ಭಾರತದ ಅಸಂಖ್ಯ
ಭೂಪ್ರದೇಶಕ್ಕೆ ನೀರು ಹರಿಸಿದ ಭಗೀರಥನಾಗಿ,ಪ್ರತಿಯೊಬ್ಬ ಪ್ರಜೆಗೆ ಮೂಲಭೂತ ಶಿಕ್ಷಣ ನೀಡಲು
ಶ್ರಮಿಸಿದ ಶಿಕ್ಷಣತಜ್ಞನಾಗಿ,ಬ್ರಿಟಿಷರ ಕಾಲದಲ್ಲೇ ಅಭಿವೃದ್ಧಿಗೆ ಭದ್ರ ಬುನಾದಿ ಹಾಕಿದ
ಹರಿಕಾರನಾಗಿ ನಾಡಿನ ಜನಮನದಲ್ಲಿ ಶಾಶ್ವತವಾಗಿ ನೆಲೆಸಿದವರು,ಸರ್ ಮೋಕ್ಷಗುಂಡಂ ವಿಶ್ವೇಶ್ವರಯ್ಯ.ಅವರ
ಜನ್ಮ ದಿನ ವನ್ನು ಇಂಜಿನಿಯರ್ ಗಳ ದಿನವನ್ನಾಗಿ ಆಚರಿಸಲಾಗುತ್ತಿದೆ.
ಮೈಸೂರಿನ ದಿವಾನರೂ,ಮುಖ್ಯ ಇಂಜಿನಿಯರ್ ಆಗಿದ್ದ,ಸರ್ ಮೋಕ್ಷಗುಂಡಂ ವಿಶ್ವೇಶ್ವರಯ್ಯನವರು
1860ರ ಸೆಪ್ಟೆಂಬರ್-15ರಂದು ಕೋಲಾರದ ಮುದ್ದೇನ ಹಳ್ಳಿಯಲ್ಲಿ ಜನಿಸಿದರು. ತಂದೆ ಶ್ರೀನಿವಾಸ ಶಾಸ್ತ್ರಿ,ತಾಯಿ ವೆಂಕಟ
ಲಕ್ಷ್ಮಿ.
ಇಂದು ಇಂಜಿನಿಯರ್ಸ್ ಡೇ..
ಶಿಕ್ಷಣ ತಜ್ಞರಾಗಿ,ಕೈಗಾರಿಕಾ ಕ್ರಾಂತಿಯ
ಹರಿಕಾರರಾಗಿ,ಆರ್ಥಿಕ ಪ್ರಗತಿಯಮಾರ್ಗದರ್ಶಕರಾಗಿ,ಅನೇಕ ಕ್ಷೇತ್ರಗಳಲ್ಲಿ ಬಹಲಷ್ಟು
ಕೆಲಸಮಾಡಿ,102 ವರ್ಷಗಳ ಕಾಲ ಸ್ವಚ್ಛ ಸುಂದರ ಬದುಕನ್ನು ನಡೆಸಿದ ಅಪ್ರತಿಮ ದೇಶಭಕ್ತ,ಚತುರ
ಇಂಜಿನಿಯರ್,ದಕ್ಷ ಆಡಳಿತಗಾರ,ಪ್ರಾಮಾಣಿಕ ಸಹೃದಯಿ ಸರ್.ಎಂ ವಿಶ್ವೇಶ್ವರಯ್ಯ ಅವರ 155ನೇ
ಹುಟ್ಟು ಹಬ್ಬವನ್ನುಇಂಜಿನಿಯರ್ಸ್ ಡೇ, ಎಂದು ದೇಶಾದ್ಯಂತ ಆಚರಿಸಲಾಗುತ್ತಿದೆ.
|
No comments:
Post a Comment