ವಿಶ್ವ ಪರಿಸರ ದಿನಾಚರಣೆ-2016-17
|
ಸಭಾ ಕಾರ್ಯಕ್ರಮದ ಉದ್ಘಾಟನೆ ಶಾಲಾ ಮುಖ್ಯ ಶಿಕ್ಷಕ ಶ್ಯಾಮ ಭಟ್ ರಿಂದ |
|
ದಿನದ ಮಹತ್ವದ ಕುರಿತಾದ ವಿವರಣೆ ರವಿಕುಮಾರ್ ರಿಂದ |
|
ಧನ್ಯವಾದ ಸಮರ್ಪಣೆ ವಿದ್ಯಾರ್ಥಿನಿ ಕುಮಾರಿ ವಿಂದ್ಯಾ ಕೊಂದಲಕಾಡು ಅವರಿಂದ |
|
ದ್ವಿದಳ ವರ್ಷಾಚರಣೆ ಅಂಗವಾಗಿ ದ್ವಿ ದಳ ಧಾನ್ಯಗಳ ಪ್ರದರ್ಶನ -ವಿವರಣೆ ಪ್ರಸಾದ್ ರೈ ಯವರಿಂದ
ಚೇವಾರು ಶಾಲೆಯಲ್ಲಿ ವಿಶ್ವ ಪರಿಸರ ದಿನಾಚರಣೆ
ಚೇವಾರು ಶ್ರೀ ಶಾರದಾ
ಎ.ಯು.ಪಿ.ಶಾಲೆಯಲ್ಲಿ ವಿಶ್ವ ಪರಿಸರದಿನದ ಅಂಗವಾಗಿ ವಿವಿಧ ಕಾರ್ಯಕ್ರಮಗಳನ್ನು
ಹಮ್ಮಿಕೊಳ್ಳಲಾಯಿತು. ಸಭಾಕಾರ್ಯಕ್ರಮವನ್ನು ಶಾಲಾ ಮುಖ್ಯ ಶಿಕ್ಷಕ ಶ್ಯಾಮ ಭಟ್ ಉದ್ಘಾಟಿಸಿದರು.ಭೂಮಿಯ
ಮೇಲಿನ ಜೀವ ಸಂಕುಲದ ಉಳಿವಿಗೆ ಉತ್ತಮ ಪರಿಸರದ ಆವಶ್ಯಕತೆಯಿದೆ.ಮುಂದಿನ ತಲೆಮಾರಿಗಾಗಿ,ಪ್ರಕೃತಿ
ಸಂಪತ್ತನ್ನು ಉಳಿಸಿ ಬೆಳೆಸುವ ಮನೋಭಾವವನ್ನು ಎಳವೆಯಲ್ಲಿಯೇ ಬೆಳೆಸಬೇಕೆಂದು ಕರೆ ಕೊಟ್ಟರು. ಅಧ್ಯಕ್ಷ
ಸ್ಥಾನ ವಹಿಸಿ ಮಾತನಾಡಿದ ಶಾಲಾ ಶಿಕ್ಷಕಿ ಸರಸ್ವತಿ,ನಮ್ಮ ಪರಿಸರವನ್ನು ಉಳಿಸಿ ಬೆಳೆಸುವ
ಜವಾಬ್ದಾರಿ ನಮ್ಮೆಲ್ಲರದ್ದು,ಒಂದು ಮರ ಕಡಿದಲ್ಲಿ ಹತ್ತು ಗಿಡಗಳನ್ನು ನೆಟ್ಟು ಬೆಳೆಸಬೇಕು,ಆಗ
ಮಾತ್ರ ಜೀವ ಸಂಕುಲದ ಅಭಿವೃದ್ಧಿ ಸಾಧ್ಯ ಎಂದು ಅಭಿಪ್ರಾಯಪಟ್ಟರು. ವಿನೋದ್ ಚೇವಾರು ಗಿಡಗಳನ್ನು
ನೆಟ್ಟು ಬೆಳೆಸುವ ಕುರಿತಾದ ಮಾಹಿತಿ ನೀಡಿದರು.ಶಿಕ್ಷಕಿ ರಾಜೇಶ್ವರಿ ಹಾಗೂ ಪ್ರಸಾದ್ ರೈ ದ್ವಿದಳ
ಧಾನ್ಯಗಳ ಕುರಿತು ವಿವರಿಸಿದರು.ರವಿ ಕುಮಾರ್,ಪ್ರಮೀಳಾ,ಪುಷ್ಪಲತಾ ಸಹಕರಿಸಿದರು.ಪರಿಸರ ಕುರಿತಾದ
ರಸಪ್ರಶ್ನೆ ಸ್ಪರ್ಧೆ,ಪ್ರಬಂಧ ಮಂಡನೆ,ಪರಿಸರ ಜಾಗೃತಿ ಜಾಥಾ,ಗೀತೆ,ಕಿರು ನಾಟಕ ಮುಂತಾದವುಗಳನ್ನು
ಏರ್ಪಡಿಸಲಾಯಿತು..ಮಿಥುನ್ ಸ್ವಾಗತಿಸಿದನು.ವಿಂಧ್ಯಾ ವಂದಿಸಿದಳು.ಜ್ಯೋತಿಕಾ ಕಾರ್ಯಕ್ರಮ
ನಿರೂಪಿಸಿದಳು | | | | | | | | | | | | |
|
|
No comments:
Post a Comment