Flash1

ಚೇವಾರು ಶಾಲಾ ಬ್ಲಾಗಿಗೆ ಸ್ವಾಗತ.....WELCOME TO CHEVAR SCHOOL BLOG.....ಚೇವಾರು ಶಾಲಾ ಬ್ಲಾಗಿಗೆ ಸ್ವಾಗತ......WELCOME TO CHEVAR SCHOOL BLOG..

2FLASH NEWS

2021-22ನೇ ಶೈಕ್ಷಣಿಕ ವರ್ಷಕ್ಕೆ ಹಾರ್ದಿಕ ಸ್ವಾಗತಗಳು-ಶಾಲಾ ಅಭಿವೃದ್ದಿಗೆ ಸಹಕರಿಸುತ್ತಿರುವ ಎಲ್ಲಾ ರಕ್ಷಕರಿಗೆ,ವಿದ್ಯಾಭಿಮಾನಿಗಳಿಗೆ ಅಭಿನಂದನೆಗಳು. Visit us.Thank you

Monday, March 23, 2015

Bhagath sing


ಮಾರ್ಚ್23 ಭಗತ್ ಸಿಂಗ್ ಸಂಸ್ಮರಣೆ

ಗತ್ ಸಿಂಗ್ ದೇಶಕ್ಕಾಗಿ ತಾರುಣ್ಯದಲ್ಲೇ ಪ್ರಾಣವನ್ನರ್ಪಿಸಿದ ಧೀರೋದ್ಧಾತ ಕ್ರಾಂತಿಕಾರಿ.ಗಾಂಧೀಜಿಯವರ ಅಹಿಂಸಾ ಮಾರ್ಗದಿಂದ ವಿಮುಖರಾಗಿ ಬ್ರಿಟಿಷರ ಪ್ರಾಣವವನ್ನು ತೆಗೆಯಲು ಹಿಂಜರಿಯಲಿಲ್ಲ.
ಭಗತ್ ಸಿಂಗ್ ರು 1907ರ ಸೆಪ್ಟೆಂಬರ್:28  ರಂದು ಪಂಜಾಬಿನ ರೈತ ಕುಟುಂಬದಲ್ಲಿ ಜನಿಸಿದರು.ಜಲಿಯನ್ ಬಾಗಲ್ಲಿ ನಡೆದ ಮಾರಣಹೋಮ ಭಗತ್ ಸಿಂಗ್ ನ ಮನದಲ್ಲಿ ಬ್ರಟಚಿಷರ ವಿರುದ್ಧ ದ್ವೇಷ ಕಾರುವಂತೆ ಮಾಡಿತು.
1928 ರಲ್ಲಿ ಭಾರತ ವಿದ್ಯಮಾನ ಹಾಗೂ ಸ್ವಾತಂತ್ರ್ಯದ ಕುರಿತು ಚರ್ಚಿಸ,ಲು ಸೈಮನ್ ಆಯೋಗ ಬಂದಿತ್ತು.ಇದರಲ್ಲಿ ಭಾರತೀಯರಿಲ್ಲದ ಕಾರಣ ಲಾಲಾಲಜಪತ್ ರಾಯ್ ನೇತೃತ್ವದಲ್ಲಿ ನಡೆದ ಬೃಹತ್ ಮೆರವಣಿಗೆಯಲ್ಲಿ ಭಗತ್ ಸಿಂಗ್ ರು ಭಾಗವಹಿಸಿದರು. ಭಗತ್ ಸಿಂಗ್,ಚಂದ್ರ ಶೇಖರ ಆಜಾದ್,ರಾಜಗುರು,ಸುಖದೇವ್ ,ಬ್ರಿಟಿಷ್ ಅಧಿಕಾರಿ ಸ್ಕಾಟ್ ನನ್ನು ಕೊಲ್ಲಲು ಯೋಜಿಸಿದರು.ಆದರೆ ಸ್ಕಾಟ್ ಬದಲಿಗೆ ಸ್ಯಾಂಡರ್ಸ ಬಲಿಯಾದನು.ನಂತರ ಶಾಸನ ಸಭೆಯಲ್ಲಿ ಭಗತ್ ಸಿಂಗ್,ತನ್ನ ಸಹಚರರೊಂದಿಗೆ ಕೈ ಬಾಂಬ್ ಎಸೆದರು.ಇದಕ್ಕಾಗಿ ಅವರನ್ನು ಬಂಧಿಸಿದ ಬ್ರಿಟಿಷರು,1931ರ ಮಾರ್ಚ್ 23 ರಂದು, ಭಗತ್ ಸಿಂಗ್ ರನ್ನು ಗಲ್ಲಿಗೇರಿಸಿದರು.ಇಂಕ್ವಿಲಾಬ್ ಜಿಂದಾಬಾದ್ ಎಂದು ಘೋಷಿಸುತ್ತಾ,ಪುನ ಹುಟ್ಟುವುದಾದರೆ ಭಾರತದಲ್ಲೇ ಹುಟ್ಟುತ್ತೇನೆ ಎಂದು ಕೊನೆಯುಸಿರೆಳೆದರು.

No comments:

Post a Comment