Flash1

ಚೇವಾರು ಶಾಲಾ ಬ್ಲಾಗಿಗೆ ಸ್ವಾಗತ.....WELCOME TO CHEVAR SCHOOL BLOG.....ಚೇವಾರು ಶಾಲಾ ಬ್ಲಾಗಿಗೆ ಸ್ವಾಗತ......WELCOME TO CHEVAR SCHOOL BLOG..

2FLASH NEWS

2021-22ನೇ ಶೈಕ್ಷಣಿಕ ವರ್ಷಕ್ಕೆ ಹಾರ್ದಿಕ ಸ್ವಾಗತಗಳು-ಶಾಲಾ ಅಭಿವೃದ್ದಿಗೆ ಸಹಕರಿಸುತ್ತಿರುವ ಎಲ್ಲಾ ರಕ್ಷಕರಿಗೆ,ವಿದ್ಯಾಭಿಮಾನಿಗಳಿಗೆ ಅಭಿನಂದನೆಗಳು. Visit us.Thank you

Thursday, August 25, 2016

AWARDS

SAT ಮಂಜೇಶ್ವರ ಶಾಲೆಯಲ್ಲಿ ಜರಗಿದ ಜಿಲ್ಲಾಮಟ್ಟದ ಸಂಸ್ಕೃತೋತ್ಸವದಲ್ಲಿ ಭಾಗವಹಿಸಿ ಸಂಸ್ಕೃತ ರಸ ಪ್ರಶ್ನೆಸ್ಪರ್ಧೆಯಲ್ಲಿ ತೃತೀಯ ಸ್ಥಾನ ಪಡೆದ ನಮ್ಮ ಶಾಲಾ ವಿದ್ಯಾರ್ಥಿನಿಯರಾದ ಜ್ಯೋತಿಕಾ ಸಿ.ಟಿ.ಹಾಗೂ ಪೂರ್ಣಿಮಾ ಕೆ.ಯಂ.

Tuesday, August 23, 2016

SPECIAL ASSEMBLY

70ನೇ ಸ್ವಾತಂತ್ರ್ಯೋತ್ಸವ ವಾರಾಚರಣೆಯ ವಿಶೇಷ ಎಸೆಂಬ್ಲಿ
ಪ್ರತಿಜ್ಞೆ


ಘೋಷಣಾ ವಾಕ್ಯ

70ನೇ ಸ್ವಾತಂತ್ರ್ಯೋತ್ಸವ ವಾರಾಚರಣೆಯ ವಿಶೇಷ ಎಸೆಂಬ್ಲಿಯನ್ನು, 11ಗಂಟೆಗೆ ಸರಿಯಾಗಿ ಶಾಲೆಯಲ್ಲಿ ನಡೆಸಲಾಯಿತು.ದಿನದ ಮಹತ್ವವನ್ನು ಸ್ಕೌಟ್ ಅಧ್ಯಾಪಕರಾದ ವಿನೋದ್ ಚೇವಾರು ವಿವರಿಸಿದರು.ಪ್ರತಿಜ್ಞಾ ವಿಧಿಯನ್ನು ಬೋಧಿಸಲಾಯಿತು.ರಾಷ್ಟ್ರ ಗೀತೆಯೊಂದಿಗೆ ಮುಕ್ತಾಯಗೊಂಡಿತು.

