Flash1

ಚೇವಾರು ಶಾಲಾ ಬ್ಲಾಗಿಗೆ ಸ್ವಾಗತ.....WELCOME TO CHEVAR SCHOOL BLOG.....ಚೇವಾರು ಶಾಲಾ ಬ್ಲಾಗಿಗೆ ಸ್ವಾಗತ......WELCOME TO CHEVAR SCHOOL BLOG..

2FLASH NEWS

2021-22ನೇ ಶೈಕ್ಷಣಿಕ ವರ್ಷಕ್ಕೆ ಹಾರ್ದಿಕ ಸ್ವಾಗತಗಳು-ಶಾಲಾ ಅಭಿವೃದ್ದಿಗೆ ಸಹಕರಿಸುತ್ತಿರುವ ಎಲ್ಲಾ ರಕ್ಷಕರಿಗೆ,ವಿದ್ಯಾಭಿಮಾನಿಗಳಿಗೆ ಅಭಿನಂದನೆಗಳು. Visit us.Thank you

Sunday, December 7, 2014

Dr.Ambedkar


ಡಿಸೆಂಬರ್ 6- ಡಾ.ಬಿ .ಆರ್. ಅಂಬೇಡ್ಕರ್ ಸಂಸ್ಮರಣೆ


 ಡಾ.ಬಿ ಆರ್ ಅಂಬೇಡ್ಕರ್ ರವರು 1891 ರ ಎಪ್ರಿಲ್ 14 ರಂದು ಮಹಗಾ ರಾಷ್ಟ್ರದ ಮಹೌ ಎಂಬ ಹಳ್ಳಿಯಲ್ಲಿ ಜನಿಸಿದರು.ಅಂಬೇಡ್ಕರ್ ಅಂದು ಮಹರ್ ದಲಿತ ಸಮಾಜದಲ್ಲಿ ಜನಿಸಿದ್ದರಿಂದ,ಬಾಲ್ಯದಲ್ಲೇ ಅವಮಾನ,ದೌರ್ಜನ್ಯಗಳನ್ನು ಅನುಭವಿಸಿದ್ದರು.ದಲಿತರಿಗೆ ಸಾಮಾಜಿಕವಾಗಿ,ಶೈಕ್ಷಣಿಕವಾಗಿ,ಆರ್ಥಿಕವಾಗಿ ಗೌರವಯುತ  ಸ್ಥಾನಮಾನಗಳನ್ನು ಕಲ್ಪಿಸಿಕೊಡಲು ಅವರು ತಮ್ಮ ಜೀವಿತವನ್ನೇ ಮುಡಿಪಾಗಿಟ್ಟರು.
 ಅವರನ್ನು ಆತ್ಮೀಯತೆಯಿಂದ ಕಂಡ ಸವರ್ಣೀಯ ಶಿಕ್ಷಕರೊಬ್ಬರ ಹೆಸರು ಅಂಬವಾಡೇಕರ್ ತಮ್ಮ ನೆಚ್ಚಿನ ವಿದ್ಯಾರ್ಥಿ ಭೀಮ ರಾವ್ ಗೆ ಅವರಿಗೆ ಈ ಸರ್ ನೇಮ್ ನೀಡಿದರು.ಮುಂಬೈನಲ್ಲಿ ಬಿ.ಎ.ಪದವಿ ಪಡೆದ ಇವರು ಬರೋಡದ ಲೆಫ್ಟಿನೆಂಟ್ ಆದರು.ಅಲ್ಲಿಯಮಹಾರಾಜರು ಅಂಬೇಡ್ಕರ್ ಅವರನ್ನು ಉನ್ನತ ವಿದ್ಯಾಭ್ಯಾಸಕ್ಕಾಗಿ ಅಮೇರಿಕಾಗೆ ಕಳುಹಿಸಿದರು.ಕೊಲಂಬಿಯಾ ಯುನಿವರ್ಸಿಟಿಯಿಂದ M.A.,Ph.D ಪದವಿ ಪಡೆದರು.ಲಂಡನ್ ಯುನಿವರ್ಸಿಟಿಯಿಂದ ದಿ ಪ್ರಾಬ್ಲೆಂ ಆಫ್ ದಿ ರುಪೀ ಮಹಾ ಪ್ರಬಂಧಕ್ಕಾಗಿ ಡಾಕ್ಟರೇಟ್ ಪಡೆದರು.
ಭಾರತಕ್ಕೆ ಮರಳಿದ ಅವರು ಹಿಂದುಳಿದವರ ಉದ್ಧಾರಕ್ಕಾಗಿ ಶ್ರಮಿಸಿದರು.ಸ್ಸಾತಂತ್ರ್ಯ ನಂತರ ಸಂವಿಧಾನ ರಚನಾ ಸಮಿತಿಯ ಅಧ್ಯಕ್ಷರಾದರು.1950ರ ಜನವರಿ 26ರಂದು ಸಂವಿಧಾನ ಅಸ್ತಿತ್ವಕ್ಕೆ ಬಂತು.ಇದು 8 ಹಂತಗಳನ್ನು 315 ಲೇಖನಗಳನ್ನು ಒಳ ಗೊಂಡಿದೆ.ಅಂಬೇಡ್ಕರ್ ರನ್ನು ಸಂವಿಧಾನ ಶಿಲ್ಪಿ ಎಂದು ಕರೆಯಲಾಗುತ್ತದೆ.
1956ರ ಡಿಸೆಂಬರ್ 6 ರಂದು ಕೊನೆಯುಸಿರೆಳೆದರು.

No comments:

Post a Comment