ಮಾರ್ಚ್ 14 ಅಲ್ಬರ್ಟ್ ಐನ್ ಸ್ಟೀನ್ ಜನ್ಮ ದಿನ
ಆಧುನಿಕ ಭೌತ ಶಾಸ್ತ್ರದ ಜನಕ ಎಂದು ಪ್ರಸಿಧ್ಧಿ ಪಡೆದ ಅಲ್ಬರ್ಟ್ ಐನ್ ಸ್ಟೀನ್,20ನೇ ಶತಮಾನದ
ಶ್ರೇಷ್ಠ ವಿಜ್ಞಾನಿಯಾಗಿದ್ದರು.
1879ರ ಮಾರ್ಚ್ 14ರಂದು ಜರ್ಮನಿಯ ವುರ್ಟೆನ್ಬರ್ಗ್ ನ ಉಲ್ಮ್ ಎಂಬಲ್ಲಿ
ಜನಿಸಿದರು.ಬಾಲ್ಯದಲ್ಲಿ ಗಣಿತದಲ್ಲಿ ತೀವ್ರ ಆಸಕ್ತಿ ಹೊಂದಿದ್ದರು. ವಿಜ್ಞಾನ ಅವರ ನೆಚ್ಚಿನ
ವಿಷಯವಾಗಿತ್ತು.ನಂತರ ಸ್ವಿಜರ್ ಲ್ಯಾಂಡಿನ ಪೌರರಾದರು.
ಐನ್ ಸ್ಟೀನ್ ಯಾವಾಗಲೂ ವಿಜ್ಞಾನದ ಕುರಿತೇ ಚಿಂತಿಸುತ್ತಿದ್ದರು.1905ರಲ್ಲಿ ಪಿ.ಎಚ್ಚ್.ಡಿ.ಪಡೆದರು.ವಿಜ್ಞಾನದಲ್ಲಿ
5 ಸಂಶೋಧನಾತ್ಮಕ ಪ್ರಬಂಧಗಳನ್ನು ಬರೆದರು.
ಬೆಳಕಿನ ಗುಣ ಧರ್ಮದ ಕುರಿತು ಅಧ್ಯಯನ ಮಾಡಿ,ಬೆಳಕಿನ ವೇಗವೇ ಗರಿಷ್ಠ ಎಂದು ಕಂಡುಕೊಂಡರು.ಟಂಗ್
ಸ್ಟನ್ಗಳಂತಹ ಲೋಹದ ಮೇಲೆ ಬೆಳಕು ಬಿದ್ದಾಗ,ಅದರಿಂದ ಎಲೆಕ್ಟ್ರಾನುಗಳು ಬಿಡುಗಡೆ ಹೊಂದುತ್ತವೆ
ಎಂದು ಕಂಡು ಹಿಡಿದರು.ಇದನ್ನು ಫೋಟೋ ಎಲೆಕ್ಟ್ರಾನು ಎಂದು ಕರೆದರು
.ಇದರ ಪರಿಣಾಮವನ್ನು ದ್ಯುತಿ
ವಿದ್ಯುತ್ ಪರಿಣಾಮ ಎಂದರು.ಇದಕ್ಕಾಗಿ 1921ರಲ್ಲಿ ನೋಬೆಲ್ ಪ್ರಶಸ್ತಿ ಪಡೆದರು.
No comments:
Post a Comment