ಚೇವಾರಿನಲ್ಲಿ ಜೀವ ಕಾರುಣ್ಯಪದ್ಧತಿ ಅಂಗವಾಗಿ ಓಣಂ ಕಿಟ್
ವಿತರಣೆ
ಚೇವಾರು ಶ್ರೀ ಶಾರದಾ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಓಣಂ ಹಬ್ಬಾಚರಣೆಯ ಅಂಗವಾಗಿ,ಶಾಲಾ
ವಿದ್ಯಾರ್ಥಿಗಳಿಂದ,ಆರ್ಥಿಕವಾಗಿ ಹಿಂದುಳಿದ ಕುಟುಂಬದ ವಿದ್ಯಾರ್ಥಿಗಳಿಗೆ ಓಣಂ ಕಿಟ್ ಗಳನ್ನು
ವಿತರಿಸಲಾಯಿತು.ಕಾರ್ಯಕ್ರಮವನ್ನು ಪೈವಳಿಕೆ ಪಂಚಾಯತಿನ ಅಧ್ಯಕ್ಷೆ ಶ್ರೀಮತಿ ಭಾರತಿ.ಜೆ,ಶೆಟ್ಟಿ
ಉಧ್ಘಾಟಿಸಿ,ಕಿಟ್ ಗಳನ್ನು ಫಲಾನುಭವಿಗಳಿಗೆ ಹಸ್ತಾಂತರಿಸಿದರು. ಪೈವಳಿಕೆ ಪಂಚಾಯತು ಸದಸ್ಯರಾದ
ಹರೀಶ್ ಬೊಟ್ಟಾರಿ, ರಕ್ಷಕ ಶಿಕ್ಷಕ ಸಂಘದ ಉಪಾಧ್ಯಕ್ಷರಾದ ಕುಮಾರ ಸುಬ್ರಹ್ಮಣ್ಯ, ಶಾಲಾ ಮುಖ್ಯ
ಶಿಕ್ಷಕರಾದ ಶ್ಯಾಮ ಭಟ್ ಉಪಸ್ಥಿತರಿದ್ದರು.
No comments:
Post a Comment