ಚೇವಾರಿನಲ್ಲಿ ವಿಶ್ವ ಜನಸಂಖ್ಯಾ ದಿನಾಚರಣೆ
ಚೇವಾರು ಶ್ರೀ ಶಾರದಾ ಹಿರಿಯ
ಪ್ರಾಥಮಿಕ ಶಾಲೆಯಲ್ಲಿ ವಿಶ್ವ ಜನಸಂಖ್ಯಾ ದಿನವನ್ನುವಿವಿಧ ಕಾರ್ಯಕ್ರಮಗಳೊಂದಿಗೆ ಆಚರಿಸಲಾಯಿತು.ಸ್ಟಾಫ್
ಕಾರ್ಯದರ್ಶಿ,ಚೇವಾರು ವಿನೋದ ಅಧ್ಯಕ್ಷತೆವಹಿಸಿ,ಜನಸಂಖ್ಯಾ ನಿಯಂತ್ರಣ ಮಾಡುವ ಅಗತ್ಯತೆಯ ಕುರಿತು
ತಿಳಿಸಿದರು.ಶಾಲಾ ಮುಖ್ಯ ಶಿಕ್ಷಕ ಶ್ಯಾಮ ಭಟ್ ಉದ್ಘಾಟಿಸಿ,ಉತ್ತಮ ಸಮಾಜವನ್ನು,ಒಳ್ಳೆಯ
ಆರೋಗ್ಯವನ್ನು ಪಡೆಯ ಬೇಕಾದರೆ,ಜನಸಂಖ್ಯಾನಿಯಂತ್ರಣವನ್ನು ಪಾಲಿಸ ಬೇಕಾಗಿದೆ,ಇರುವ ಜನರನ್ನು ದೇಶದ
ಶಕ್ತಿಯಾಗಿಸಬೇಕೆಂದು ಅಭಿಪ್ರಾಯಪಟ್ಟರು.ಮುಖ್ಯ ಅತಿಥಿಗಳಾಗಿ ಕಲಾ ಶಿಕ್ಷಕ ಪ್ರಕಾಶ್.ಶಿಕ್ಷಕರಾದ
ರವಿಕುಮಾರ್,ವಿಜಯನ್,ಪ್ರಮೀಳಾ ಡಿ.ಎನ್. ಪುಷ್ಪಲತಾ.ಕೆ.ವಿ ಮಾತನಾಡಿದರು.ಈ ಸಂದರ್ಭದಲ್ಲಿ
ರಸಪ್ರಶ್ನೆ ಸ್ಪರ್ಧೆ, ಪ್ರಬಂಧ ಮಂಡನೆ ಏರ್ಪಡಿಸಲಾಯಿತು.ಪ್ರಸಾದ್ ರೈ ಸ್ವಾಗತಿಸಿದರು.ರಾಜೇಶ್ವರಿ.ಬಿ.ವಂದಿಸಿದರು
No comments:
Post a Comment