Thursday, August 18, 2016

Wednesday, August 17, 2016

INDEPENDENCE DAY CELEBRATION

70ನೇ ಸ್ವಾತಂತ್ರ್ಯೋತ್ಸವದ ಆಚರಣೆ


ಚೇವಾರು ಶಾಲೆಯಲ್ಲಿ ಸ್ವಾತಂತ್ರ್ಯ ದಿನಾಚರಣೆ
ಚೇವಾರು ಶ್ರೀ ಶಾರದಾ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 70ನೇ ಸ್ವಾತಂತ್ರ್ಯೋತ್ಸವವನ್ನು ವಿವಿಧ ಕಾರ್ಯಕ್ರಮಗಳೊಂದಿಗೆ ಆಚರಿಸಲಾಯಿತು.ಪೈವಳಿಕೆ ಪಂಚಾಯತು ಸದಸ್ಯರಾದ ಹರೀಶ್ ಬೊಟ್ಟಾರಿಯವರು ಧ್ವಜಾರೋಹಣಮಾಡಿ ಜಾತಿ ಮತ ಭೇದವಿಲ್ಲದೆ ಎಲ್ಲರೂ ಎಳವೆಯಲ್ಲಿಯೇ ದೇಶಪ್ರೇಮವನ್ನು ಬೆಳೆಸುವ ಮೂಲಕ ಸುಭದ್ರವಾದ ದೇಶವನ್ನು ಕಟ್ಟಬೇಕೆಂದು ಕರೆ ನೀಡಿದರು.ಪೈವಳಿಕೆ ಪಂಚಾಯತಿನ ಮಾಜಿ ಅಧ್ಯಕ್ಷರಾದ ಅಚ್ಯುತ ಚೇವಾರ್ ಮುಖ್ಯ ಅತಿಥಿಗಳಾಗಿ ಭಾಗವಹಿಸಿ,ಆಧುನಿಕ ತಂತ್ರಜ್ಞಾನವನ್ನು ದೇಶದ ಒಳಿತಿಗಾಗಿ ಬಳಸುವ ಮೂಲಕ ದೇಶದ ಅಖಂಡತೆಯನ್ನು ಉಳಿಸಿ ಬೆಳೆಸಬಹುದೆಂದು ಅಭಿಪ್ರಾಯಪಟ್ಟರು.ಮಾಜಿ ವಾರ್ಡ್ ಸದಸ್ಯೆ ಸುಬೈದಾ ಯಂ.ಪಿ.ಶುಭಹಾರೈಸಿದರು.ಶಾಲಾ ಮುಖ್ಯೋಪಾಧ್ಯಾಯರು ಪ್ರಾಸ್ತಾವಿಕ ನುಡಿಗಳನ್ನಾಡಿದರು.ಬಳಿಕ ಆಕರ್ಷಕ ಸ್ವಾತಂತ್ರ್ಯೋತ್ಸವ ಮೆರವಣಿಗೆ,ಸ್ವಾತಂತ್ರ್ಯ ಸಂಗ್ರಾಮದ ವೀಡಿಯೋ ಪ್ರದರ್ಶನ ಹಾಗೂ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಜರಗಿದವು.ಮುಖ್ಯ ಶಿಕ್ಷಕರು ಸ್ವಾಗತಿಸಿ ರಾಜೇಶ್ವರಿ ವಂದಿಸಿದರು.ಪ್ರಸಾದ್ ರೈ ಕಾರ್ಯಕ್ರಮ ನಿರೂಪಿಸಿದರು.
ಸಾಂಸ್ಕೃತಿಕ ಕಾರ್ಯಕ್ರಮ-ಪುಟಾಣಿಗಳಿಂದ

