ಶಿಕ್ಷಕರ ದಿನಾಚರಣೆ
ಗು
|
ರುವೆಂದರೆ ಮಾರ್ಗದರ್ಶಿ,ಪ್ರತಿಭೆಯ ಶೋಧಕ, ಮೌಲ್ಯಗಳ ಕೈಮರ,ಸ್ನೇಹಿತ.ಇಂತಹ ಗುರುಗಳನ್ನು ನೆನೆಯುವ
ದಿನವೇ ಶಿಕ್ಷಕರ ದಿನ.
ಭಾರತದ ಉಪರಾಷ್ಟ್ರಪತಿಯಾಗಿ, ಹಿಂದೆ ಎರಡು ಬಾರಿ ಆಯ್ಕೆಯಾಗಿ,1962ರಲ್ಲಿ ಭಾರತದ
ರಾಷ್ಟ್ರಪತಿಯಾಗಿ ಆಯ್ಕೆಯಾದ,ಉತ್ತಮ ಶಿಕ್ಷಕರಾಗಿದ್ದ,ಡಾ.ಸರ್ವಪಳ್ಳಿ ರಾಧಾಕೃಷ್ಣನ್ ಅವರ
ಜನ್ಮದಿನವಾದ ಸೆಪ್ಟಂಬರ್ 5ನೇ ತಾರೀಕನ್ನು ಶಿಕ್ಷಕರ ದಿನವನ್ನಾಗಿ ಆಚರಿಸಲಾಗುತ್ತಿದೆ.
ರಾಧಾಕೃಷ್ಣನ್ ಅವರು ಆಂಧ್ರ ಪ್ರದೇಶದಲ್ಲಿ ಜನಿಸಿದರೂ,.ತಮಿಳು ಅವರ ಮಾತೃ
ಭಾಷೆ.ಮಲಯಾಳಂನಲ್ಲಿ ಶಿಕ್ಷಕ ವೃತ್ತಿ ನಿರ್ವಹಿಸಿದವರು. ಶಿಕ್ಷಕವೃತ್ತಿಯ ಪಾವಿತ್ರ್ಯ ಮತ್ತು
ಮೌಲ್ಯಗಳಿಗೆ ವಿಶಾಲ ಆಯಾಮವನ್ನು ದೊರಕಿಸಿ
ಕೊಟ್ಟವರು.1975ರಲ್ಲಿ ಇಹಲೋಕ ತ್ಯಜಿಸಿದರು.ನಮ್ಮಲ್ಲಿರುವ ಅಜ್ಞಾನವನ್ನು
ತೊಲಗಿಸಿ,ನಮ್ಮನ್ನು ಮುನ್ನಡೆಸುವ ಎಲ್ಲಾ ಗುರು ವೃಂದದವರಿಗೆ ನಮ್ಮ ಪ್ರೀತಿ ಪೂರ್ವಕ ನಮನ.
IIಶ್ರೀ ಗುರುಭ್ಯೋ ನಮ: II
No comments:
Post a Comment