ಚೇವಾರು ಶಾಲೆಯಲ್ಲಿ ವಿಶ್ವ ಯೋಗ ದಿನಾಚರಣೆ
ಚೇವಾರು ಶ್ರೀ ಶಾರದಾ
ಹಿರಿಯ ಪ್ರಾಥಮಿಕ ಶಾಲೆಯಲ್ಲಿ ವಿಶ್ವ ಯೋಗ ದಿನದ ಅಂಗವಾಗಿ,ಯೋಗಾಸನ ಶಿಬಿರವನ್ನು
ಏರ್ಪಡಿಸಲಾಯಿತು.ಶಿಬಿರವನ್ನು ಉದ್ಘಾಟಿಸಿ ಮಾತನಾಡಿದ ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷೆ ಇಂದಿರಾ
ಮಿತ್ತಡ್ಕ,ಅವರು, ಆರೋಗ್ಯಕ್ಕಿಂತ ಮಿಗಿಲಾದ ಸಂಪತ್ತು ಬೇರೊಂದಿಲ್ಲ,ಅದನ್ನು ಕಾಪಾಡುವ
ನಿಟ್ಟಿನಲ್ಲಿ ಯೋಗಾಭ್ಯಾಸ ಸಹಕಾರಿಯಾಗಿದೆ,ಎಂದು ಅಭಿಪ್ರಾಯಪಟ್ಟರು.ಸಂಪನ್ಮೂಲ ವ್ಯಕ್ತಿಯಾಗಿ
ಶ್ರೀಮತಿ ರೇಖಾ ಗೋಪಾಲಕೃಷ್ಣ ಭಟ್ ಕಟ್ಟದಮನೆ ಅವರು ಭಾಗವಹಿಸಿ ಯೋಗ ಶಿಬಿರವನ್ನು
ನಡೆಸಿಕೊಟ್ಟರು.ಪ್ರಭಾರ ಮುಖ್ಯ ಶಿಕ್ಷಕಿ ಸರಸ್ವತಿ.ಬಿ.ಅಧ್ಯಕ್ಷತೆವಹಿಸಿದರು.ಸ್ಚಾಫ್
ಕಾರ್ಯದರ್ಶಿ ವಿನೋದ್ ಚೇವಾರ್ ಶುಭ ಹಾರೈಸಿದರು.ಪ್ರಮೀಳಾ ಸ್ವಾಗತಿಸಿದರು.ಶಿಕ್ಷಕ ರವಿಕುಮಾರ್
ವಂದಿಸಿದರು.ಪ್ರಸಾದ್ ರೈ ಕಾರ್ಯಕ್ರಮ ನಿರೂಪಿಸಿದರು.
No comments:
Post a Comment