ಜೂನ್-14,ವಿಶ್ವ ರಕ್ತದಾನ ದಿನ
‘Thank you for saving my life’ಎಂಬ ಆಶಯದೊಂದಿಗೆ, 2015ರ ವಿಶ್ವ ರಕ್ತದಾನ ದಿನವನ್ನು ವಿಶ್ವ ಆರೋಗ್ಯ
ಸಂಸ್ಥೆಯು ಜಗತ್ತಿನಾದ್ಯಂತ ಆಚರಿಸುತ್ತಿದೆ.
ಜಗತ್ತಿನಲ್ಲಿ ಅತ್ಯಂತ ಶ್ರೇಷ್ಠವಾದ ದಾನವೆಂದರೆ ರಕ್ತದಾನ.ರಕ್ತಕ್ಕೆ ಪರ್ಯಾಯವಾದ ವಸ್ತು
ಬೇರೊಂದಿಲ್ಲ.ರಕ್ತವನ್ನು ಕೃತಕವಾಗಿ ತಯಾರಿಸುವುದು ಅಸಾಧ್ಯ
ಅಪಘಾತ,ಕ್ಯಾನ್ಸರ್, ಹೃದಯ ಸಂಬಂಧಿ ಸಮಸ್ಯೆಗಳಲ್ಲಿ
ವ್ಯಾಪಕವಾಗಿ ರಕ್ತ ಬೇಕಾಗುತ್ತದೆ.ಜಗತ್ತಿನಾದ್ಯಂತ ಬೇಡಿಕೆಗೆ ತಕ್ಕಂತೆ
ರಕ್ತದ ಪೂರೈಕೆ ಇಲ್ಲ. ರಕ್ತದ
ಕೊರತೆಯಿಂದಾಗಿ ಎಷ್ಟೋ ಜನರು
ಸಾವನ್ನಪ್ಪುತ್ತಿದ್ದಾರೆ.
ವಿಶ್ವ ಆರೋಗ್ಯ ಸಂಸ್ಥೆಯು,ರಕ್ತ ದಾನದ ಕುರಿತು ಜಾಗೃತಿ ಮೂಡಿಸಲು ಪ್ರತಿ ವರ್ಷ
ಜೂನ್-14ನ್ನು ವಿಶ್ವ ರಕ್ತದಾನ ದಿನವನ್ನಾಗಿ ಆಚರಿಸುತ್ತಿದೆ.ಆಸ್ಟ್ರಿಯಾ ದೇಶದ ವೈದ್ಯರಾದ
ಕಾರ್ಲ್ ಲ್ಯಾಂಡ್ ಸ್ಟೇನರ್ ಎಂಬವರು,ರಕ್ತದ ಮೊದಲ ಮೂರು ಗುಂಪುಗಳನ್ನು ಕಂಡುಹಿಡಿದವರು.ಅವರ ಜನ್ಮ
ದಿನವಾದ ಜೂನ್-14ನ್ನು ವಿಶ್ವ ರಕ್ತದಾನ ದಿನವನ್ನಾಗಿ ಆಚರಿಸಲಾಗುತ್ತಿದೆ.
No comments:
Post a Comment