ವಾಚನಾ ವಾರ (ಪುದುವಾಯಿಲ್ ನಾರಾಯಣ
ಪಣಿಕ್ಕರ್ ಸಂಸ್ಮರಣೆ)
ಓದಿ ಬೆಳೆಯುವ ಎಂಬ ಸಂದೇಶದೊಂದಿಗೆ,ಕೇರಳವಿಡೀ ಸಂಚರಿಸಿ,ಪುಸ್ತಕಗಳ ವಿಶಾಲ ಲೋಕವನ್ನೇ
ಪರಿಚಯಿಸಿದ ಕೇರಳಿಗ, ಪುದುವಾಯಿಲ್ ನಾರಾಯಣ ಪಣಿಕ್ಕರ್ ಅಥವಾ ಪಿ.ಎನ್ ಪಣಿಕ್ಕರ್.ಅವರ ಸಂಸ್ಮರಣಾ
ದಿನವಾದ ಜೂನ್ 19 ನ್ನು ವಾಚನಾ ದಿನವನ್ನಾಗಿಯೂ,ನಂತರದ ಒಂದು ವಾರವನ್ನು ವಾಚನಾ ವಾರವನ್ನಾಗಿ
ಕೇರಳದಾದ್ಯಂತ ಆಚರಿಸಲಾಗುವುದು.
ಕೇರಳದಲ್ಲಿರುವ ಗ್ರಂಥಾಲಯ ಸಂಸ್ಥೆ,ಸಾಕ್ಷರತಾ ಸಂಸ್ಥೆಗಳ ಬೆಳವಣಿಗೆಯ ಹಿಂದೆ ನಾರಾಯಣ
ಪಣಿಕ್ಕರ್ ಅವರ ಅವಿರತ ಶ್ರಮವಿದೆ.ಅವರ ಪುಣ್ಯ ದಿನ ದಿಂದ ಆರಂಭಿಸಿ, ಒಂದು ವಾರಗಳ ಕಾಲ ವಾಚನಾ
ವಾರವನ್ನಾಗಿ ಆಚರಿಸುತ್ತಿದ್ದೇವೆ.
ನಾವು ಜ್ಞಾನವಂತರಾಗಲು ಪುಸ್ತಕಗಳು ಸಹಕಾರಿ.ಇಂದು ಅನೇಕ ಪುಸ್ತಕಗಳು ಓದಲು ಲಭ್ಯ.ಕತೆ
ಪುಸ್ತಕ,ಪರಿಸರ ಪುಸ್ತಕ,ವೈಜ್ಞಾನಿಕ ಪುಸ್ತಕ,ಕ್ರೀಡಾ ಪುಸ್ತಕ,ಧಾರ್ಮಿಕ ಪುಸ್ತಕ ಹೀಗೆ ಅನೇಕ
ಪುಸ್ತಕಗಳಿವೆ.ವಾರಕ್ಕೊಂದು ಪಸ್ತಕಗಳಂತೆ ಸಾಧ್ಯವಾದಷ್ಟು ಪುಸ್ತಕಗಳನ್ನು ಓದಿ ಜ್ಞಾನವಂತರಾಗ
ಬೇಕು
No comments:
Post a Comment