ಜೂನ್-21,ಅಂತಾರಾಷ್ಟ್ರೀಯ ಯೋಗ ದಿನ
ಪತಂಜಲಿ ಮುನಿಯಿಂದ,ಭಾರತದಲ್ಲಿ ಆರಂಭವಾದ ಯೋಗವೆಂಬ ದೈಹಿಕ ಕಸರತ್ತು,ಇಂದು ವಿಶ್ವ
ವ್ಯಾಪಿಯಾಗಿದೆ.ಆರೋಗ್ಯವಂತ ಬದುಕಿನಲ್ಲಿ,ಯೋಗದ ಪಾತ್ರವನ್ನು ಗುರುತಿಸಿರುವ ವಿಶ್ವ ಸಂಸ್ಥೆ,ಜೂನ್
21 ನ್ನು ವಿಶ್ವ ಯೋಗ ದಿನವನ್ನಾಗಿ ಆಚರಿಸಲು ತೀರ್ಮಾನಿಸಿತು.175 ರಾಷ್ಟ್ರಗಳ ಬೆಂಬಲದೊಂದಿಗೆ ಇದು
ಸಾಧ್ಯವಾಯಿತು.
ಜೂನ್ 21 ಎಂಬುದು ದಕ್ಷಿಣಾಯನದ ಸಂಕ್ರಮಣ ದಿವಸ.ಇದುಸೂರ್ಯನು ಉತ್ತರದಿಂದ ದಕ್ಷಿಣಕ್ಕೆ ಪಥ
ಬದಲಾಯಿಸುವ ದಿನವಾಗಿದೆ.
ವಿವಿಧ ಯೋಗಾಸನಗಳ ಅಭ್ಯಾಸದಿಂದ,ಮಾನಸಿಕ ಹಾಗೂ ದೈಹಿಕ ಆರೋಗ್ಯವನ್ನು
ಕಾಪಾಡಿಕೊಳ್ಳಬಹುದು.ನಿಯಮಿತವಾಗಿ ಯೋಗಾಭ್ಯಾಸ ಮಾಡುವುದರಿಂದ ರೋಗಗಳನ್ನು ದೂರವಿಡಬಹುದು.ತಜ್ಞರ
ಮಾರ್ಗ ದರ್ಶನದೊಂದಿಗೆ,ಯೋಗವನ್ನು ಕಲಿಯುವುದರ ಮೂಲಕ,ಆರೋಗ್ಯಪೂರ್ಣ ಸಮಾಜವನ್ನು ರೂಪಿಸಬಹುದು.
ಯೋಗ ದಿನದ ಚಿಹ್ನೆ
ಅಂತಾರಾಷ್ಟ್ರೀಯ ಯೋಗ ದಿನದ ಚಿಹ್ನೆಯಲ್ಲಿ ವ್ಯಕ್ತಿ ಕೈಗಳನ್ನು ಜೋಡಿಸಿಮೇಲೆತ್ತಿ
ಮುಗಿದಿದ್ದು,ಐಕ್ಯತೆಯ ಸಂಕೇತ.ವೈಯಕ್ತಿಕ-ಸಾಮೂಹಿಕಐಕ್ಯತೆ,ಶರೀರ-ಮನಸ್ಸು,ಮನುಷ್ಯ ಪ್ರಕೃತಿಯ
ನಡುವಿನ ಸಾಮರಸ್ಯ,ಆರೋಗ್ಯ ಜೀವನದ ಸಾದೃಶ್ಯವೂ ಇದಾಗಿದೆ.ಕಂದು ಬಣ್ಣದ ಎಲೆ ಭೂಮಿಯನ್ನೂ,ಹಸಿರು
ವರ್ಣ ಪ್ರಕೃತಿಯನ್ನೂ,ನೀಲ ವರ್ಣ ಜಲವನ್ನೂ,ಕೆಂಪು ವರ್ಣ
ಪ್ರಕಾಶವನ್ನೂ,ಸೂರ್ಯನನ್ನೂ,ಪ್ರತಿನಿಧಿಸುತ್ತಿದ್ದು,ಚೈತನ್ಯ ಮತ್ತು ಪ್ರೇರಣೆಯ
ಸಂಕೇತವಾಗಿದೆ.ಮಾನವೀಯತೆಗಾಗಿ,ಶಾಂತಿ ವತ್ತು ಸಾಮರಸ್ಯೆಂಬ ಸಂದೇಶವನ್ನು ಸಾರುತ್ತಿದೆ.
No comments:
Post a Comment