ಚೇವಾರು ಶಾಲಾ ವಿದ್ಯಾರ್ಥಿಗಳಿಂದ ಸಹಾಯ
ಚೇವಾರು: ಕಷ್ಟದಲ್ಲಿರುವವರಿಗೆ ಸಹಾಯ ಮಾಡಬೇಕು,ಆ ರೀತಿಯಲ್ಲಿ ನೊಂದವರ ಕಣ್ಣೊರಸುವ
ಕೆಲಸವನ್ನು ಬಾಲ್ಯದಿಂದಲೇ ನಾವು ಮೈಗೂಡಿಸುತ್ತಾ ಸಮಾಜಮುಖಿಗಳಾಗಬೇಕು ಎಂದು ಶಾಲಾ ಕಲಿಕೆಯ ಮೂಲಕ
ತಿಳಿದು ಕೊಂಡ ಚೇವಾರು ಶ್ರೀ ಶಾರದಾ ಎ.ಯು.ಪಿ.ಶಾಲಾ ವಿದ್ಯಾರ್ಥಿಗಳು ಅಶಕ್ತ ಮಕ್ಕಳಿಗೆ ಸಹಾಯ
ಮಾಡುವುದರ ಮೂಲಕ ಮಾಡಿ ತೋರಿಸಿದರು. ಪವಿತ್ರ ರಂಜಾನ್ ಹಬ್ಬದ ಆಚರಣೆಯ ಅಂಗವಾಗಿ,ಅಶಕ್ತ ,ಬಡತನಹೊಂದಿರುವ ಸಹಪಾಠಿಗಳಾದ ಚೇವಾರು ಸುದೀಪ್
ಚೌಹಾಣ್,ಮೇರ್ಕಳ ಮೊಹಮ್ಮದ್ ಅನಸ್ ಅವರ ಮನೆಗಳಿಗೆ ಭೇಟಿ ನೀಡಿ ಆಹಾರ ವಸ್ತು,ಬಟ್ಟೆ,ಕಲಿಕೋಪಕರಣ
ಕಿಟ್ ನ್ನು ನೀಡಿದರು.ಶಾಲಾ ಉಪನಾಯಕ ಅಬ್ದುಲ್ ನವಾಝ್ ಹಾಗೂ ವಿವಿಧ ತರಗತಿ ನಾಯಕರು
ಪಾಲ್ಗೊಂಡರು.ಶಾಲಾ ಮುಖ್ಯ ಶಿಕ್ಷಕ ಶ್ಯಾಮ ಭಟ್,ಸ್ಕೌಟ್ ಅಧ್ಯಾಪಕ ವಿನೋದ್,ಸುಬೈದಾ ಯಂ.ಪಿ.ಪ್ರಸಾದ್ ರೈ,ಹಾಗೂ ಶಿಕ್ಷಕ ವೃಂದ ಉಪಸ್ಥಿತರಿದ್ದರು.
No comments:
Post a Comment