೇಡಿಯೋ ದಿನ
ರೇಡಿಯೋ, ಒಂದು ಜನಾನುರಾಗಿ ಮಾಧ್ಯಮ.ಮಾರ್ಕೋನಿ ಎಂಬ ವಿಜ್ಞಾನಿ,ನಿಸ್ತಂತು ಸಂದೇಶ ಕಳುಹಿಸಲು ಆವಿಷ್ಕರಿಸಿದ ಸಾಧನವೇ ರೇಡಿಯೋ.1895 ರಲ್ಲಿ ಮೊದಲ ರೇಡಿಯೋ ಸಂದೇಶವನ್ನು ಕಳುಹಿಸುವ ಮೂಲಕ ರೇಡಿಯೋ ಎಂಬ ಅದ್ಭುತ ಉಪಕರಣದ ಜನನ ವಾಯಿತು.1835ರಲ್ಲಿ ಕೂಕ್ ಎಂಬ ವಿಜ್ಞಾನಿ ಕಂಡುಹಿಡಿದ ಟೆಲಿಗ್ರಾಫ್,ರೇಡಿಯೋದ ಆವಿಷ್ಕಾರಕ್ಕೆ ನಾಂದಿಯಾಯಿತು.
ಭಾರತದಲ್ಲಿ 1927ರಲ್ಲಿ ಮುಂಬೈಯಲ್ಲಿ ಖಾಸಗಿಯಾಗಿ ರೇಡಿಯೋ ಆರಂಭವಾಯಿತು.1936ರಲ್ಲಿ ಆಕಾಶವಾಣಿಯಲ್ಲಿ ವಾರ್ತಾ ಸಂಚಿಕೆ ಆರಂಭವಾಯಿತು.ಬಹು ಜನ ಹಿತಾಯ ಬಹು ಜನ ಸುಖಾಯ ಎಂಬುದು ಆಕಾಶವಾಣಿಯ ಧ್ಯೇಯ ವಾಕ್ಯ.
ಇಂದು ದೂರ ದರ್ಶನ,ಇಂಟರ್ ನೆಟ್ಗಳ ಭರಾಟೆಯಲ್ಲಿಯೂ,ರೇಡಿಯೋ ತನ್ನ ಪ್ರಾಮುಖ್ಯತೆಯನ್ನು ಉಳಿಸಿಕೊಂಡಿದೆ.

Thursday, February 11, 2016

WORLD RADIO DAY


ಫೆಬ್ರವರಿ 13 ವಿಶ್ವ ರೇಡಿಯೋ ದಿನ
ರೇಡಿಯೋ, ಒಂದು ಜನಾನುರಾಗಿ ಮಾಧ್ಯಮ.ಮಾರ್ಕೋನಿ ಎಂಬ ವಿಜ್ಞಾನಿ,ನಿಸ್ತಂತು ಸಂದೇಶ ಕಳುಹಿಸಲು ಆವಿಷ್ಕರಿಸಿದ ಸಾಧನವೇ ರೇಡಿಯೋ.1895 ರಲ್ಲಿ ಮೊದಲ ರೇಡಿಯೋ ಸಂದೇಶವನ್ನು ಕಳುಹಿಸುವ ಮೂಲಕ ರೇಡಿಯೋ ಎಂಬ ಅದ್ಭುತ ಉಪಕರಣದ ಜನನ ವಾಯಿತು.1835ರಲ್ಲಿ ಕೂಕ್ ಎಂಬ ವಿಜ್ಞಾನಿ ಕಂಡುಹಿಡಿದ ಟೆಲಿಗ್ರಾಫ್,ರೇಡಿಯೋದ ಆವಿಷ್ಕಾರಕ್ಕೆ ನಾಂದಿಯಾಯಿತು.
ಭಾರತದಲ್ಲಿ 1927ರಲ್ಲಿ ಮುಂಬೈಯಲ್ಲಿ ಖಾಸಗಿಯಾಗಿ ರೇಡಿಯೋ ಆರಂಭವಾಯಿತು.1936ರಲ್ಲಿ ಆಕಾಶವಾಣಿಯಲ್ಲಿ ವಾರ್ತಾ ಸಂಚಿಕೆ ಆರಂಭವಾಯಿತು.ಬಹು ಜನ ಹಿತಾಯ ಬಹು ಜನ ಸುಖಾಯ ಎಂಬುದು ಆಕಾಶವಾಣಿಯ ಧ್ಯೇಯ ವಾಕ್ಯ.
ಇಂದು ದೂರ ದರ್ಶನ,ಇಂಟರ್ ನೆಟ್ಗಳ ಭರಾಟೆಯಲ್ಲಿಯೂ,ರೇಡಿಯೋ ತನ್ನ ಪ್ರಾಮುಖ್ಯತೆಯನ್ನು ಉಳಿಸಿಕೊಂಡಿದೆ.

