ಶಾಲೆಯಲ್ಲಿ ಓಣಂ ಸಂಭ್ರಮ
ವಿದ್ಯಾರ್ಥಿಗಳಿಂದ ಹೂವಿನ ರಂಗವಲ್ಲಿ ರಚನೆ |
ವಿವಿಧ ವೇಷಧಾರಿ ಪುಟಾಣಿಗಳು |
ಓಣಂ ಭೋಜನ |
ಚೇವಾರಿನಲ್ಲಿ ಓಣಂ ಆಚರಣೆ
ಚೇವಾರು ಶ್ರೀ ಶಾರದಾ
ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಓಣಂ ಹಬ್ಬವನ್ನು ವಿವಿಧ ಕಾರ್ಯಕ್ರಮಗಳೊಂದಿಗೆ ಆಚರಿಸಲಾಯಿತು.
ಶಾಲಾ ರಕ್ಷಕ ಶಿಕ್ಷಕ
ಸಂಘದ ಅಧ್ಯಕ್ಷೆ ಇಂದಿರಾ ಮಿತ್ತಡ್ಕ ಕಾರ್ಯಕ್ರಮ ಉದ್ಘಾಟಿಸಿದರು.ಶಾಲಾ ಮುಖ್ಯ ಶಿಕ್ಷಕ ಶ್ಯಾಮ
ಭಟ್,ಹಬ್ಬಗಳನ್ನು ಆಚರಿಸುವ ಮೂಲಕ,ಸಮಾಜದಲ್ಲಿ ಶಾಂತಿ,ಸಹಬಾಳ್ವೆ,ಸಾಮರಸ್ಯ ಉಂಟಾಗುತ್ತದೆ ಎಂದು
ಅಭಿಪ್ರಾಯಪಟ್ಟರು. ಶಾಲೆಯಲ್ಲಿ ಓಣಂ ಹಬ್ಬವನ್ನು
ಸಂಭ್ರಮ,ಸಡಗರದಿಂದ ವೈವಿಧ್ಯಪೂರ್ಣವಾಗಿ ಆಚರಿಸಲಾಯಿತು.ವಿಶೇಷ ಎಸೆಂಬ್ಲಿ ನಡೆಸಿ
ಹಬ್ಬದ,ಹಿನ್ನೆಲೆ,ಮಹತ್ವವನ್ನು ವಿವರಿಸಲಾಯಿತು.
ಎಲ್ಲಾ
ತರಗತಿಗಳಲ್ಲಿ,ವಿದ್ಯಾರ್ಥಿ,ವಿದ್ಯಾರ್ಥಿನಿಯರು,ಆಕರ್ಷಕವಾದ ಪೂಕಳಂನ್ನು ರಚಿಸಿದರು.ಇದೇ
ಸಮಯದಲ್ಲಿ ಮಹಾಬಲಿ ಚಕ್ರವರ್ತಿಯ ಆಗಮನವಾಯಿತು.ಇವರನ್ನು
ಸ್ವಾಗತಿಸಲು,ಗೋಪಿಕಾಸ್ತ್ರೀಯರು,ಗೋಪಾಲಕರು,ಮೌಲ್ವಿಗಳು,ಸನ್ಯಾಸಿಗಳು,ಪಾದ್ರಿಗಳು,ನರಸಣ್ಣರು,ಆಟಿಕಳಂಜರು,ಯಕ್ಷರು,ಗಂಧರ್ವರ
ಗಡಣವೇ ಶಾಲೆಯಲ್ಲಿ ಸೇರಿತ್ತು..ಮಹಾಬಲಿ ಚಕ್ರವರ್ತಿಯು , ಎಲ್ಲಾ ತರಗತಿಗಳಿಗೂ ಭೇಟಿಕೊಟ್ಟು
ಕ್ಷೇಮ ಸಮಾಚಾರವನ್ನು ವಿಚಾರಿಸಿದರು ಹೂವಿನ ರಂಗವಲ್ಲಿಯ ಸುತ್ತಲೂ ,ಗೋಪಿಕಾ ಸ್ತ್ರೀಯರ ನೃತ್ಯ ಮನ
ಮೋಹಕ ವಾಗಿತ್ತು..ತದನಂತರ, ಪಾಯಸ,ಲಡ್ಡು, ಹಣ್ಣುಹಂಪಲುಗಳನ್ನೊಳಗೊಂಡ ಓಣಂ ಔತಣವನ್ನು ಮಹಾಬಲಿ
ಚಕ್ರವರ್ತಿಯೊಂದಿಗೆ ಎಲ್ಲರೂ ಸವಿದರು.ನಂತರ ಸಾಂಸ್ಕೃತಿಕ ಕಾರ್ಯಕ್ರಮ ಜರಗಿತು.
'ನಾವೆಲ್ಲರೂ ಒಂದೇ' ಎಂಬ ಸಂದೇಶದೊಂದಿಗೆ ಶೋಭಾಯಾತ್ರೆ |
No comments:
Post a Comment