Flash1

ಚೇವಾರು ಶಾಲಾ ಬ್ಲಾಗಿಗೆ ಸ್ವಾಗತ.....WELCOME TO CHEVAR SCHOOL BLOG.....ಚೇವಾರು ಶಾಲಾ ಬ್ಲಾಗಿಗೆ ಸ್ವಾಗತ......WELCOME TO CHEVAR SCHOOL BLOG..

2FLASH NEWS

2021-22ನೇ ಶೈಕ್ಷಣಿಕ ವರ್ಷಕ್ಕೆ ಹಾರ್ದಿಕ ಸ್ವಾಗತಗಳು-ಶಾಲಾ ಅಭಿವೃದ್ದಿಗೆ ಸಹಕರಿಸುತ್ತಿರುವ ಎಲ್ಲಾ ರಕ್ಷಕರಿಗೆ,ವಿದ್ಯಾಭಿಮಾನಿಗಳಿಗೆ ಅಭಿನಂದನೆಗಳು. Visit us.Thank you

Monday, January 2, 2017

OLD STUDENT'S MEETING 2016-17

ಶಾಲಾ ಹಳೆ ವಿದ್ಯಾರ್ಥಿ ಸಂಘ ರೂಪೀಕರಣ ಸಮಾವೇಶ
ದಿನಾಂಕ:22-12-2016,   ಸಮಯ:2 pm
ಸ್ಥಳ: ಚೇವಾರು ಶಾಲಾ ಸಭಾಂಗಣ
ಪ್ರಿಯರೇ,
              ಚೇವಾರು ಶ್ರೀ ಶಾರದಾ ಎ.ಯು.ಪಿ.ಶಾಲೆಯು,ಶತಮಾನದ ಇತಿಹಾಸವುಳ್ಳ  ವಿದ್ಯಾಸಂಸ್ಥೆಯಾಗಿದ್ಧು,ಇಲ್ಲಿ ಸಾವಿರಾರು ಮಂದಿ,ಉತ್ತಮ ಶಿಕ್ಷಣ ಪಡೆದು,ಶೈಕ್ಷಣಿಕ,ಧಾರ್ಮಿಕ,ಸಾಂಸ್ಕೃತಿಕ ಹೀಗೆ ವಿವಿಧ ಕ್ಷೇತ್ರಗಳಲ್ಲಿ ಗಣ್ಯ ಸೇವೆಯನ್ನು ಸಲ್ಲಿಸುತ್ತಾ ಶಾಲೆಯ ಕೀರ್ತಿಯನ್ನು ಬೆಳಗಿಸುತ್ತಿದ್ದಾರೆ.ಒಂದು ವಿದ್ಯಾಸಂಸ್ಥೆಯ ಅಭಿವೃದ್ಧಿ ಎಂದರೆ ಊರಿನ ಅಭಿವೃದ್ಧಿಯಾಗಿದೆ.ಈ ನಿಟ್ಟಿನಲ್ಲಿ ಈ ವಿದ್ಯಾಸಂಸ್ಥೆಯನ್ನು ಸರ್ವತೋಮುಖ ಅಭಿವೃದ್ಧಿಗೊಳಿಸಬೇಕೆಂಬುದು ಈ ಶಾಲೆಯ ಹಳೆ ವಿದ್ಯಾರ್ಥಿಗಳ ಮತ್ತು ಹಿತೈಷಿಗಳ ಚಿರಕಾಲದ ಅಭಿಲಾಷೆಯಾಗಿದೆ.ಆದುದರಿಂದ ಅದಕ್ಕೊಂದು ಸೂಕ್ತ ವೇದಿಕೆಯನ್ನು ನೀಡಿ,ಹಳೆ ವಿದ್ಯಾರ್ಥಿಗಳ ಸಂಘವನ್ನು ರೂಪಿಸುವರೇ,ಇದೇ ಬರುವ 22-12-2016ರಂದು ಗುರುವಾರ ಮಧ್ಯಾಹ್ನ 2 ಗಂಟೆಗೆ ಸರಿಯಾಗಿ ಶಾಲಾ ಸಭಾಂಗಣದಲ್ಲಿ ಸಭೆಯನ್ನು ಆಯೋಜಿಸಲಾಗಿದೆ.ತಾವೆಲ್ಲರೂ ಭಾಗವಹಿಸಿ ಸಭೆಯನ್ನು ಯಶಸ್ವಿಗೊಳಿಸಬೇಕಾಗಿ ವಿನಂತಿಸುತ್ತೇವೆ.
ಅಧ್ಯಕ್ಷರು ಮತ್ತು ಸದಸ್ಯರು                                                                                                   ಮುಖ್ಯೋಪಾಧ್ಯಾಯರು
ರಕ್ಷಕ ಶಿಕ್ಷಕ ಸಂಘ ಮತ್ತು ಮಾತೃರಕ್ಷಕ ಶಿಕ್ಷಕ ಸಂಘ                                                                           ಮತ್ತು ಶಿಕ್ಷಕ ವೃಂದ
ದಿನಾಂಕ:15-12-2016



ಶಾಲಾ ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷರಾಗಿ ಶ್ರೀ ಕುಮಾರ ಸುಬ್ರಹ್ಮಣ್ಯ ಭಟ್ ಕೊಂದಲಕಾಡು ಹಾಗೂ ಕಾರ್ಯದರ್ಶಿಯಾಗಿ ಶ್ರೀ ವಿನೋದ್ ಚೇವಾರು ಆಯ್ಕೆಯಾದರು.

ಪ್ರಾಸ್ತಾವಿಕ ಭಾಷಣ-ಶಾಲಾ ಮುಖ್ಯ ಶಿಕ್ಷಕ ಶ್ಯಾಮ ಭಟ್ ರಿಂದ

ಶುಭ ಹಾರೈಕೆ-ಮಾಜಿ ಪಂಚಾಯತ್ ಅಧ್ಯಕ್ಷರಾದ ಶ್ರೀ ಅಚ್ಯುತ ಚೇವಾರ್ ಅವರಿಂದ

ಜೀವ ಕಾರುಣ್ಯ ಪದ್ಧತಿ ಅಂಗವಾಗಿ ಉಚಿತ ಕಿಟ್ ವಿತರಣೆ-ಶ್ರೀ ಕುಮಾರ ಸುಬ್ರಹ್ಮಣ್ಯ ಕೊಂದಲಕಾಡು ಅವರಿಂದ

No comments:

Post a Comment