Abraham

ಫೆಬ್ರವರಿ 12 ಅಬ್ರಹಾಂ ಲಿಂಕನ್ ಜನ್ಮ ದಿನ
ಅಮೇರಿಕಾದಲ್ಲಿ ಕರಿಯರಿಗೆ ಶಾಪವಾಗಿದ್ದ ಗುಲಾಮ ಗಿರಿಯನ್ನು ವರ್ಣಭೇದ ನೀತಿಯನ್ನು ತೊಲಗಿಸಲು ಹೋರಾಡಿದ ಧೀರೋದ್ದಾತ ನಾಯಕ ಅಬ್ರಹಾಂ ಲಿಂಕನ್.1809ರ ಫೆಬ್ರವರಿ 12ರಂದು ಕೆಂಟಕಿಯ ಸಾಮಾನ್ಯ ಕುಟುಂಬದಲ್ಲಿ ಜನಿಸಿದರು.ತಂದೆ ಥಾಮಸ್ ಲಿಂಕನ್ ಬಡಗಿಯಾಗಿದ್ದರು. ಅಬ್ರಹಾಂ ಲಿಂಕನ್ ಶಾಲೆಯಲ್ಲಿ ಶಾಸ್ತ್ರೋಕ್ತ ಶಿಕ್ಷಣ ಪಡೆದವರಲ್ಲ.ಗೆಳೆಯರಿಂದ ಎರವಲಾಗಿ ಪುಸ್ತಕಗಳನ್ನು ಪಡೆದು ಬೀದಿ ದೀಪದ ಬೆಳಕಿನಲ್ಲಿ ಓದಿದವರು.ಜೀವನ ಸಾಗಿಸಲು ವಿವಿಧ ವೃತ್ತಿಗಳನ್ನು ಮಾಡಿದರು.ಕೇವಲ 25ರ ಹರಯದಲ್ಲಿ ಇಲಿನಾಯ್ಸ್ ಶಾಸನ ಸಭೆಗೆ ಆಯ್ಕೆಯಾದರು.
ಅಬ್ರಹಾಂ ಲಿಂಕನ್ ಖಾಸಗಿಯಾಗಿ ಲಾ ಕಲಿತರು.ಕೆಲ ಕಾಲ ವಕೀಲರಾಗಿದ್ದು,ನಂತರ ರಿಪಬ್ಲಿಕನ್ ಚಳವಳಿಗೆ ಧುಮುಕಿದರು.1860ರಲ್ಲಿ  ಅಮೇರಿಕಾದ ಅಧ್ಯಕ್ಷರಾಗಿ ಆಯ್ಕೆಯಾದರು. ಗುಲಾಮ ಗಿರಿಯನ್ನು ನಿವಾರಿಸುವುದು ಅವರ ಮೊದಲ ಗುರಿಯಗಿತ್ತು.

