ಚೇವಾರಿನಲ್ಲಿ ಗಣಿತದ ಮೆಟ್ರಿಕ್ ಮೇಳ
ಚೇವಾರು ಶ್ರೀ ಶಾರದಾ
ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶಾಲಾ ಮಟ್ಟದ ಗಣಿತ ಮೇಳ ವಿವಿಧ ಕಾರ್ಯಕ್ರಮಗಳೊಂದಿಗೆ
ಜರಗಿತು.ಮೇಳವನ್ನು ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷೆ ಇಂದಿರಾ ಮಿತ್ತಡ್ಕ ಉದ್ಘಾಟಿಸಿ,ಗಣಿತ
ಕ್ಷೇತ್ರಕ್ಕೆ ಭಾರತದ ಕೊಡುಗೆ ಅಪಾರ,ವಿದ್ಯಾರ್ಥಿಗಳು ಗಣಿತದಲ್ಲಿ ಆಸಕ್ತಿಯನ್ನು ಬೆಳೆಸಿ ಇನ್ನಷ್ಟು
ಕೊಡುಗೆಗಳನ್ನು ನೀಡ ಬೇಕೆಂದು ಕರೆಯಿತ್ತರು.ಅಧ್ಯಕ್ಷ ಸ್ಥಾನವನ್ನು ವಹಿಸಿ ಮಾತನಾಡಿದ ಶಾಲಾ
ಮುಖ್ಯ ಶಿಕ್ಷಕ ಶ್ಯಾಮ ಭಟ್,ಎಲ್ಲಾ ಕ್ಷೇತ್ರದ ಬೆಳವಣಿಗೆಗೆ ಗಣಿತವು ಅಗತ್ಯವಾಗಿದ್ದು,ಗಣಿತ
ಕಲಿಕೆಯು ಅನಿವಾರ್ಯವಾಗಿದೆ.ಗಣಿತವನ್ನು ಸರಳವಾಗಿ ಅರ್ಥೈಸಲು ಇಂತಹ ಶಿಬಿರಗಳು ಸಹಕಾರಿ ಎಂದು
ಅಭಿಪ್ರಾಯಪಟ್ಟರು.ಅಧ್ಯಾಪಿಕೆ ಸರಸ್ವತಿ ಶುಭ ಹಾರೈಸಿದರು.ಪ್ರಸಾದ್ ಸ್ವಾಗತಿಸಿದರು.ಪ್ರಮೀಳಾ
ವಂದಿಸಿದರು.ರಾಜೇಶ್ವರಿ ಕಾರ್ಯಕ್ರಮ ನಿರೂಪಿಸಿದರು.ತದನಂತರ ಗಣಿತದ ವಿವಿಧ ಚಟುವಟಿಕೆಗಳನ್ನು
ನೆರವೇರಿಸಲಾಯಿತು.ವಿದ್ಯಾರ್ಥಿಗಳು ತಯಾರಿಸಿದ ಹಸ್ತ ಪತ್ರಿಕೆಗಳನ್ನು ಬಿಡುಗಡೆಗೊಳಿಸಲಾಯಿತು.ಸಂಪನ್ಮೂಲ ವ್ಯಕ್ತಿಯಾಗಿ ವಿನೋದ್ ಚೇವಾರ್ ಸಹಕರಿಸಿದರು.
No comments:
Post a Comment