ಸಾಂಸ್ಕೃತಿಕ ಕಾರ್ಯಕ್ರಮ-ಪುಟಾಣಿಗಳಿಂದ

ಸಾಂಸ್ಕೃತಿಕ ಕಾರ್ಯಕ್ರಮ-ಪುಟಾಣಿಗಳಿಂದ

Friday, August 12, 2016

ENGLISH EMPOWERMENT INAUGURATION

ಚೇವಾರು ಶಾಲೆಯಲ್ಲಿ ಇಂಗ್ಲಿಷ್ ಹಾಗೂ ಗಣಿತ ಸಬಲೀಕರಣ ಕಾರ್ಯಕ್ರಮದ ಉದ್ಘಾಟನೆ
 
ಉದ್ಘಾಟನಾ ಭಾಷಣ-ಡಯಟ್ ಮಾಯಿಪ್ಪಾಡಿ ಉಪನ್ಯಾಸಕರಾದ ಡಾ.ರಘುರಾಮ ಭಟ್ ಅವರಿಂದ

ಚೇವಾರು ಶ್ರೀ ಶಾರದಾ ಹಿರಿಯ ಪ್ರಾಥಮಿಕ ಶಾಲೆಯಲ್ಲಿ,ಇಂಗ್ಲಿಷ್ ಹಾಗೂ ಗಣಿತ ವಿಷಯಗಳನ್ನು ಸರಳವಾಗಿ ಹಾಗೂ ರಸವತ್ತಾಗಿ ಕಲಿಸುವ  ವಿಶೇಷ ತರಬೇತಿ ಯೋಜನೆಯ ಉದ್ಘಾಟನಾ ಸಮಾರಂಭ ಇತ್ತೀಚೆಗೆ ಜರಗಿತು.ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಡಯಟ್ ಮಾಯಿಪ್ಪಾಡಿಯಉಪನ್ಯಾಸಕ ಡಾ.ರಘುರಾಮ ಭಟ್,ಇಂದಿನ ಸ್ಪರ್ಧಾತ್ಮಕ ಯುಗಕ್ಕೆ ಹೊಂದಿಕೊಳ್ಳಲು ವಿದ್ಯಾರ್ಥಿಗಳ ಸರ್ವತೋಮುಖ ಅಭಿವೃದ್ಧಿಯಾಗಬೇಕಾಗಿದ್ದು,ಇಂತಹ ತರಬೇತಿ ಯೋಜನೆಗಳು ಸಹಕಾರಿ ಎಂದು ಅಭಿಪ್ರಾಯಪಟ್ಟರು.ಪೈವಳಿಕೆ ಪಂಚಾಯತು ಸದಸ್ಯರಾದ  ಹರೀಶ್ ಬೋಟ್ಟಾರಿ,ಇಂಗ್ಲಿಷ್ ಹಾಗೂ ಗಣಿತದಂತಹ ಕಠಿಣ ವಿಷಯಗಳನ್ನು ಸರಳವಾಗಿ ಬೋಧಿಸಿ ವಿದ್ಯಾರ್ಥಿಗಳಿಗೆ ಮನದಟ್ಟುಮಾಡುವಲ್ಲಿ ಈ ಯೋಜನೆಯು ಪೂರಕವಾಗಿದೆ ಎಂದು ತಿಳಿಸಿದರು.ಮಂಜೇಶ್ವರ ಬಿ.ಆರ್.ಸಿ.ಯ ಪ್ರೋಗ್ರಾಂ ಆಫೀಸರ್ ಶ್ರೀಮತಿ ರೋಜಾ ಶುಭಹಾರೈಸಿದರು. ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷೆ ಇಂದಿರಾ ಮಿತ್ತಡ್ಕ ಅಧ್ಯಕ್ಷ ಸ್ಥಾನವಹಿಸಿದರು. ಪೈವಳಿಕೆ ಪಂಚಾಯತಿನ ಮಾಜಿ ಸದಸ್ಯೆ ಸುಬೈದಾ ಯಂ.ಪಿ,ರಕ್ಷಕ ಶಿಕ್ಷಕ ಸಂಘದ ಉಪಾಧ್ಯಕ್ಷ ಕುಮಾರಸುಬ್ರಹ್ಮಣ್ಯ ಉಪಸ್ಥಿತರಿದ್ದರು.ಶಾಲಾ ಮುಖ್ಯಶಿಕ್ಷಕ ಶ್ಯಾಮ ಭಟ್ ಸ್ವಾಗತಿಸಿ,ಯೋಜನೆಯ ರೂಪುರೇಷೆಯನ್ನು ವಿವರಿಸಿದರು.ಸ್ಟಾಫ್ ಕಾರ್ಯದರ್ಶಿ ರವಿಕುಮಾರ್ ಶಾಲಾ ಚಟುವಟಿಕೆಗಳ ಮಾಹಿತಿ ನೀಡಿದರು.ಶಿಕ್ಷಕಿ ಸರಸ್ವತಿ .ಬಿ.ವಂದಿಸಿದರು.ಸ್ಕೌಟ್ ಅಧ್ಯಾಪಕ ವಿನೋದ್ ಕಾರ್ಯಕ್ರಮ ನಿರೂಪಿಸಿದರು. ಶಿಕ್ಶಕಿ ರಾಜೇಶ್ವರಿ,ಪ್ರಸಾದ್ ರೈ,ವಿಜಯನ್,ಪ್ರಮೀಳಾ,ಪುಷ್ಪಲತಾ ಹಾಗೂ ಗೋಪಾಲಕೃಷ್ಣ ಭಟ್ ಸಹಕರಿಸಿದರು.

