ನೂರಾರು ವರ್ಷಗಳಿಂದ ಮನು ಕುಲವನ್ನು ಕಾಡುತ್ತಿರುವ ಕಾಯಿಲೆಗಳಲ್ಲಿ ಒಂದು ಮಧು ಮೇಹ.ದೇಹದ
ಶಕ್ತಿ ಉತ್ಪಾದನೆ ವ್ಯವಸ್ಥೆಯಲ್ಲಿ ಏರು ಪೇರಾಗುವುದರಿಂದ ಬರುವ ಈ ತೊಂದರೆ ಇರುವವರ ರಕ್ತದಲ್ಲಿ
ಸಕ್ಕರೆಯ ಅಂಶ ಅಸಮರ್ಪಕವಾಗಿ ಹೆಚ್ಚುತ್ತದೆ.ವೈಜ್ಞಾನಿಕವಾಗಿ ಇದನ್ನು ಡಯಾಬಿಟೀಸ್ ಮೆಲಿಟಿಸ್
ಎನ್ನುತ್ತಾರೆ.ಈ ತೊಂದರೆಯು,ಜಠರದಲ್ಲಿರುವ ವೇದೋಜ್ಜೀರಕ ಗ್ರಂಥಿಯು ಉತ್ಪಾದಿಸುವ ಇನ್ಸುಲಿನ್ ಎಂಬ
ಹಾರ್ಮೋನ್ ನನ್ನು ಅವಲಂಬಿಸಿದೆ.ಇನ್ಸುಲಿನ್, ದೇಹದ ಸಕ್ಕರೆ ಪ್ರಮಾಣವನ್ನು
ನಿಯಂತ್ರಿಸುತ್ತದೆ.ನಾವು ಸೇವಿಸುವ ಆಹಾರದಲ್ಲಿರುವ ಗ್ಲುಕೊಸನ್ನು ಜಠರ ಹೀರಿಕೊಂಡು ರಕ್ತಕ್ಕೆ
ಸೇರಿಸುತ್ತದೆ.ಈ ಗ್ಲುಕೋಸ್ ಜೀವ ಕೋಶಗಳಿಗೆ ಸೇರಿ,ದೇಹಕ್ಕೆ ಬೇಕಾದ ಶಕ್ತಿಯನ್ನು ಉತ್ಪಾದಿಸುತ್ತದೆ,ಈ
ಕ್ರಿಯೆಯಲ್ಲಿ ಇನ್ಸುಲಿನ್, ಗ್ಲುಕೊಸನ್ನು ಜೀವ ಕೋಶಗಳಿಗೆ ಸೇರಿಸಲು ಸಹಾಯ
ಮಾಡುತ್ತದೆ.ಇನ್ಸುಲಿನ್ ನನ್ನು ವೇದೋಜ್ಜೀರಕ ಗ್ರಂಥಿಯು ಉತ್ಪಾದಿಸಲು ಅಸಮರ್ಥವಾದಾಗ ಅಥವಾ
ಉತ್ಪಾದಿಸಲ್ಪಟ್ಟ ಇನ್ಸುಲಿನ್ ಕಾರ್ಯ ನಿರ್ವಹಿಸದಿದ್ದಾಗ ಮಧುಮೇಹ ಕಂಡುಬರುತ್ತದೆ.
ಕೌಟುಂಬಿಕ ಹಿನ್ನಲೆ,ಬೊಜ್ಜು,ಧೂಮಪಾನ,ಅಧಿಕ ರಕ್ತದೊತ್ತಡ ಮುಂತಾದವುಗಳು ಮಧುಮೇಹಕ್ಕೆ ಕೆಲವು
ಕಾರಣಗದಳಾಗಿವೆ.
No comments:
Post a Comment