ಚೇವಾರಿನಲ್ಲಿ ಇಂಗ್ಲಿಷ್-ಗಣಿತ ಸಬಲೀಕರಣ ಶಿಬಿರ
 |
ಪಂಚಾಯತು ಅಧ್ಯಕ್ಷೆ ಶ್ರೀಮತಿ ಭಾರತಿ.ಜೆ.ಶೆಟ್ಟಿಯವರಿಂದ ಉದ್ಘಾಟನೆ |
 |
ಶಿಬಿರದಲ್ಲಿ ಸಕ್ರಿಯವಾಗಿ ಭಾಗವಹಿಸುತ್ತಿರುವ ಪುಟಾಣಿಗಳು |
 |
ಚೇವಾರು ವಾರ್ಡ್ ಸದಸ್ಯರಾದ ಶ್ರೀ ಹರೀಶ್ ಬೊಟ್ಟಾರಿಯವರಿಂದ ಶುಭಾಶಂಸನೆ |
 |
ರಕ್ಷಕ ಶಿಕ್ಷಕ ಸಂಘದ ಉಪಾಧ್ಯಕ್ಷರಾದ, ಪೈವಳಿಕೆ ವಿದ್ಯುತ್ ಶಕ್ತಿ ನಿಗಮದ ಸಬ್ ಇಂಜಿನಿಯರ್ ಶ್ರೀ ಕುಮಾರ ಸುಬ್ರಹ್ಮಣ್ಯ ಕೊಂದಲಕಾಡು ಅವರಿಂದ ಶುಭಾಶಂಸನೆ |
ಚೇವಾರು ಶ್ರೀ ಶಾರದಾ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಇಂಗ್ಲಿಷ್-ಗಣಿತ ಸಬಲೀಕರಣ ಶಿಬಿರವು
ಶಾಲಾ ಸಭಾಂಗಣದಲ್ಲಿ ಜರಗಿತು.ಶಿಬಿರವನ್ನು ಪೈವಳಿಕೆ ಪಂಚಾಯತಿನ ಅಧ್ಯಕ್ಷೆ ಶ್ರೀಮತಿ
ಭಾರತಿ.ಜೆ,ಶೆಟ್ಟಿ ಉಧ್ಘಾಟಿಸಿದರು. ಮಕ್ಕಳನ್ನು,ಇಂದಿನ ಸ್ಪರ್ಧಾತ್ಮಕ ಜಗತ್ತಿಗೆ
ಹೊಂದಿಕೊಳ್ಳುವಂತೆ ಮಾಡಲು ಇಂತಹ ಶಿಬಿರಗಳು ಪೂರಕ ಎಂದು ಅಭಿಪ್ರಾಯಪಟ್ಟರು. ಸಭೆಯ ಅಧ್ಯಕ್ಷ
ಸ್ಥಾನ ವಹಿಸಿ,ಮಾತನಾಡಿದ ರಕ್ಷಕ ಶಿಕ್ಷಕ ಸಂಘದ ಉಪಾಧ್ಯಕ್ಷರಾದ ಕುಮಾರ ಸುಬ್ರಹ್ಮಣ್ಯ,ಮಕ್ಕಳು
ಇಂತಹ ಶಿಬಿರಗಳಲ್ಲಿ ಸಕ್ರಿಯವಾಗಿ ಭಾಗವಹಿಸಿ,ಶಿಬಿರವನ್ನು ಸದುಪಯೋಗಪಡಿಸಬೇಕೆಂದು
ಕರೆಕೊಟ್ಟರು.ಮುಖ್ಯ ಅತಿಥಿಗಳಾಗಿ ಭಾಗವಹಿಸಿರುವ ಪೈವಳಿಕೆ ಪಂಚಾಯತು ಸದಸ್ಯರಾದ ಹರೀಶ್
ಬೊಟ್ಟಾರಿಯವರು ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.ಶಾಲಾ ಮುಖ್ಯ ಶಿಕ್ಷಕರಾದ ಶ್ಯಾಮ ಭಟ್
ಪ್ರಾಸ್ತಾವಿಕ ನುಡಿಗಳನ್ನಾಡಿ ಅತಿಥಿಗಳನ್ನು ಸ್ವಾಗತಿಸಿದರು.ಸಂಪನ್ಮೂಲ ವ್ಯಕ್ತಿಗಳಾದ
ಸರಸ್ವತಿ.ಬಿ.ವಿನೋದ್ ಚೇವಾರ್,ರಾಜೇಶ್ವರಿ.ಬಿ.ರವಿಕುಮಾರ್,ಪ್ರಸಾದ್ ರೈ,ಪ್ರಮೀಳಾ,ಪುಷ್ಪಲತ
ಶಿಬಿರವನ್ನು ನಡೆಸಿಕೊಟ್ಟರು.ರವಿಕುಮಾರ್ ವಂದಿಸಿದರು.ವಿನೋದ್ ಚೇವಾರ್ ಕಾರ್ಯಕ್ರಮವನ್ನು
ನಿರೂಪಿಸಿದರು.ವಿಜಯನ್,ಗೋಪಾಲಕೃಷ್ಣ ಭಟ್ ಸಹಕರಿಸಿದರು.
No comments:
Post a Comment