ತನ್ನ ಹೆಸರಿನಲ್ಲಿ ಬಹುಮಾನ ಗಳನ್ನು
ಕೊಡುವುದಕ್ಕಾಗಿ ತಾನು ಗಳಿಸಿದ ಸಂಪತ್ತನ್ನೆಲ್ಲಾ
ಮೀಸಲಿಟ್ಟ ಸ್ವೀಡನ್ ದೇಶದ ವಿಜ್ಞಾನಿ ಆಲ್ ಫ್ರೆಡ್ ನೊಬೆಲ್.ವರ್ಷಂಪ್ರತಿ ವೈದ್ಯ ಶಾಸ್ತ್ರ,ರಸಾಯನ
ಶಾಸ್ತ್ರ,ಭೌತ ಶಾಸ್ತ್ರ,ಸಾಹಿತ್ಯ,ಜಾಗತಿಕ ಶಾಂತಿ ಮತ್ತು ಅರ್ಥ ಶಾಸ್ತ್ರಕ್ಕಾಗಿ ಉತ್ತಮ ಸೇವೆ
ಸಲ್ಲಿಸಿದ ವ್ಯಕ್ತಿಗಳಿಗೆ ನೋಬೆಲ್ ಬಹುಮಾನ ನೀಡಲಾಗುತ್ತಿದೆ.
ಸಾಹಿತ್ಯಕ್ಕಾಗಿ ಭಾರತದಲ್ಲಿ ರವೀಂದ್ರ ನಾಥ
ಟಾಗೋರರಿಗೆ, 1913ರಲ್ಲಿ ಪ್ರಪ್ರಥಮವಾಗಿ ನೋಬೆಲ್ ಪ್ರಶಸ್ತಿ ಲಭಿಸಿತು.ಸಿ.ವಿ.ರಾಮನ್,ಹರ್
ಗೋವಿಂದ ಖೊರಾನಾ,ಮದರ್ ತೆರೆಸಾ,ಸುಬ್ರ್ಹಮಣ್ಯ ಚಂದ್ರ ಶೇಖರ್ ನೊಬೆಲ್ ಪ್ರಶಸ್ತಿ ಪಡೆದ ಇತರ
ಭಾರತೀಯರು.1901 ರಿಂದ ನೊಬೆಲ್ ಪ್ರಶಸ್ತಿ ಕೊಡಲು ಆರಂಭವಾಯಿತು.
ಆಲ್ ಫ್ರೆಡ್ ನೊಬೆಲ್ 1833ರ ಅಕ್ಟೋಬರ್ 21 ರಂದು ಸ್ವೀಡನ್ ದೇಶದ
ಸ್ಟಾಕ್ ಹೋಮ್ ನಲ್ಲಿ ಇಮಾನ್ಯುವೆಲ್ ನೊಬೆಲ್ ಗೆ ಮಗನಾಗಿ ಜನಿಸಿದರು. ಮನೆಯೇ ಮೊದಲ ಪಾಠ
ಶಾಲೆ,ತಂದೆಯೇ ಮೊದಲ ಗುರು.ತನ್ನ ತಂದೆಯ ಪ್ರಯೋಗ ಶಾಲೆಯಲ್ಲಿಯೇ ನೊಬೆಲ್ ಮೊದಲು ಕೆಲಸ ಮಾಡಿದುದು.16ನೇ
ವಯಸ್ಸಿಗೆ ಹಲವು ಭಾಷೆಗಳನ್ನು ಕಲಿತುದಲ್ಲದೆ ರಸಾಯನ ಶಾಸ್ತ್ರ
ವಿದ್ವಾಂಸರೆನಿಸಿಕೊಂಡರು.1850ರಲ್ಲಿ ಹೆಚ್ಚಿನ ಅಧ್ಯಯನಕ್ಕಾಗಿ ಪ್ಯಾರಿಸ್ ಗೆ ತೆರಳಿದರು.ನಂತರ
ಅಮೇರಿಕಾದಲ್ಲಿ ಅಧ್ಯಯನ ಮಾಡಿ ತಂದೆಯ ಪ್ರಯೋಗ ಶಾಲೆಗೆ ಹಿಂತಿರುಗಿದರು.1859ರಲ್ಲಿ ತಂದೆಯ
ಕಾರ್ಖಾನೆ ದಿವಾಳಿಯಾಗಿ,ಹೊಲೆನ್ ಬರ್ಗಿನಲ್ಲಿ ಮತ್ತೊಂದು ಕಾರ್ಖಾನೆ ಶುರುಮಾಡಿದರು.ನೈಟ್ರೋ
ಗ್ಲಿಸರಿನ್ ಉತ್ಪಾದನೆ ಆರಂಭಿಸಿ ಸಿಡಿಮದ್ದುಗಳನ್ನು ತಯಾರಿಸಿದರು.ಕಾರ್ಖಾನೆ ಬೆಂಕಿಗೆ
ಆಹುತಿಯಾಗಿ ತಮ್ಮ ತೀರಿಹೋದರು.ತಂದೆಗೂ ಪಾರ್ಶ್ವ ವಾಯು ಬಡಿಯಿತು.ದಿಕ್ಕೆಟ್ಟ ನೊಬೆಲ್ ಗೆ
ಆಸರೆಯಾದುದು ನಾರ್ವೆ ಹಾಗೂ ಜರ್ಮನಿ.ಅಲ್ಲಿಯೂ ನೈಟ್ಟೋ ಗ್ಲಿಸರಿನ್ ಅಪಾಯಕಾರಿ ವಸ್ತುವಾಗಿ
ಪರಿಣಮಿಸಿದಾಗ ಸರಕಾರ ಅದನ್ನು ನಿಷೇಧಿಸಿತು.1886ರಲ್ಲಿ ನೈಟ್ರೋ ಗ್ಲಿಸರಿನ್ ನನ್ನು
ಸುರಕ್ಷಿತವಾಗಿ ಸಂರಕ್ಷಿಸುವ ವಿಧಾನವನ್ನು ಕಂಡುಹಿಡಿದರು.ಇದನ್ನು ಘನ ರೂಪಕ್ಕೂ
ಬದಲಾಯಿಸಿದರು.ಇದನ್ನು ಡೈನಮೈಟ್ ಎಂದು ಕರೆದರು.ಇದರ ಪೇಟೆಂಟ್ ಪಡೆದು ನೊಬೆಲ್
ಶ್ರೀಮಂತರಾದರು.1887 ರಲ್ಲಿ ಹೊಗೆ ರಹಿತ ನೈಟ್ರೋ ಗ್ಲಿಸರಿನ್ ಪುಡಿ ಕಂಡು ಹಿಡಿದು ವಿವಿಧ
ದೇಶಗಳಿಗೆ ಸರಬರಾಜಾಯಿತು.ಹೀಗೆ ಅನೇಕ ಪೇಟೆಂಟ್ಗಳನ್ನು ಪಡೆದು ಆಗರ್ಭ ಶ್ರೀಮಂತರಾದರು.1898
ರಲ್ಲಿ ತೀರಿಕೊಂಡಾಗ ಅವರಲ್ಲಿ ಉಳಿದಿತ್ತು.ಈ ಮೊತ್ತದ ಬಡ್ಡಿಯಂದ.ವರ್ಷಂಪ್ರತಿ ಆಲ್ಫ್ರೆಡ್
ನೊಬೆಲ್ ಸಂಸ್ಮರಣಾರ್ಥ ನೊಬೆಲ್ ಪ್ರಶಸ್ತಿ ನೀಡಲಾಗುತ್ತಿದೆ.
No comments:
Post a Comment