Tuesday, August 9, 2016

HIROSHIMA-NAGASAKHI day CELEBRATION,2016-17

ಚೇವಾರಿನಲ್ಲಿ ಹಿರೋಶಿಮಾ-ನಾಗಸಾಕಿ ದಿನಾಚರಣೆ


ಯುದ್ಧ ವಿರೋಧಿ ಕಿರು ನಾಟಕ ಪ್ರದರ್ಶನ

ಯುದ್ಧ ವಿರೋಧಿ ಮೆರವಣಿಗೆ




ಚೇವಾರು ಶ್ರೀ ಶಾರದಾ ಎ.ಯು.ಪಿ.ಶಾಲೆಯಲ್ಲಿ ಹಿರೋಶಿಮಾ-ನಾಗಸಾಕಿ ದಿನಾಚರಣೆಯನ್ನು ವಿವಿಧ ಕಾರ್ಯಕ್ರಮಗಳೊಂದಿಗೆ ಆಚರಿಸಲಾಯಿತು.ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಮಾಜಿ ಪಂಚಾಯತು ಸದಸ್ಯೆ ಸುಬೈದಾ ಎಂ.ಪಿ, ಶಾಂತಿ ಸಮಾಧಾನದ ಬಾಳ್ವೆ ನಮ್ಮ ಧ್ಯೇಯವಾಗಲಿ ಎಂದು ಕರೆಕೊಟ್ಟರು.ಅಧ್ಯಕ್ಷ ಸ್ಥಾನವನ್ನು ವಹಿಸಿದ ಪ್ರಭಾರ ಮುಖ್ಯ ಶಿಕ್ಷಕಿ ಸರಸ್ವತಿ.ಬಿ ದಿನದ ಮಹತ್ವವನ್ನು ವಿವರಿಸಿದರು.ಶಾಲಾ ಸಂಪನ್ಮೂಲ ಸಂಘದ ಕಾರ್ಯದರ್ಶು ರಾಜೇಶ್ವರಿ ಹಾಗೂ ಪ್ರಮೀಳಾ ಉಪಸ್ಥಿತರಿದ್ದರು.ವಿದ್ಯಾರ್ಥಿಗಳಿಂದ ಕಿರು ನಾಟಕ ಪ್ರದರ್ಶನ,ಪ್ರಬಂಧ ಮಂಡನೆ,ರಸಪ್ರಶ್ನೆ, ಯುದ್ಧ ವಿರೋಧಿ ಮೆರವಣಿಗೆ ಜರಗಿತು.ಸ್ಟಾಫ್ ಕಾರ್ಯದರ್ಶಿ ರವಿಕುಮಾರ್ ಸ್ವಾಗತಿಸಿ,ಪ್ರಸಾದ್ ರೈ ವಂದಿಸಿದರು.ಸ್ಕೌಟ್ ಅಧ್ಯಾಪಕ ವಿನೋದ್ ಚೇವಾರ್ ಕಾರ್ಯಕ್ರಮ ನಿರೂಪಿಸಿದರು.

ENGLISH MAGAZINE RELEASING PROGRAMME-2016-17

7ನೇ ತರಗತಿಯ ವಿದ್ಯಾರ್ಥಿಗಳು ಪಾಠಭಾಗದ ಅಂಗವಾಗಿ ತರಗತಿಯಲ್ಲಿ ಗುಂಪು ಚಟುವಟಿಕೆಯಲ್ಲಿ ತಯಾರಿಸಿದ ಇಂಗ್ಲಿಷ್ ಪತ್ರಿಕೆಗಳನ್ನು  ಶಾಲಾ ಮುಖ್ಯಶಿಕ್ಷಕ ಶ್ಯಾಮ ಭಟ್ ಬಿಡುಗಡೆಗೊಳಿಸಿದರು.

