ಥಾಮಸ್ ಆಲ್ವ ಎಡಿಸನ್ ಅಮೇರಿಕಾದ ಮಿಲಾನ್ ಎಂಬಲ್ಲಿ 1847ರ ಫೆಬ್ರವರಿ 11 ರಂದು
ಹುಟ್ಟಿದರು.ಬಾಲ್ಯದಲ್ಲೇ ಪ್ರತಿಭಾವಂತ.ಅನ್ವೇಷಣಾ ಗುಣ ರಕ್ತಗತವಾಗಿತ್ತು.10
ವರ್ಷದವನಾಗಿದ್ದಾಗಲೇ ಮನೆಯಲ್ಲಿ ಪ್ರಯೋಗ ಶಾಲೆ ನಿರ್ಮಿಸಿದ್ದರು.ಪ್ರಯೋಗಕ್ಕೆ ಬೇಕಾದ ಹಣವನ್ನುಪತ್ರಿಕೆ,ಸಿಹಿ
ತಿಂಡಿ ಮಾರಿ ಸಂಗ್ರಹಿಸುತ್ತಿದ್ದರು.ಗ್ರಾಂಡ್ ಟ್ರಂಕ್ ಹೆರಾಲ್ಡ್ ಎಂಬ ಪತ್ರಿಕೆ
ಆರಂಭಿಸಿದರು.1868ರಲ್ಲಿ ಸುಧಾರಿತ ಟೆಲಿಗ್ರಾಫ್ ಮಾದರಿ ತಯಾರಿಸಿ ಪೇಟೆಂಟ್ ಪಡೆದರು.1876ರಲ್ಲಿ
ನ್ಯೂ ಜೆರ್ಸಿಯಲ್ಲಿ ಪ್ರಯೋಗಾಲಯ ಹಾಗೂ ಕಾರ್ಖಾನೆ ಸ್ಥಾಪಿಸಿದರು.ಇಲ್ಲಿ ಸುಧಾರಿತ ದೂರ ವಾಣಿ
ಪ್ರೇಷಕ ಮತ್ತು ಫೋನೋಗ್ರಾಫ್ ಕಂಡು
ಹಿಡಿದರು.1878ರಲ್ಲಿ ವಿದ್ಯುತ್ ದೀಪ ಕಂಡುಹಿಡಿದರು.ಇದಲ್ಲದೇ ವಿದ್ಯುತ್ ಲೇಖನಿ,ಟೈಪ್ ರೈಟರ್,ಚಲನ
ಚಿತ್ರ ಕ್ಯಾಮರಾ ಕೈನಟೋಸ್ಕೋಪ್,ಸಂಚಯನ ವಿದ್ಯುತ್ ಕೋಶ ಹೀಗೆ ಅನೇಕ ವಸ್ತುಗಳು.
ಪ್ರತಿಭೆ ಎಂದರೆ 99 ಭಾಗ ಶ್ರಮ,ಒಂದು ಭಾಗ ಮಾತ್ರ ಸ್ಪೂರ್ತಿ ಎಂದು ನಂಬಿದ್ದರು.1913ರ
ಅಕ್ಟೋಬರ್ 18ರಂದು ತೀರಿಹೋದರು.ಸತತ ಪ್ರಯತ್ನದಿಂದ ಯಶಸ್ಸು ಸಾಧ್ಯ ಎಂಬುದಕ್ಕೆ ಎಡಿಸನ್ ಸಾಕ್ಷಿ.
No comments:
Post a Comment