ಜನವರಿ 12 ರಾಷ್ಟ್ರೀಯ ಯುವ ದಿನ
|
||
‘ಯುವಕರೇ, ಎದ್ದೇಳಿ,ಗುರಿ ಮುಟ್ಟುವ ತನಕ
ನಿಲ್ಲದಿರಿ.ದೇಶಕ್ಕಾಗಿ ಹೋರಾಡಿ’ಎಂದು ಕರೆಯನ್ನಿತ್ತು,ಯುವಕರಲ್ಲಿರುವ ಶಕ್ತಿಯನ್ನು ಜಾಗೃತ ಗೊಳಿಸಿದ
ಮಹಾನ್ ಸಂತ,ಸ್ವಾಮೀ ವಿವೇಕಾನಂದರ ಜನ್ಮ ದಿನ ವಾದ ಜನವರಿ 12ನ್ನು ರಾಷ್ಟ್ರೀಯ ಯುವ ದಿನ
ವನ್ನಾಗಿ ದೇಶದಾದ್ಯಂತ ಆಚರಿಸಲಾಗುತ್ತಿದೆ.
ಸ್ವಾಮೀ ವಿವೇಕಾನಂದರು 1863 ರ ಜನವರಿ 12 ರಂದು
ಪಶ್ಚಿಮ ಬಂಗಾಳದಲ್ಲಿ ಜನಿಸಿದರು.ತಂದೆ ವಿಶ್ವ ನಾಥ ದತ್ತ,ತಾಯಿ ಭವನೇಶ್ವರಿ ದೇವಿ,ದೈವ
ಭಕ್ತರಾಗಿದ್ದರು.ಹೈಸ್ಕೂಲ್ ವಿದ್ಯಾಭ್ಯಾಸ ಮುಗಿಸಿದ ನರೇಂದ್ರ ನಾಥ ದತ್ತರಿಗೆ ಆಧ್ಯಾತ್ಮದಲ್ಲಿ
ಒಲವು ಹೆಚ್ಚಿತು.ಶ್ರೀ ರಾಮ ಕೃಷ್ಣ ಪರಮ ಹಂಸರ ಶಿಷ್ಯರಾದ ನರೇಂದ್ರ ನಾಥ ದತ್ತರು,ಸಮಾಜದಲ್ಲಿ
ರುವ ಅಶಾಂತಿ,ಬಡತನ ನಿರ್ಮೂಲನೆ ಮಾಡಲು ಪಣತೊಟ್ಟರು.
1893ರಲ್ಲಿ ಶಿಕಾಗೋದಲ್ಲಿ ನಡೆದ ಸರ್ವ ಧರ್ಮ
ಸಮ್ಮೇಳನದಲ್ಲಿ ಭಾಗವಹಿಸಿ,ಭಾರತದ ಆದ್ಯಾತ್ಮಿಕ ತತ್ವಗಳನ್ನು ಜಗತ್ತಿಗೇ ಪಸರಿಸಿದರು.
|
Monday, January 11, 2016
YOUTH DAY
Subscribe to:
Post Comments (Atom)
No comments:
Post a Comment