ಗಣಿತ ಶಿಬಿರ-2014-15ರ ವರದಿ
ಶ್ರೀ ಶಾರದಾ ಎ.ಯು.ಪಿ.ಶಾಲೆ ಚೇವಾರು
ದಿನಾಂಕ 20-02-2015 ರಂದು, ಯು.ಪಿ. ವಿಭಾಗದ ಗಣಿತ ಶಿಬಿರವು ಬೆಳಿಗ್ಗೆ 9.30ಕ್ಕೆ ಸಭಾ
ಕಾರ್ಯಕ್ರಮದೊಂದಿಗೆ ಆರಂಭವಾಯಿತು. ಪ್ರಾರ್ಥನೆಯ ನಂತರ ಅತಿಥಿಗಳನ್ನು ಶ್ರೀಮತಿ ರಾಜೇಶ್ವರಿ
ಸ್ವಾಗತಿಸಿದರು. ಶಿಬಿರವನ್ನು ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷರಾದ ಪರಮೇಶ್ವರ
ಪಾವಲುಕೋಡಿ ಉದ್ಘಾಟಿಸಿ,ಗಣಿತದಲ್ಲಿ ಆಸಕ್ತಿ ಬೆಳೆಸಲು ಇಂತಹ ಶಿಬಿರಗಳು ಸಹಕಾರಿ ಎಂದು
ಅಭಿಪ್ರಾಯಪಟ್ಟರು.ಅಧ್ಯಕ್ಷ ಸ್ಥಾನವನ್ನು ವಹಿಸಿ ಮಾತನಾಡಿದ ಮುಖ್ಯ ಶಿಕ್ಷಕ ಶ್ಯಾಮ ಭಟ್,ಶಿಬಿರದ
ಮಹತ್ವವನ್ನು ವಿವರಿಸಿದರು.ಹಿರಿಯ ಅಧ್ಯಾಪಿಕೆ ಸರಸ್ವತಿ,ಗಣಿತವು ಮಾನವನ ಮಾನಸಿಕ ಕ್ರಿಯೆಗಳಾದ
ವಿಚಾರ,ತರ್ಕ,ಅನುಮಾನ,ಏಕಾಗ್ರತೆ ಮುಂತಾದವುಗಳನ್ನುನಿರೂಪಿಸುವ ವ್ಯವಸ್ಥಿತ
ಶಾಸ್ತ್ರವಾಗಿದ್ದು,ವಿದ್ಯಾರ್ಥಿಗಳು ಇದರಲ್ಲಿ ಆಸಕ್ತಿ ಬೆಳೆಸಬೇಕೆಂದು ಕರೆ ಕೊಟ್ಟರು.ಸ್ಟಾಫ್
ಕಾರ್ಯದರ್ಶಿ ವಿನೋದ್ ಗಣಿತ ಕಲಿಕೆಯಲ್ಲಿ ತಮ್ಮ ಅನುಭವವನ್ನುತಿಳಿಸಿದರು. ರವಿಕುಮಾರ್
ವಂದಿಸಿದರು.ಪ್ರಮೀಳಾ,ಪ್ರಸಾದ್ ರೈ,ಪುಷ್ಪಲತಾ, ವಿಜಯನ್ ಸಹಕರಿಸಿದರು.
