ವಾಚನಾ ಸಪ್ತಾಹದ ಉದ್ಘಾಟನಾ ಸಮಾರಂಭ
ಚೇವಾರಿನಲ್ಲಿ ವಾಚನಾ ಸಪ್ತಾಹದ ಉದ್ಘಾಟನೆ
ಚೇವಾರು ಶ್ರೀ ಶಾರದಾ ಹಿರಿಯ ಪ್ರಾಥಮಿಕ ಶಾಲೆಯಲ್ಲಿ,ದಿ.ಪಿ.ಎನ್.ಪಣಿಕ್ಕರ್ ರವರ ಸ್ಮರಣಾರ್ಥ
ನಡೆಯುವ ಓದುವ ವಾರಾಚರಣೆಯ ಉದ್ಘಾಟನಾ ಸಮಾರಂಭ
ಶಾಲಾ ಸಭಾಂಗಣದಲ್ಲಿ ಜರಗಿತು.ಸಭೆಯ ಅಧ್ಯಕ್ಷತೆಯನ್ನು ಶಾಲಾ ಮುಖ್ಯ ಶಿಕ್ಷಕ ಶ್ಯಾಮ ಭಟ್
ವಹಿಸಿದರು.ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷೆ ಇಂದಿರಾ ಮಿತ್ತಡ್ಕ,ಕಾರ್ಯಕ್ರಮವನ್ನು ದೀಪ ಬೆಳಗಿಸಿ
ಉದ್ಘಾಟಿಸಿ,ನಮ್ಮಲ್ಲಿ ಶಾಶ್ವತವಾಗಿ ಉಳಿಯುವ ಸಂಪತ್ತು ಎಂದರೆ ಜ್ಞಾನ.ಅದನ್ನು ಪುಸ್ತಕಗಳನ್ನು
ಓದುವ ಮೂಲಕ ಪಡೆಯಬಹುದೆಂದು ಅಭಿಪ್ರಾಯ ಪಟ್ಟರು.ಶಿಕ್ಷಕಿ
ಸುಬೈದಾ ಎಂ.ಪಿ ಹಾಗೂ ಪ್ರಮೀಳಾ ಮುಖ್ಯಅತಿಥಿಗಳಾಗಿ
ಭಾಗವಹಿಸಿ,ಶುಭ ಹಾರೈಸಿದರು. ಸ್ಕೌಟ್ ಅಧ್ಯಾಪಕ ವಿನೋದ್ ಮಾಸ್ಟರ್, ಸ್ಟಾಫ್ ಕಾರ್ಯದರ್ಶಿ,ರವಿ
ಕುಮಾರ್, ವಿಜಯನ್,ಪುಷ್ಪಲತಾ
ಓದಿನ ಮಹತ್ವವನ್ನು ವಿವರಿಸಿದರು.
ವಾಚನಾ ವಾರದ ಅಂಗವಾಗಿ ಪುಸ್ತಕ ಪ್ರದರ್ಶನ ಏರ್ಪಡಿಸಲಾಯಿತು.ವಿದ್ಯಾರ್ಥಿಗಳಿಗೆ ವಿವಿಧ
ಪುಸ್ತಕಗಳನ್ನು ವಿತರಿಸಲಾಯಿತು. ಶಿಕ್ಷಕಿ
ಸರಸ್ವತಿ ಸ್ವಾಗತಿಸಿದರು.ಪ್ರಸಾದ್ ವಂದಿಸಿದರು. ರಾಜೇಶ್ವರಿ ಕಾರ್ಯಕ್ರಮ ನಿರೂಪಿಸಿದರು.
No comments:
Post a Comment