IRON FOLIC TABLET DISTRIBUTION

ಕಬ್ಬಿಣಂಶವುಳ್ಳ ಮಾತ್ರೆಗಳ ವಿತರಣೆ
ಕೇರಳ ಸರಕಾರದ ಆರೋಗ್ಯ ಇಲಾಖೆ ಒದಗಿಸಿಕೊಟ್ಟ Iron Folic Acid ಮಾತ್ರೆಗಳನ್ನು 6 ಮತ್ತು 7ನೇ ತರಗತಿಯ ಎಲ್ಲಾ ವಿದ್ಯಾರ್ಥಿ-ವಿದ್ಯಾರ್ಥಿನಿಯರಿಗೆ ವಾರಕ್ಕೆ ಒಂದು ಬಾರಿ ಕೊಡುವ ಕಾರ್ಯಕ್ರಮದ ಉದ್ಘಾಟನೆ ಜರಗಿತು.

Monday, August 8, 2016

INVITATION

S.S.A.U.P.SCHOOL CHEVAR
P.O.Kudalmerkala, PIN: 671324,E-Mail:chevar11264@gmail.com
                        INVITATION
ENGLISH & MATHEMATICS  EMPOWERMENT
TRAINING PROGRAMME:2016-17
INAUGURATION

On 11-8-2016,Thursday,2 pm at our school

Inuguration          : Shri Nandikeshan.N
                                 Assistant Educational Officer Manjeshwar. 
Presiding               : Indira Mithadka
                                    PTA President
Chief Guests         : Shri Harish Bottary.
                                 Ward member,Paivalike Grama Panchayath
                               : Dr.Raghurama Bhat
                                  Lecturer,DIET Maippady

WELCOME TO ALL
   




Student Club                       PTA& MPTA                           Headmaster& Staff
Members                              Members


   






AWARDS,2016-17

ಬಾಕ್ರಾಬೈಲು ಯು.ಪಿ.ಶಾಲೆಯಲ್ಲಿ ಜರಗಿದ ಉಪಜಿಲ್ಲಾ ಮಟ್ಟದ ಸಂಸ್ಕೃತೋತ್ಸವದಲ್ಲಿ ಭಾಗವಹಿಸಿ ಪ್ರಶಸ್ತಿಪತ್ರಗಳನ್ನು ಪಡೆದ ನಮ್ಮ ಶಾಲಾ ಎಲ್.ಪಿ.ವಿಭಾಗದ ವಿದ್ಯಾರ್ಥಿಗಳು 


VEGETABLE SEED DISTRIBUTION,2016-17

ವಿದ್ಯಾರ್ಥಿಗಳಿಗೆ ತರಕಾರಿ ಬೀಜ ವಿತರಣೆ

 ಪೈವಳಿಕೆ ಕೃಷಿ ಭವನ ಒದಗಿಸಿ ಕೊಟ್ಟ ತರಕಾರಿ ಬೀಜಗಳನ್ನು ಶಾಲೆಯ ಯು.ಪಿ.ವಿಭಾಗದ ಎಲ್ಲಾ ವಿದ್ಯಾರ್ಥಿ ವಿದ್ಯಾರ್ಥಿನಿಯರಿಗೆ ಶಾಲೆಯಲ್ಲಿ ವಿತರಿಸಲಾಯಿತು. ನಮ್ಮ ಮನೆ ಹಾಗೂ ಶಾಲೆಯ ಪರಿಸರದಲ್ಲಿ ತರಕಾರಿ ಬೆಳೆಸುವ ಅಗತ್ಯತೆಯ ಕುರಿತು ಶಾಲಾ ಮುಖ್ಯೋಪಾಧ್ಯಾಯರು ವಿವರಿಸಿದರು.