ಆರಂಭದಲ್ಲಿ ಶಿಬಿರ ಗೀತೆ ಹಾಡಿದ ನಂತರ ಯು.ಪಿ.ವಿಭಾಗದ ಎಲ್ಲಾ ವಿದ್ಯಾರ್ಥಿಗಳನ್ನು
ವೃತ್ತಾಕಾರದಲ್ಲಿ ನಿಲ್ಲಿಸಿ,ವಿವಿಧ ಗುಂಪುಗಳನ್ನಾಗಿ ಮಾಡಲಾಯಿತು.ಗುಂಪುಗಳಿಗೆ
ರಾಮಾನುಜನ್,ಭಾಸ್ಕರಾಚಾರ್ಯ,ಪೈಥಗೋರಸ್,ಆರ್ಯಭಟ,ಶಕುಂತಲಾ ದೇವಿ,ಯೂಕ್ಲಿಡ್,ಆರ್ಕಿಮಿಡೀಸ್ ಮುಂತಾದ
ಹೆಸರುಗಳನ್ನು ಚೀಟಿ ಎತ್ತುವ ಮೂಲಕ ಕೊಡಲಾಯಿತು.ಎಲ್ಲಾ ಗುಂಪುಗಳಿಗೂ ಚಾರ್ಟ್,ಬಣ್ಣದ ಬಟ್ಟೆ
ತುಂಡುಗಳನ್ನು ನೀಡಿ ನಿಖರವಾದ ಅಳತೆಗಳಲ್ಲಿ ವೃತ್ತಾಕಾರದ ಬ್ಯಾಜ್ ಗಳನ್ನು ನಿರ್ಮಿಸುವಂತೆ
ಸೂಚಿಸಲಾಯಿತು.ನಿಗದಿತ ಸಮಯದಲ್ಲಿ ತಮ್ಮ ಚಟುವಟಿಕೆಯನ್ನು ಪೂರ್ಣಗೊಳಿಸಿದರು.ನಿಖರವಾದ
ಅಳತೆ,ಉತ್ಪನ್ನದ ಸೌಂದರ್ಯದ ಮೌಲ್ಯಮಾಪನ ಮಾಡಿ ಅಂಕಗಳನ್ನು ಕೊಡಲಾಯಿತು.ತಾವೇ ತಯಾರಿಸಿದ ಬ್ಯಾಜನ್ನು
ಧರಿಸಿ ವಿದ್ಯಾರ್ಥಿಗಳು ಸಂಭ್ರಮಿಸಿದರು.ಚಹಾ ವಿರಾಮದ ನಂತರ ಅಶ್ವ ಮೇಧ ಎಂಬ ಸ್ಪರ್ಧೆಯಲ್ಲಿ
ಗುಂಪಿನಿಂದ ಒಬ್ಬನನ್ನು/ಳನ್ನು,ಆರಿಸಿ ಅವರ ಬೆನ್ನ
ಹಿಂದೆ ಗಣಿತಕ್ಕೆ ಸಂಬಂಧಿಸಿದ ವಿಷಯವನ್ನೊಳಗೊಂಡ ಚೀಟಿ ಅಂಟಿಸಲಾಯಿತು.10 ಪ್ರಶ್ನೆಗಳನ್ನು ಕೇಳುವ
ಮೂಲಕ ಬೆನ್ನ ಹಿಂದಿರುವ ಪದ ಯಾವುದು ಎಂದು ಹೇಳ ಬೇಕಾದುದು ಅವರಿಗಿರುವ ಸವಾಲು.ಇದನ್ನು ಯಶಸ್ವಿಯಾಗಿ ಪೂರೈಸಿದರು.ತದ ನಂತರ
ಗುಂಪುಗಳಲ್ಲಿ ಟ್ಯಾನ್ ಗ್ರಾಮ್ ನಿರ್ಮಿಸಿದರು.ಭೋಜನ ವಿರಾಮದ ನಂತರ ಕೆರೆ ದಡ ಆಟವನ್ನು ಸಮ
ಸಂಖ್ಯೆ,ವಿಷಮ ಸಂಖ್ಯೆಗಳನ್ನುಪಯೋಗಿಸಿ ಆಡಲಾಯಿತು.ನಂತರ ಪ್ರತಿ ಗುಂಪುಗಳಿಗೆ ಒಂದೇ ಗಾತ್ರದ
ಎರಡೆರಡು ಚೌಕ ಗಳನ್ನು ನೀಡಿ,ಅವುಗಳನ್ನು ಸೇರಿಸಿ ದೊಡ್ಡ ಚೌಕ ನಿರ್ಮಿಸುವಂತೆ
ಸೂಚಿಸಲಾಯಿತು.ಮಕ್ಕಳು ವಿವಿಧ ರೀತಿಗಳಲ್ಲಿ ಕತ್ತರಿಸಿ ನೋಡಿ ಸೇರಿಸಿ ಕೊನೆಗೂ ಯಶಸ್ವಿಯಾದರು.ಇದೇ
ರೀತಿಯಲ್ಲಿ ವ್ಯತ್ಯಸ್ತ ಗಾತ್ರಗಳ ಚೌಕಗಳನ್ನು ನೀಡಿ ಪುನರಾವರ್ತಿಸಲಾಯಿತು.ನಂತರ ಮಕ್ಕಳನ್ನು
ವೃತ್ತಾಕಾರದಲ್ಲಿ ನಿಲ್ಲಿಸಿ ,ಸಂಖ್ಯಾ ಆಟವನ್ನು ಆಡಿಸಲಾಯಿತು.ಚಹಾ ವಿರಾಮದ ನಂತರ ಮೆಮೋರಿ
ಟೆಸ್ಟ್ ಆಟದಲ್ಲಿ, ಗಣಿತದ ವಿವಿಧ ವಸ್ತುಗಳನ್ನು ವಿದ್ಯಾರ್ಥಿಗಳು ವೀಕ್ಷಿಸಿ,ನಂತರ ನೆನಪಿಸಿ
ಅವುಗಳ ಹೆಸರನ್ನು ಬರೆದರು.ಶಿಬಿರದ ಕೊನೆಗೆ ತಮ್ಮ ತಮ್ಮ ಅನುಭವಗಳನ್ನು ಬರೆದರು.ಪ್ರತಿ ಗುಂಪುಗಳು
ಪ್ರತಿ ಚಟುವಟಿಕೆಗಳಲ್ಲಿ ಗಳಿಸಿದ ಅಂಕಗಳನ್ನು ಘೋಷಿಸಲಾಯಿತು.
