ಸೈನಾ ನೆಹ್ವಾಲ್ |
ಮಾರ್ಚ್-8,ಅಂತರಾಷ್ಟ್ರೀಯ ಮಹಿಳಾ ದಿನ
‘ಯತ್ರ ನಾರ್ಯಸ್ತು ಪೂಜ್ಯಂತೇ ತತ್ರ ರಮಂತೇ ದೇವತಾ:’ಎಂಬ ಮಾತಿನಂತೆ,
ಎಲ್ಲಿ ಮಹಿಳೆಯನ್ನು ಪೂಜಿಸಲ್ಪಡುತ್ತದೋ, ಗೌರವಿಸಲ್ಪಡುತ್ತದೋ, ಅಲ್ಲಿ ದೇವತೆಗಳು ನೆಲೆಸಿರುತ್ತಾರೆ,ಎಂಬುದರ ಹಿಂದೆ ಪ್ರಚೀನ ಕಾಲ ದಿಂದಲೇ
ನಾರಿಯರಿಗೆ ಕೊಡಲ್ಪಡುವ ಸ್ಥಾನವನ್ನು ತಿಳಿಯ ಬಹುದಾಗಿದೆ.
ವಿಶ್ವ ಸಂಸ್ಥೆಯು,2015ರ
ಘೋಷಣಾ ವಾಕ್ಯವಾಗಿ ಮಹಿಳಾ ಸಬಲೀಕರಣ-ಮಾನವೀಯತೆಯ
ಸಬಲೀಕರಣ,ಅದನ್ನು ಚಿತ್ರಿಸಿ ಎಂಬುದನ್ನು ಆಯ್ಕೆ ಮಾಡಿದೆ. ಈ ಘೋಷಣಾ ವಾಕ್ಯದ ಹಿಂದೆ
ಅಗಾಧವಾದ ಮಹಿಳಾ ಪರ ಕಾಳಜಿಯನ್ನು ಕಾಣಬಹುದು.
ಪ್ರತಿ ಹೆಣ್ಣು ಮಗು ತನ್ನ
ಆಯ್ಕೆಯನ್ನು ತಾನೇ ಮಾಡಲಿ ಎನ್ನುವ ಈ ಕಾಳಜಿ,ರಾಜಕೀಯ, ಶಿಕ್ಷಣ,ಆರ್ಥಿಕ ಸ್ವಾವ ಲಂಬನೆ ಹಾಗೂ
ಹಿಂಸೆ ,ಅಸಮಾನತೆಯಿಂದ ಮುಕ್ತವಾದ ಸಮಾಜದಲ್ಲಿ ವಾಸಿಸುವ ಎಲ್ಲ ಅವಕಾಶಗಳು ಆಕೆಗೆ ಲಭ್ಯವಾಗಲಿ
ಎಂದು ಆಶಿಸೋಣ.
ಮಹಿಳಾ ದಿನದ ಶುಭಾಶಯಗಳು
‘
No comments:
Post a Comment