ಫೆಬ್ರವರಿ-21 ಲೋಕ ಮಾತೃ ಭಾಷಾ ದಿನ
ಜಗತ್ತಿನಲ್ಲಿ ಸಸ್ಯ ಪ್ರಭೇದಗಳು,ಜೀವಿಗಳು ಅಳಿವಿನಂಚಿಗೆ ಸಾಗುತ್ತಿರುವಂತೆ,ಅನೇಕ ಭಾಷೆಗಳೂ
ಅವನತಿಯನ್ನು ಕಂಡು ನಶಿಸಿ ಹೋಗುತ್ತಿವೆ.ಜಾಗತೀಕರಣದ ಭರಾಟೆಯಲ್ಲಿ ಜಗತ್ತು ಕಿರಿದಾಗಿದ್ದು,ಅನೇಕ
ಮಾತೃ ಭಾಷೆಗಳ ನಾಶಕ್ಕೆ ನಾಂದಿ ಹಾಡಿವೆ.ಅನೇಕ ವರ್ಷಗಳ ಹಿಂದೆ ಜಗತ್ತಿನಲ್ಲಿ ಸುಮಾರು 8000ದಷ್ಟು
ವಿವಿಧ ಭಾಷೆಗಳಿದ್ದುವು.ಈಗ ಅವುಗಳ ಸಂಖ್ಯೆ
6500ಕ್ಕೆ ಇಳಿದಿರುವುದು ಆತಂಕಕ್ಕೆ ಈಡುಮಾಡಿದೆ.ಇವುಗಳಲ್ಲಿ ಅರ್ಧದಷ್ಟು ಭಾಷೆಗಳು ನಶಿಸುವ
ಹಂತದಲ್ಲಿದೆ.ವಿಶ್ವದಲ್ಲಿ ಪ್ರತಿ 2 ವಾರಕ್ಕೊಮ್ಮೆ ಒಂದು ಭಾಷೆ ನಶಿಸಿಹೋಗುತ್ತಿದೆ ಎಂಬುದು
ಅಧ್ಯಯನ ವರದಿ.ಭಾಷೆಯು ಸಮಾಜದಲ್ಲಿ ಪ್ರಧಾನ ಪಾತ್ರ ವಹಿಸುತ್ತದೆ.ಇದು ಸಂವಹನಕ್ಕೆ
ಮಾತ್ರವಲ್ಲದೆ,ಒಂದು ಸಂಸ್ಕೃತಿಯನ್ನು ಬಿಂಬಿಸಿ ಬೆಳೆಸುವಲ್ಲಿ ಪ್ರಧಾನ ಪಾತ್ರ ವಹಿಸುತ್ತದೆ.ಭಾಷೆಯು
ಸಮಾಜದ ಜನ ಸಮೂಹದ ಸಂಸ್ಕೃತಿ,ಚರಿತ್ರೆ,ವಂಶ ಪಾರಂಪರ್ಯವನ್ನು ನಿರ್ಧರಿಸುತ್ತದೆ.ಒಂದು ಭಾಷೆಯ
ಅಳಿವು,ಒಂದು ಸಂಸ್ಕೃತಿ ಮತ್ತು ಪರಂಪರೆಯ ನಾಶವಾಗಿದೆ.ವಿನಾಶದ ಅಂಚಿಗೆ ತಲುಪಿದ ಭಾಷೆಯನ್ನು
ಉಳಿಸುವ ಮೂಲಕ ಒಂದು ಸಂಪ್ರದಾಯವನ್ನು ಉಳಿಸಬಹುದು.ಯುನೆಸ್ಕೋ ಫೆಬ್ರವರಿ-21 ಲೋಕ ಮಾತೃ ಭಾಷಾ
ದಿನವನ್ನಾಗಿ ಆಚರಿಸುವ ಮೂಲಕ ಜನರಲ್ಲಿ ಜಾಗೃತಿಯನ್ನು ಉಂಟುಮಾಡುತ್ತಿದೆ.
No comments:
Post a Comment