ಗಣಿತೋತ್ಸವದ
ಸಮಾರೋಪ ಸಮಾರಂಭ
ಚೇವಾರು ಶ್ರೀ ಶಾರದಾ ಎ.ಯು.ಪಿ.ಶಾಲೆಯಲ್ಲಿ ಗಣಿತೋತ್ಸವದ ಅಂಗವಾಗಿ ನಡೆಸಲ್ಪಟ್ಟ ಗಣಿತ
ಶಿಬಿರ ಹಾಗೂ ಮೆಟ್ರಿಕ್ ಮೇಳಗಳ ಸಮಾರೋಪ ಸಮಾರಂಭದ, ಅಧ್ಯಕ್ಷ ಸ್ಥಾನವನ್ನು ಸ್ಕೌಟ್ ಅಧ್ಯಾಪಕರಾದ
ಶ್ರೀ ವಿನೋದ್ ವಹಿಸಿ,ವಿದ್ಯಾರ್ಥಿಗಳು ತಯಾರಿಸಿದ ಗಣಿತ ಚಿಗುರು ಎಂಬ ಮ್ಯಾಗಜಿನ್
ಬಿಡುಗಡೆಗೊಳಿಸಿದರು.ಹಿರಿಯ ಅಧ್ಯಾಪಿಕೆ ಶ್ರೀಮತಿ ಸರಸ್ವತಿ ಶಿಬಿರದಲ್ಲಿ ವಿದ್ಯಾರ್ಥಿಗಳು ತೋರಿದ
ಆಸಕ್ತಿಯ ಕುರಿತು ವಿವರಿಸಿದರು.ಸಂಪನ್ಮೂಲ ವ್ಯಕ್ತಿ ರವಿ ಕುಮಾರ್ ಶಿಬಿರದಿಂದಾದ ಪ್ರಯೋಜನದ
ಕುರಿತು ತಿಳಿಸಿದರು.ವಿದ್ಯಾರ್ಥಿಗಳು ಶಿಬಿರದ ಕುರಿತಾದ ತಮ್ಮ ಅನುಭವಗಳನ್ನು
ಹಂಚಿಕೊಂಡರು.ಪ್ರಸಾದ್ ರೈ ಸ್ವಾಗತಿಸಿದರು.ಶ್ರೀಮತಿ ರಾಜೇಶ್ವರಿ ವಂದಿಸಿದರು. ಶ್ರೀಮತಿ ಪುಷ್ಪ
ಲತಾ ಕಾರ್ಯಕ್ರಮ ನಿರೂಪಿಸಿದರು.ಸಂಪನ್ಮೂಲ ವ್ಯಕ್ತಿಗಳಾಗಿ ಶಿಕ್ಷಕ ಶ್ರೀ ರವಿಕುಮಾರ್, ಶ್ರೀ ವಿನೋದ್.ಕೆಶ್ರೀಮತಿರಾಜೇಶ್ವರಿ.ಬಿ
ಶಿಬಿರವನ್ನು ನಿರ್ವಹಿಸಿದರು.
No comments:
Post a Comment