ಚೇವಾರು ಶಾಲೆಯಲ್ಲಿ ಹಸಿರು ಕೇರಳ ಅಭಿಯಾನಕ್ಕೆ ಚಾಲನೆ
ಕೇರಳ ಸರಕಾರದ ಮಹತ್ವದ
ಯೋಜನೆಯಾದ ಹಸಿರು ಕೇರಳಅಭಿಯಾನದ ಅಂಗವಾಗಿ,ದಿನಾಂಕ 8-12-2016ರಂದುಶಾಲೆಯಲ್ಲಿ ವಿಶೇಷ
ಎಸಂಬ್ಲಿಯನ್ನು ಏರ್ಪಡಿಸಲಾಯಿತು.ಹಸಿರು ಕೇರಳ ಯೋಜನೆಯ ಮಹತ್ವವನ್ನು ಶಾಲಾ ಮುಖ್ಯೋಪಾಧ್ಯಾಯರಾದ
ಶ್ಯಾಮ್ ಭಟ್ ವಿವರಿಸಿದರು.ಸ್ಕೌಟ್ ಅಧ್ಯಾಪಕರಾದ ವಿನೋದ್,ಘೋಷಣಾ ವಾಕ್ಯಗಳನ್ನು ಹೇಳಿದರು.ಈ ಸಂದರ್ಭದಲ್ಲಿ
ಪರಿಸರ ಸಂರಕ್ಷಣಾ ಪ್ರತಿಜ್ಞೆಯನ್ನು ಎಲ್ಲಾ ವಿದ್ಯಾರ್ಥಿಗಳು ಹಾಗೂ ಶಿಕ್ಷಕರುಕೈಗೊಂಡರು.
ಶಾಲಾ ಎಸೆಂಬ್ಲಿಯಲ್ಲಿ ಪರಿಸರ ಸಂರಕ್ಷಣಾ ಪ್ರತಿಜ್ಞೆ
ಹಸಿರು ಕೇರಳ ಜಾಥಾ
ಹಸಿರು ಕೇರಳ ಯೋಜನೆಯ
ಅಂಗವಾಗಿ ,ಶಾಲೆಯ ವಿದ್ಯಾರ್ಥಿಗಳಿಂದ ರಕ್ಷಕರಿಂದ ಶಿಕ್ಷಕರಿಂದ ಮೆರವಣಿಗೆಯನ್ನು
ಏರ್ಪಡಿಸಲಾಯಿತು. ಮುಖ್ಯ ಶಿಕ್ಷಕರಾದ ಶ್ಯಾಮ್ ಭಟ್ ಕಾರ್ಯಕ್ರಮವನ್ನು ಉದ್ಘಾಟಿಸಿದರು.ಪರಿಸರ
ಸಂರಕ್ಷಣಾ ಘೋಷಣೆ ಹಾಗೂ ವಿವಿಧ ಪ್ಲಕಾರ್ಡ್ ಗಳಿಂದ ಪರಿಸರ ಸಂರಕ್ಷಣೆ ಹಾಗೂ ಜಲ ಸಂರಕ್ಷಣೆ
ಕುರಿತು ಜನರಲ್ಲಿ ಜಾಗೃತಿಯನ್ನು ಮೂಡಿಸಲಾಯಿತು.
ಪರಿಸರ ಸಂರಕ್ಷಣಾ ಜಾಥಾದಲ್ಲಿ ಪಾಲ್ಗೊಂಡ ವಿದ್ಯಾರ್ಥಿಗಳು
ಹಸಿರು ಕೇರಳದ ಅಂಗವಾಗಿ ವಿಶೇಷ ಸ್ವಚ್ಛತಾ ಕಾರ್ಯಕ್ರಮ
ಹಸಿರು ಕೇರಳ ಯೋಜನೆಯ
ಅಂಗವಾಗಿ ,ಶಾಲೆಯ ವಿದ್ಯಾರ್ಥಿಗಳಿಂದ ರಕ್ಷಕರಿಂದ ಶಿಕ್ಷಕರಿಂದ ಶಾಲಾ ಪರಿಸರವನ್ನು
ಶುಚಿಗೊಳಿಸಲಾಯಿತು.ಸ್ಕೌಟ್ ಹಾಗೂ ಗೈಡ್ ವಿದ್ಯಾರ್ಥಿಗಳು ನೇತೃತ್ವವನ್ನು ವಹಿಸಿದರು.
No comments:
Post a Comment