ಫೆಬ್ರವರಿ 28,ರಾಷ್ಟ್ರೀಯ
ವಿಜ್ಞಾನ ದಿನ
ಭಾರತದ ಶ್ರೇಷ್ಠ ವಿಜ್ಞಾನಿಗಳಲ್ಲಿ ಒಬ್ಬರಾದ ಸರ್ ಸಿ.ವಿ.ರಾಮನ್ ಆವಿಷ್ಕರಿಸಿದ ರಾಮನ್
ಪರಿಣಾಮವನ್ನು ಲೋಕಕ್ಕೆ ಪರಿಚಯಿಸಿದ ದಿನವಾದ ಫೆಬ್ರವರಿ 28ನ್ನು ರಾಷ್ಟ್ರೀಯ ವಿಜ್ಞಾನ
ದಿನವನ್ನಾಗಿ ಆಚರಿಸಲಾಗುತ್ತಿದೆ.
ವಿಜ್ಞಾನದ ಮೂಲ ತತ್ವವೆಂದರೆ ಕೇವಲ ಉಪಕರಣವಲ್ಲ.ಸ್ವತಂತ್ರವಾಗಿ ಆಲೋಚಿಸುವುದು ಹಾಗೂ ಶ್ರಮದ
ದುಡಿಮೆ ಎಂದವರು ಸರ್ ಸಿ.ವಿ.ರಾಮನ್.
ಚಂದ್ರ ಶೇಖರ ವೆಂಕಟ ರಾಮನ್,ತಮಿಳುನಾಡಿನ ತಿರುಚಿರ ಪಳ್ಳಿಯಲ್ಲಿ 1888ರ ನವೆಂಬರ್ 7ರಂದು
ಜನಿಸಿದರು.ತಂದೆ ಚಂದ್ರ ಶೇಖರ ಅಯ್ಯರ್ ಅಧ್ಯಾಪಕರಾಗಿದ್ದರು.ತಾಯಿ ಪಾರ್ವತಿ ಅಮ್ಮಾಳ್.ಓದಿನಲ್ಲಿ
ಮುಂದಿದ್ದ ರಾಮನ್,ಚಿಕ್ಕಂದಿನಲ್ಲೇ ವಿಜ್ಞಾನದಲ್ಲಿ ಆಸಕ್ತಿ ಬೆಳೆಸಿದ್ದರು.
No comments:
Post a Comment