ಸೆಪ್ಟೆಂಬರ್-16 ವಿಶ್ವ ಓಝೋನ್ ದಿನ
ಮ್ಮ ಭೂಮಿಯು, ಜೀವಿಗಳಿರುವ ಏಕೈಕ ಸುಂದರ ಗ್ರಹವಾಗಿದೆ.ಸೂರ್ಯನನ್ನುಕೇಂದ್ರವಾಗಿರಿಸಿಕೊಂಡು ಇತರ
ಗ್ರಹಗಳೊಂದಿಗೆ ಸೌರವ್ಯೂಹದಲ್ಲಿ ಸುತ್ತುಬರುತ್ತಿದೆ. ಭೂಮಿಗೆ ಒಂದು ವ್ಯವಸ್ಥಿತವಾದ
ವಾತಾವರಣವಿದೆ.ಈ ವಾತಾವರಣವು . ಭೂಮಿಯ ಮೇಲಿರುವ ಜೀವಜಾಲಗಳನ್ನು ರಕ್ಷಿಸಿ ಪೋಷಿಸುತ್ತದೆ. ಈ
ವಾತಾವರಣದಲ್ಲಿ ಓಝೋನ್ ಎಂಬ
ವಿಶಿಷ್ಟವಾದ ಒಂದು ಅನಿಲ ಪದರವಿದೆ.ಈ ಓಝೋನ್ ಪದರವು ಸೂರ್ಯನಿಂದ ಬರುವ
ನೇರಳಾತೀತಕಿರಣಗಳಲ್ಲಿರುವ ಹಾನಿಕಾರಕ ವಿಕಿರಣಗಳನ್ನುತಡೆದು ಭೂಮಿಗೆ ಬೀಳದಂತೆ ಮಾಡುತ್ತದೆ. ಈ
ಹಾನಿಕಾರಕ ವಿಕಿರಣಗಳು, ನಿರಂತರವಾಗಿ ಮನುಷ್ಯನ ಮೈಮೇಲೆ ಬಿದ್ದಲ್ಲಿ, ಚರ್ಮದ ಕ್ಯಾನ್ಸರ್ ನಂತಹ ರೋಗಗಳು ಉಂಟಾಗಬಹುದು.ಇದು ಜೀವಜಾಲಗಳ ನಾಶಕ್ಕೂ ನಾಂದಿಯಾಗಬಹುದು. ಇಂದು
ಮನುಷ್ಯನ ಲೋಭದಿಂದಾಗಿ ಈ ಓಝೋನ್ ಪದರವು
ನಾಶವಾಗುತ್ತಿದೆ.ರೆಫ್ರಿಜರೇಟರ್,ಕೃತಕ ಸುಗಂಧದ್ರವ್ಯಗಳು ಏ.ಸಿ,,ಶೇವಿಂಗ್ ಕ್ರೀಮ್ ಮುಂತಾದವುಗಳ
ಉಪಯೋಗ ದಿಂದ ಉಂಟಾಗುವ ಕ್ಲೋರೋಫ್ಲೋರೋಕಾರ್ಬನ್ ಓಝೋನ್ ಪದರವನ್ನು ತೆಳ್ಳಗಾಗಿಸುತ್ತದೆ.
No comments:
Post a Comment