Wednesday, February 10, 2016

THOMAS ALVA EDISON BIRTHDAY


ಫೆಬ್ರವರಿ 11 ಥಾಮಸ್ ಆಲ್ವ ಎಡಿಸನ್ ಜನ್ಮ ದಿನ
ಥಾಮಸ್ ಆಲ್ವ ಎಡಿಸನ್ ಅಮೇರಿಕಾದ ಮಿಲಾನ್ ಎಂಬಲ್ಲಿ 1847ರ ಫೆಬ್ರವರಿ 11 ರಂದು ಹುಟ್ಟಿದರು.ಬಾಲ್ಯದಲ್ಲೇ ಪ್ರತಿಭಾವಂತ.ಅನ್ವೇಷಣಾ ಗುಣ ರಕ್ತಗತವಾಗಿತ್ತು.10 ವರ್ಷದವನಾಗಿದ್ದಾಗಲೇ ಮನೆಯಲ್ಲಿ ಪ್ರಯೋಗ ಶಾಲೆ ನಿರ್ಮಿಸಿದ್ದರು.ಪ್ರಯೋಗಕ್ಕೆ ಬೇಕಾದ ಹಣವನ್ನುಪತ್ರಿಕೆ,ಸಿಹಿ ತಿಂಡಿ ಮಾರಿ ಸಂಗ್ರಹಿಸುತ್ತಿದ್ದರು.ಗ್ರಾಂಡ್ ಟ್ರಂಕ್ ಹೆರಾಲ್ಡ್ ಎಂಬ ಪತ್ರಿಕೆ ಆರಂಭಿಸಿದರು.1868ರಲ್ಲಿ ಸುಧಾರಿತ ಟೆಲಿಗ್ರಾಫ್ ಮಾದರಿ ತಯಾರಿಸಿ ಪೇಟೆಂಟ್ ಪಡೆದರು.1876ರಲ್ಲಿ ನ್ಯೂ ಜೆರ್ಸಿಯಲ್ಲಿ ಪ್ರಯೋಗಾಲಯ ಹಾಗೂ ಕಾರ್ಖಾನೆ ಸ್ಥಾಪಿಸಿದರು.ಇಲ್ಲಿ ಸುಧಾರಿತ ದೂರ ವಾಣಿ ಪ್ರೇಷಕ ಮತ್ತು ಫೋನೋಗ್ರಾಫ್  ಕಂಡು ಹಿಡಿದರು.1878ರಲ್ಲಿ ವಿದ್ಯುತ್ ದೀಪ ಕಂಡುಹಿಡಿದರು.ಇದಲ್ಲದೇ ವಿದ್ಯುತ್ ಲೇಖನಿ,ಟೈಪ್ ರೈಟರ್,ಚಲನ ಚಿತ್ರ ಕ್ಯಾಮರಾ ಕೈನಟೋಸ್ಕೋಪ್,ಸಂಚಯನ ವಿದ್ಯುತ್ ಕೋಶ ಹೀಗೆ ಅನೇಕ ವಸ್ತುಗಳು.
ಪ್ರತಿಭೆ ಎಂದರೆ 99 ಭಾಗ ಶ್ರಮ,ಒಂದು ಭಾಗ ಮಾತ್ರ ಸ್ಪೂರ್ತಿ ಎಂದು ನಂಬಿದ್ದರು.1913ರ ಅಕ್ಟೋಬರ್ 18ರಂದು ತೀರಿಹೋದರು.ಸತತ ಪ್ರಯತ್ನದಿಂದ ಯಶಸ್ಸು ಸಾಧ್ಯ ಎಂಬುದಕ್ಕೆ ಎಡಿಸನ್ ಸಾಕ್ಷಿ.

Thursday, February 4, 2016

WORLD CANCER DAY



ಫೆಬ್ರವರಿ-4,ವಿಶ್ವ ಕ್ಯಾನ್ಸರ್ ನಿರ್ಮೂಲನಾ ದಿನ

ಜನರಲ್ಲಿ ಈ ರೋಗದ ಕುರಿತು ಜಾಗೃತಿ ಮೂಡಿಸಲು,ರೋಗ ತಡೆಗಟ್ಟುವಿಕೆ,ಪತ್ತೆ ಹಚ್ಚುವಿಕೆ,ಗುಣಪಡಿಸುವಿಕೆ ಕುರಿತು ಅರಿವುಮೂಡಿಸಲು, ಫೆಬ್ರವರಿ-4ರಂದು ವಿಶ್ವದಾದ್ಯಂತ ಕ್ಯಾನ್ಸರ್ ದಿನವನ್ನಾಗಿ ಆಚರಿಸಲಾಗುತ್ತಿದೆ.ಜಗತ್ತಿನಲ್ಲಿ ಇಂದು ಸುಮಾರು280 ಕ್ಕಿಂತಲೂ ಹೆಚ್ಚು ಸಂಸ್ಥೆಗಳು ಕ್ಯಾನ್ಸರ್ ಕುರಿತು ತಿಳುವಳಿಕೆ ಮೂಡಿಸುತ್ತವೆಶರೀರದ ವಿವಿಧ ಅಂಗಗಳಿಗೆ ಅರ್ಬುದ ಬಾಧಿಸುತ್ತವೆ 43 ಶೇಕಡಾ ಕ್ಯಾನ್ಸರ್ ಗಳು ನಮ್ಮ ಜೀವನ ಕ್ರಮದಿಂದಾಗಿ ಬರುತ್ತವೆ.ರೋಗಗಳು ಬಾರದಂತೆ ತಡೆಯಲು ಉತ್ತಮ ಆಹಾರ ಅಭ್ಯಾಸ ಪರಿಸರ ಮುಖ್ಯ.