2016-17 ನೇ ಶೈಕ್ಷಣಿಕ ವರ್ಷಕ್ಕೆ ಹಾರ್ದಿಕ ಸ್ವಾಗತಗಳು
ಶಾಲಾ ಮಕ್ಕಳ ಪ್ರವೇಶೋತ್ಸವ-2016-17
|
ಶಾಲಾ ಪುಟಾಣಿಗಳಿಂದ,ರಕ್ಷಕರಿಂದ,ಶಿಕ್ಷಕರಿಂದ ಮೆರವಣಿಗೆ |
|
ವಾರ್ಡ್ ಸದಸ್ಯರಾದ ಶ್ರೀ ಹರೀಶ್ ಬೊಟ್ಟಾರಿಯವರಿಂದ,ಪ್ರವೇಶೋತ್ಸವದ ಸಭಾ ಕಾರ್ಯಕ್ರಮ ಉದ್ಘಾಟನೆ
ಚೇವಾರು ಶಾರದಾ
ಎ.ಯು.ಪಿ.ಶಾಲೆಯಲ್ಲಿ ಪ್ರವೇಶೋತ್ಸವ
ಚೇವಾರು ಶ್ರೀ ಶಾರದಾ ಎ.ಯು.ಪಿ ಶಾಲೆಯಲ್ಲಿ ,ನೂತನ ಶೈಕ್ಷಣಿಕ ವರ್ಷಕ್ಕೆ
ಚಿಣ್ಣರನ್ನು ಸಂಭ್ರಮದಿಂದ ಸ್ವಾಗತಿಸುವ,ಶಾಲಾ ಪ್ರವೇಶೋತ್ಸವವನ್ನು, ,ಪೈವಳಿಕೆ ಪಂಚಾಯತು
ಸದಸ್ಯರಾದ ಶ್ರೀ ಹರೀಶ್ ಬೊಟ್ಟಾರಿಯವರು ಉದ್ಘಾಟಿಸಿದರು.ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷೆ ಇಂದಿರಾ
ಮಿತ್ತಡ್ಕ,ಅಧ್ಯಕ್ಷ ಸ್ಥಾನ ವಹಿಸಿದರು.ಶ್ರೀ ಧರ್ಮ ಸ್ಥಳ ಗ್ರಾಮೀಣಾಧಿವೃದ್ಧಿ ಸಂಘದ ಸದಸ್ಯೆ
ಜಯಶ್ರೀ ಶುಭ ಹಾರೈಸಿದರು.ರಕ್ಷಕ ಶಿಕ್ಷಕ ಸಂಘದ ಸದಸ್ಯರಾದ ನೂರುದ್ದೀನ್ ಶುಭಾಶಂಸನೆ ಗೈದರು. ನವಾಗತ
ವಿದ್ಯಾರ್ಥಿಗಳಿಗೆ ಹರೀಶ್ ಬೊಟ್ಟಾರಿಯವರು ಕೊಡೆಗಳನ್ನು ಹಾಗೂ ಶಾಲಾ ವ್ಯವಸ್ಥಾಪಕ ಶ್ರೀ ನಾರಾಯಣ ಭಟ್,ಬ್ಯಾಗ್ ಗಳನ್ನು ಕೊಡುಗೆಯಾಗಿ
ನೀಡಿದರು.ಶಾಲಾ ಮಕ್ಕಳ ರಕ್ಷಕರು,ಶಿಕ್ಷಕರು ಹಾಗೂ ವಿದ್ಯಾರ್ಥಿಗಳಿಂದ
ಶೋಭಾಯಾತ್ರೆ ಜರಗಿತು.ಶಾಲಾ ಮುಖ್ಯ ಶಿಕ್ಷಕ ಶ್ಯಾಮ ಭಟ್ ಸ್ವಾಗತಿಸಿದರು.ಪ್ರಸಾದ್ ರೈ
ವಂದಿಸಿದರು. ವಿನೋದ್ ಚೇವಾರ್ ವಂದಿಸಿದರು.
|
No comments:
Post a Comment