ಡಿಸೆಂಬರ್ 26-ಬಾಬಾ ಆಮ್ಟೆ ಜನ್ಮ
ದಿನ
ಮಹಾತ್ಮಾ ಗಾಂಧೀಜಿಯವರ ಆದರ್ಶಗಳನ್ನು ತನ್ನ ಜೀವನದಲ್ಲಿ ಚಾಚೂ ತಪ್ಪದ ಅಳವಡಿಸಿದ ಮುರಳೀಧರ್
ದೇವದಾಸ್ ಆಮ್ಟೆ,ಮಹಾರಾಷ್ಟ್ರದ ವರೋರದಲ್ಲಿ 1914ರ ಡಿಸೆಂಬರ್ 26ರಂದು ಜನಿಸಿದರು.
ಸತ್ಯ ಸಂಧತೆಯನ್ನು ವಕೀಲಿ ವೃತ್ತಿಯಲ್ಲಿ ಪಾಲಿಸಲು ಕಷ್ಟವಾಗಿ,ಆ ವೃತ್ತಿಯನ್ನು ಬಿಟ್ಟು,ವೃದ್ಧರ,ಕುಷ್ಠರೋಗಿಗಳ,ಬಡಬಗ್ಗರ
ಸೇವೆಯಲ್ಲಿ ತಮ್ಮ ಜೀವನವನ್ನು ತೊಡಗಿಸಿಕೊಂಡರು. ಕುಷ್ಠರೋಗಿಗಳನ್ನು ಹೀನಾಯವಾಗಿ ಕಾಣುತ್ತಿದ್ದ ಆ
ಕಾಲದಲ್ಲಿ,ಆಮ್ಟೆ ತನ್ನ ಶರೀರಕ್ಕೆ ರೇಗಾಣುಗಳನ್ನು ಚುಚ್ಚಿಸಿ ಸಮಾಜದ ಕಣ್ತೆರೆಸಿದರು.1956ರಲ್ಲಿ ಕುಷ್ಠರೋಗಿಗಳ
ಆಶ್ರಯಕ್ಕಾಗಿ ಆನಂದ ಭವನ ಎಂಬ ಆಶ್ರಮವನ್ನು ಸ್ಥಾಪಿಸಿದರು.ಮಾನವ ಹಕ್ಕುಗಳ ರಕ್ಷಣೆಗಾಗಿ
ಹೋರಾಡಿದರು.1990ರಲ್ಲಿ ಸರ್ದಾರ್ ಸರೋವರದ ಅಣೆಕಟ್ಟಿನ ವಿರುದ್ಧ ಚಳವಳಿ ನಡೆಸಿದರು.ಮೇಧಾ
ಪಾಟ್ಕರ್ ರ ಜತೆಯಲ್ಲಿ ಪರಿಸರ ಸಂರಕ್ಷಣೆಗಾಗಿ ದುಡಿದರು.
ಪದ್ಮ ವಿಭೂಷಣ.ಮ್ಯಾಗ್ಸಸೆ ಮೊದಲಾದ ಪ್ರಶಸ್ತಿಗಳು ದೊರಕಿದವು.
No comments:
Post a Comment